ಬೆಂಗಳೂರಿಗೆ ಹೋಗಿ ವಾಪಸ್‌ ಮನೆಗೆ ಬಂದು ನೋಡಿದಾಗ ದುಡ್ಡು ಚಿನ್ನ ಎರಡು ಇಲ್ಲ

0

ಹಾಸನ: ಮನೆ ಬೀಗ ಮುರಿದು ಸುಮಾರು 1.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಾರಿಗುಡಿ ಬೀದಿ, ವಾಸಿ ಚಂದ್ರಮ್ಮ ಅವರ ಮಗ ಆನಂದನಿಗೆ ಬೈಕ್‌ನಲ್ಲಿ ಅಪಘಾತವಾಗಿದ್ದರಿಂದ ಮಗನನ್ನು ನೋಡಿಕೊಂಡು ಬರಲು ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದು ವಾಪಸ್‌ ಮನೆಗೆ ಬಂದು ನೋಡಿದಾಗ

ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. , ಮನೆಯ ಹಿಂಭಾಗದ ಬಾಗಿಲ ಬೀಗ ಮುರಿದು ಒಳಪ್ರವೇಶಿಸಿಸಿರುವ ಖದೀಮರು ಅಲ್ಮೆರಾವನ್ನು ಒಡೆದು ಸುಮಾರು

1,48,000 ರೂ. ಬೆಲೆಯ ಒಟ್ಟು 46 ಗ್ರಾಂ ತೂಕದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here