Home Breaking News ಆಟೋ ಚಾಲಕ ಸುಮಂತ್ (20) ವೀಲಿಂಗ್ ಮಾಡಲೋಗಿ ಜಗಳ ಹತ್ತಿಸಿಕೊಂಡು ಕೊಲೆಯಾದ ಯುವಕ

ಆಟೋ ಚಾಲಕ ಸುಮಂತ್ (20) ವೀಲಿಂಗ್ ಮಾಡಲೋಗಿ ಜಗಳ ಹತ್ತಿಸಿಕೊಂಡು ಕೊಲೆಯಾದ ಯುವಕ

0

ಹಾಸನ: ವೀಲಿಂಗ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾಸನದ ಗವೇನಹಳ್ಳಿಯಲ್ಲಿ ನಡೆದಿದೆ. ಆಟೋ ಚಾಲಕ ಸುಮಂತ್ (20) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. , ಹಾಸನ  ನಗರದ ನಿವಾಸಿ ಸುಮಂತ್ ಗವೇನಹಳ್ಳಿ ಬಳಿ ತನ್ನ ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಿದ್ದ. ವೀಲಿಂಗ್ ಮಾಡದಂತೆ ಗವೇನಹಳ್ಳಿ ಗ್ರಾಮದ ಯುವಕರು ಹೇಳಿದ್ದಾರೆ. ಇದೇ ವಿಚಾರಕ್ಕೆ ಸುಮಂತ್ ಹಾಗೂ ಗವೇನಹಳ್ಳಿ ಗ್ರಾಮದ ಯುವಕರ ನಡುವೆ

ಗಲಾಟೆ ಶುರುವಾಗಿದೆ. ಅಲ್ಲೇ ಇದ್ದ ಸ್ಥಳೀಯರು ಗಲಾಟೆ ಬಿಡಿಸಿ ಕಳುಹಿಸಿದ್ದರು , ಇಷ್ಟಕ್ಕೆ ಸುಮ್ಮನಾಗದ ಸುಮಂತ್ ಲಾಂಗ್ ಹಾಗೂ ಚಾಕುಗಳ ಜೊತೆ ತನ್ನ ಇಬ್ಬರು ಸ್ನೇಹಿತರನ್ನು ಕರೆದಕೊಂಡು ಗವೇನಹಳ್ಳಿಗೆ ಬಂದಿದ್ದಾನೆ. ವೀಲಿಂಗ್ ಮಾಡುವುದನ್ನು ತಡೆದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ

ಗ್ರಾಮದ ಪ್ರಜ್ವಲ್ ಮತ್ತು ಕೆಲವು ಯುವಕರು ಚಾಕು, ಲಾಂಗ್ ಕಿತ್ತುಕೊಂಡ ಸುಮಂತ್ ಎದೆ ಮತ್ತು ಹೊಟ್ಟೆಗೆ ಇರಿದಿದ್ದಾರೆ.

ಯುವಕ ಮೃತಪಟ್ಟಿದ್ದಾನೆ. , ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version