Channarayapattana

ತಾಯಿ ಯಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದ ಖದೀಮರಿಂದ ತಪ್ಪಿಸಿಕೊಂಡ ತಾಯಿ ಮಗ

By Hassan News

May 17, 2023

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಅಕ್ಕನಹಳ್ಳಿ ಕ್ರಾಸ್ ಬಳಿ ಸರಗಳ್ಳರು ಅಡ್ಡಹಾಕಿದ್ದರಿಂದ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ದ್ಯಾವಲಾಪುರ ಗ್ರಾಮದ ಧರ್ಮೇಗೌಡ (49) ತಾಯಿ ರಂಗಮ್ಮ (70) ಕೆಳಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ ,‌ ಇದೇ ಹೋಬಳಿಯ ಹಿರೀಸಾವೆಗೆ ಸಂಬಂಧಿಕರ ಮನೆಗೆ ಹೋಗುವಾಗ ಅಕ್ಕನಹಳ್ಳಿ ಕ್ರಾಸ್ ಬಳಿ ಪಲ್ಸರ್ ಬೈಕ್ ನಲ್ಲಿ ಬಂದ ಸರಗಳ್ಳರು ತಾಯಿ ರಂಗಮ್ಮ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದ ಸಂದರ್ಭದಲ್ಲಿ ಧರ್ಮೇಗೌಡ ಪ್ರತಿರೋಧ ವ್ಯಕ್ತಪಡಿಸಿ , ಸೆಣೆಸಾಡಿದರು. ಆಗ ಆಯತಪ್ಪಿ ಬಿದ್ದು ಗಾಯಗೊಂಡರು. ಈ ನಡುವೆ ಕಳ್ಳರು ಹೆದರಿ ತಪ್ಪಿಸಿಕೊಂಡಿದ್ದಾರೆ. , ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ , ಅದೃಷ್ಟವಶಾತ್ ತಾಯಿಯ ಚಿನ್ನದ ಸರ ಉಳಿಯಿತು , ಪ್ರಾಣಕ್ಕು‌‌ ತೊಂದರೆಯಾಗಲಿಲ್ಲ . , ರಾಬರಿಗೆ ಯತ್ನಿಸದವರ ಹುಡುಕಾಟದಲ್ಲಿದ್ದಾರೆ ಪೊಲೀಸರು. ,

ಬೈಕ್‌ನಲ್ಲಿ ಕುಳಿತ್ತಿದ್ದ ತಾಯಿಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಖದೀಮರ ಯತ್ನ

ದಿ:15/05/2023 ರಂದು ಚನ್ನರಾಯಪಟ್ಟಣ ತಾ. ನುಗ್ಗೇಹಳ್ಳಿ ಹೋ, ದ್ಯಾವಲಾಪುರ ಗ್ರಾಮದ ವಾಸಿಯಾದ ರಂಗಮ್ಮರವರು ತಮ್ಮ ಮಗ ಧರ್ಮೇಗೌಡ ರವರೊಂದಿಗೆ ಹಿರಿಸಾವೆಯ ಶಿವಶ್ರೀ ಛತ್ರದಲ್ಲಿ ಸಂಬಂಧಿಕರ ವಿವಾಹವಿದ್ದರಿಂದ ಮದುವೆಗೆ ಹೋಗಲು ಕೆಎ13-ವೈ5434 ಸಂಖ್ಯೆಯ ಟಿ.ವಿ.ಎಸ್ ಎಕ್ಸ್.ಎಲ್ ಬೈಕಿನಲ್ಲಿ ಬೆಳಿಗ್ಗೆ ಸುಮಾರು 08:40 ಗಂಟೆ ಸಮಯದಲ್ಲಿ ಅಕ್ಕನಹಳ್ಳಿ ಕೂಡು ಬಿಟ್ಟು ಸ್ವಲ್ಪ ಮುಂದೆ ನುಗ್ಗೇಹಳ್ಳಿ-ಹಿರಿಸಾವೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಯಾವುದೋ ಬೈಕಿನಲ್ಲಿ ಬಂದ ಒಬ್ಬ ಆಸಾಮಿಯು ಏಕಾಏಕಿ

ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಬೈಕ್‌ ಸಮೇತ ರಂಗಮ್ಮ ಹಾಗು ಧರ್ಮೇಗೌಡ ಇಬ್ಬರೂ ರಸ್ತೆಯ ಮೇಲೆ ಬಿದ್ದಿದ್ದ- ರಿಂದ ಮಾಂಗಲ್ಯಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದ ಆಸಾಮಿಯು ಹೊರಟು ಹೋಗಿದ್ದು, ಬೈಕ್‌ನಿಂದ ಬಿದ್ದಿದ್ದರಿಂದ ಇಬ್ಬರಿಗೂ ದೇಹದ ಭಾಗಗಳಿಗೆ ಪೆಟ್ಟಾಗಿದ್ದು, ಅಪರಿಚಿತನನ್ನು ಪತ್ತೆಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು, ರಂಗಮ್ಮ ರವರು ನುಗ್ಗೇಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.