ಸಬ್‌ಇನ್ಸ್‌ಪೆಕ್ಟರ್ ಮನೆಗೆ ದುಷ್ಕರ್ಮಿಗಳಿಂದ ಬೆಂಕಿ

0

ಹಾಸನ : ಸಬ್‌ಇನ್ಸ್‌ಪೆಕ್ಟರ್ ಮನೆಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದ್ದು .ಕೊಣನೂರು ಪೊಲೀಸ್ ಠಾಣೆ ಪಿಎಸ್‌ಐ (PSI) ಶೋಭಾ ಭರಮಕ್ಕನವರ್ ರಜೆಯ ಮೇಲೆ ಊರಿಗೆ ತೆರಳಿದ್ದ ಸಂದರ್ಭದಲ್ಲಿ . ಅವರು ತಂಗಿದ್ದ ಬಾಡಿಗೆ ಮನೆಯ ಕಿಟಕಿ ಹೊಡೆದಾಕಿ

ಸೀಮೆಎಣ್ಣೆ ಎಸೆದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು , ಆ ಮನೆಯಲ್ಲಿದ್ದ ಲ್ಯಾಪ್‌ಟಾಪ್, ಡ್ರೆಸ್ಸಿಂಗ್ ಟೇಬಲ್, ಬಟ್ಟೆಗಳು, ಫರ್ನಿಚರ್ ಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು .ಶೋಭಾ ಅವರು ರಜೆ ಮುಗಿಸಿ ಶುಕ್ರವಾರ (26May2023) ಮನೆಗೆ ವಾಪಸಾದಾಗ ಕಿಡಿಗೇಡಿಗಳ ಕೃತ್ಯ ಗೊತ್ತಾಗಿದೆ . ಸ್ಥಳಕ್ಕೆ ಶ್ವಾನದಳ , ಬೆರಳಚ್ಚು ತಜ್ಞರು,  ಮುರುಳೀಧರ್ (DYSP) , ರಘುಪತಿ(ಸರ್ಕಲ್ ಇನ್ಸ್ಪೆಕ್ಟರ್) ಭೇಟಿ ನೀಡಿ

ಪರಿಶೀಲನೆ ನಡೆಸುತ್ತಿದ್ದು . ತನಿಖೆ ನಂತರ ತಪ್ಪಿತಸ್ಥರು ಯಾರು , ಏಕೆ ಹೀಗೆ ಮಾಡಿದರು ತಿಳಿಯಲಿದೆ ., ಶೋಭಾ ಭರಮಕ್ಕನವರ್ ಕಳೆದ ಮೂರುವರೆ ತಿಂಗಳ ಹಿಂದಷ್ಟೇ ಜಾವಗಲ್ ಪೊಲೀಸ್ ಠಾಣೆಯಿಂದ ಕೊಣನೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಇದೀಗ ಘಟನೆ ಬಗ್ಗೆ

ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ .

LEAVE A REPLY

Please enter your comment!
Please enter your name here