Breaking News

ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ

By Hassan News

June 17, 2023

ಹಾಸನ : ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಪುಂಡರ ಗುಂಪೊಂದು ಕಲ್ಲು ಮತ್ತು ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹೊಳೆನರಸೀಪುರ ತಾಲ್ಲೂಕಿನ, ಮಳಲಿ ಗ್ರಾಮದಲ್ಲಿ ನಡೆದಿದೆ. , ತಾಲ್ಲೂಕಿನ, ಕುಂದೂರು ಹೋಬಳಿ ಎಸ್.ಹೊನ್ನೇನಹಳ್ಳಿ ಗ್ರಾಮದ ಶರತ್ ಗಾಯಗೊಂಡಿರುವ ಕಾನ್ಸ್‌ಟೇಬಲ್‌,

ಸಕಲೇಶಪುರ ತಾಲ್ಲೂಕಿನ, ಯಸಳೂರು ಪೊಲೀಸ್‌ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶರತ್ ಜೂ.15 ರಂದು ಸಾಂದರ್ಭಿಕ ರಜೆ ಪಡೆದು ತಮ್ಮ ಗ್ರಾಮದ ದೀಪಕ್ ಎಂಬುವವರ ಮಗಳ ಹುಟ್ಟಿದ ಹಬ್ಬದ ಕಾರ್ಯಕ್ರಮಕ್ಕೆಂದು ಹೊಳೇನರಸೀಪುರ ತಾಲ್ಲೂಕಿನ, ಮಳಲಿ ದೇವಸ್ಥಾನಕ್ಕೆ ಹೋಗಿದ್ದರು. , ಮಧ್ಯಾಹ್ನ 3.30 ರ ಸಮಯದಲ್ಲಿ ದೇವಸ್ಥಾನದ ಸಮೀಪವಿರುವ

ಸೋನಾ ಶ್ರೇಯ ಕನ್ನೆಕ್ಷನ್ ಹಾಲ್ ಮುಂಭಾಗ ಶರತ್ ಅವರೆ ಗ್ರಾಮದವರೇ ಆದ ಮಿಥುನ್, ಲೋಹಿತ್‌, ನಟರಾಜು ಎಂಬುವವರು, ಚೇತನ್ ಎಂಬ ಯುವಕನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಹಲ್ಲೆ ನಡೆಸುತ್ತಿದ್ದ ವೇಳೆ ಶರತ್‌ ಜಗಳ ಬಿಡಿಸಲು ಹೋಗಿದ್ದಾರೆ. ಈ ವೇಳೆ ಜಗಳ ಬಿಡಿಸಲು ಬಂದಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಕೈಯಿಂದ ಎಲ್ಲರೂ ಶರತ್‌ಗೆ ಹೊಡೆದಿದ್ದಾರೆ. ಈ ಪೈಕಿ ನಟರಾಜ ಎಂಬಾತ

ಕಲ್ಲಿನಿಂದ ಶರತ್ ತಲೆಯ ಹಿಂಭಾಗಕ್ಕೆ ಹೊಡೆದು ಕೊಲೆ ಮಾಡುವ ಉದ್ದೇಶದಿಂದ ಮನಬಂದಂತೆ ಥಳಿಸಿದ್ದಾರೆ. ಈ ನಡುವೆ ನಟರಾಜು ಕಾರಿನಿಂದ ಲಾಂಗ್ ತಂದು ಶರತ್ ಎಡಗಣ್ಣಿನ ಉಬ್ಬಿನ ಮೇಲೆ ಹೊಡೆದಿದ್ದಾನೆ. ಇವರಿಂದ ತಪ್ಪಿಸಿಕೊಂಡ ಶರತ್ ಕನ್ವೆನ್ನನ್ ಹಾಲ್ ಒಳಗೆ ಓಡಿ ಹೋಗಿದ್ದಾರೆ. ಶರತ್‌ನನ್ನು ಅಟ್ಟಿಸಿಕೊಂಡು ಹೋದ ಪುಂಡರು ಲಾಂಗ್‌ನಿಂದ ಹಲ್ಲೆ ಮಾಡಿದ್ದು ಶರತ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಪ್ರಕರಣ cctv ಯಲ್ಲಿ ದಾಖಲಾಗಿದೆ , ಗಾಯಾಳು ಶರತ್

ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಹೇಳಿಕೆ ಆಧರಿಸಿ ಹೊಳೇನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.