ರೂಂ ನಲ್ಲಿ ವೇಲ್‌ನಿಂದ ಕುತ್ತಿಗೆ ಬಿಗಿದು ಪತ್ನಿ ಕೊಲೆ , ಮೃತೆ ತಂದೆ ಚನ್ನರಾಯಪಟ್ಟಣ ಪೋಲೀಸರಿಗೆ ದೂರು

0

ಹಾಸನ : ಕೌಟುಂಬಿಕ ಕಲಹ ಹಿನ್ನೆಲೆ ಕುತ್ತಿಗೆಗೆ ವೇಲ್ ನಿಂದ ಬಿಗಿದು ಪತಿ, ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ತಗ್ಯಮ್ಮ ಬಡಾವಣೆಯಲ್ಲಿ ನಡೆದಿದ್ದು . ಚಿಕ್ಕಮಗಳೂರು ಜಿಲ್ಲೆ ದಾಸರಹಳ್ಳಿ ಗ್ರಾಮದ ವಾಸಿ ದೊಡ್ಡಯ್ಯ ಅವರ 3 ನೇ ಮಗಳಾದ ಹೇಮಾವತಿ ( ಶೈಲಾ ) ಅವರನ್ನು 10 ವರ್ಷಗಳ ಹಿಂದೆ ತಗ್ಯಮ್ಮ ಬಡಾವಣೆಯ

ಗುರುರಾಜನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. , ದಂಪತಿಗೆ 07 ವರ್ಷದ ತ್ರಿಶಾ, 05 ವರ್ಷದ ಮೋಕ್ಷಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರು . ಇಬ್ಬರೂ ಸಂಸಾರ ಸಮೇತ ಚನ್ಪನರಾಯಟ್ಟಣದ ಹೌಸಿಂಗ್ ಬೋರ್ಡ್ ಬಳಿ ಇರುವ ಪುರಸಭೆ ವಸತಿಗೃಹದಲ್ಲಿ ನಿವಾಸಿಯಾಗಿದ್ದರು. ಈಗೆಯೇ ಐದಾರು ವರ್ಷಗಳಿಂದ ದಂಪತಿ ನಡುವೆ ಸಂಸಾರದಲ್ಲಿ ಆಗಾಗ್ಗೆ ಮುನಿಸು ಆಗುತ್ತಿತ್ತಂತೆ. ಈ ಬಗ್ಗೆ ಆರೇಳು ಬಾರಿ ಪಂಚಾಯ್ತಿ ಮಾಡಿದ್ದು, ಆದರೂ

ಗುರುರಾಜ, ಪತ್ನಿಯನ್ನು ಬೈಯ್ಯುವುದು, ಹಲ್ಲೆ ಮಾಡುವುದನ್ನು ಮಾಡುತ್ತಿದ್ದ ., ಎನ್ನಲಾಗಿದೆ ಜೂನ್.29 ರಂದು ರಾತ್ರಿ 8 ಗಂಟೆ ಸುಮಾರಿಗೆ ದೇವರಾಜು ಎಂಬುವರು ಫೋನ್ ಮಾಡಿ, ಹೇಮಾವತಿ ಮತ್ತು ಗುರುರಾಜ ಇಬ್ಬರೂ ಗಲಾಟೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದು .
ತಕ್ಷಣ ಬಂದು ನೋಡಿದಾಗ ಗುರುರಾಜ ಪತ್ನಿ ಜೊತೆ ಜಗಳವಾಡಿ ದೈಹಿಕ ಮತ್ತು

ಮಾನಸಿಕ ಹಿಂಸೆ ನೀಡಿ, ರೂಂ ನಲ್ಲಿ ಆಕೆಯ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಕೊಲೆ ಮಾಡಿದ್ದಾನೆ ಎಂದು ಮೃತ ತಂದೆ ದೊಡ್ಡಯ್ಯ ಇಂದು

ನಗರ ಪೊಲೀಸ್ ಠಾಣೆಗೆ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ., ಪೊಲೀಸರು ತನಿಖೆ ನಡೆಸುತ್ತಿದ್ದಾರೆ .

LEAVE A REPLY

Please enter your comment!
Please enter your name here