ಹಾಸನ : ಪತಿಯಿಂದಲೇ ಪತ್ನಿ ಹತ್ಯೆ ಆಗಿದೆ ಎಂದು ಪೋಷಕರು ಆರೋಪಿಸಿ ಪತಿ ವಿರುದ್ಧ ದೂರು ನೀಡಿರುವ ಘಟನೆ ಯಡಿಯೂರು ಗ್ರಾಮದಲ್ಲಿ ನಡೆದಿದೆ.
ಅನಿತಾ (27) ಮೃತ ಮಹಿಳೆ ಯಾಗಿದ್ದು ಪತಿ ಯೋಗೇಶ್ ವಿರುದ್ಧ ಮೃತರ ಪೋಷಕರು ಆರೋಪವನ್ನು ಮಾಡಿದ್ದಾರೆ.
ಕಳೆದ ಆರು ವರ್ಷದ ಹಿಂದೆ
ಮದುವೆಯಾಗಿದ್ದ ಅನಿತಾ ಹಾಗೂ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಮೂರೇಹಳ್ಳಿ ಗ್ರಾಮದ ಯೋಗೇಶ್ ವರದಕ್ಷಿಣೆ ತರುವಂತೆ ಹಾಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ದೂರಲಾಗಿದೆ.
ಈ ಸಂಬಂಧ ಪತಿ ಯೋಗೇಶ್ ಹಲವಾರು ಬಾರಿ ಹಿರಿಯರು ರಾಜಿ ಪಂಚಾಯಿತಿ ಮಾಡಿದ್ದರು ಆದರೆ
ಪತಿ ಮತ್ತೆ ಜಗಳವಾಡಿ ದ್ದರಿಂದ ಒಂದು ವಾರದ ಹಿಂದೆ ಅನಿತಾ ತವರು ಮನೆಗೆ ತೆರಳಿದ್ದರು. ಹಿರಿಯರೆಲ್ಲ ಸೇರಿ ಮತ್ತೆ ರಾಜಿ ಸಂಧಾನ ಮಾಡಿದ ಕಾರಣ ಪತಿ ಯೋಗೇಶ್ ಮನೆಗೆ ಕರೆ ತಂದಿದ್ದರು.
ತದನಂತರ ಪತಿ ಹಲ್ಲೆ ಮಾಡುತ್ತಿದ್ದಾನೆ ಎಂದು ನಿನ್ನೆ ತನ್ನ ಪೋಷಕರಿಗೆ ಅನಿತಾ ಫೋನ್ ಮಾಡಿದ್ದರು ಯಡಿಯೂರಿಗೆ ಬರುವಷ್ಟರಲ್ಲಿ
ಅನಿತಾ ಸಾವನಪ್ಪಿದ್ದು ಪತಿ ಯೋಗೇಶ್ ಕೊಲೆ ಮಾಡಿದ್ದಾರೆಂದು ಪೋಷಕರು ಆರೋಪಿಸಿದ್ದು, ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.