ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಅಮಾಯಕ ಸಹಸ್ರಾರು ಮಂಗಗಳ ಮಾರಣಹೋಮ ಪ್ರಕರಣದ ಆರೋಪಿಗಳ ಸೆರೆ

0

ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಅಮಾಯಕ ಸಹಸ್ರಾರು ಮಂಗಗಳ ಮಾರಣಹೋಮ ಪ್ರಕರಣದ ಆರೋಪಿಗಳ ಸೆರೆ , ಅದುವೇ ಮೂರೇ ದಿನದಲ್ಲಿ ಪ್ರಕರಣ ಬೇಧಿಸಿದ ಹಾಸನ ಜಿಲ್ಲಾ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ಪ್ರಶಂಸೆಯ ಮಹಾಪೂರ , ಅಹಾರದ ಆಸೆ ತೋರಿಸಿ ಮೂಕ ಪ್ರಾಣಿಗಳ ಸೆರೆ ಹಿಡಿದಿದ್ದ ಒಂದು ಗೋಮುಕ ವ್ಯಾಘ್ರ ತಂಡಕ್ಕೆ ಹಾಸನ್ ನ್ಯೂಸ್ ನಲ್ಲಿ ಹಾಕಿದ್ದ ಘಟನೆಯ ವಿಡಿಯೋ ನೋಡಿ ಹಿಡಿ ಹಿಡಿ ಶಾಪ ಇಡೀ ರಾಜ್ಯವೇ ಹಾಕಿತ್ತು ., ಕ್ಷುಲ್ಲಕ ಬೆಳೆ ಹಾನಿಮಾಡುತ್ತಿವೆ ಎಂದು 50ಕ್ಕು ಹೆಚ್ಚು ಕೋತಿಗಳ ಸೆರೆಗೆ ಕೇವಲ 40 ಸಾವಿರಕ್ಕೆ ಗುತ್ತಿಗೆ ಪಡೆದು ಕೃತ್ಯ ಎಸಗಿರೋದು ಪ್ರಾಣಿದಯಾ ಸಂಗದ ಕೆಂಗಣ್ಣಿಗು ಗುರಿಯಾಗಿದ್ದರು ., ಇವರನ್ನು ಹಿಡಿಯೋದು ಪೊಲೀಸರಿಗೆ ಸವಾಲಾಗಿತ್ತು ., ಅರಸೀಕೆರೆ ತಾಲ್ಲೂಕಿನ ಬಾಣಾವರದ ಕೋತಿ ಸೆರೆ ತಂಡಕ್ಕೆ ಹಣ ನೀಡಿಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಮೀನಿನ ಮಾಲೀಕರ ಮನವಿ ಮೇರೆಗೆ 50 ಕ್ಕೂ ಹೆಚ್ಚು ಕೋತಿ ಸೆರೆ ಹಿಡಿದಿದ್ದ ಯಶೋಧ – ರಾಮು ದಂಪತಿ ಅಷ್ಟು ಕೋತಿಗಳ ಸಾಯಿಸಿದ್ದು ದೊಡ್ಡ ಕಥೆ : ಒಂದು ವಾರಗಳ ಕಾಲ ಬ್ರೆಡ್ ಬಿಸ್ಕೆಟ್, ಆಹಾರ ಹಾಕಿ ಮೊದಲು ಅಭ್ಯಾಸ ಮಾಡಿಸಿದ್ದ ತಂಡ , ಕೊನೆಗೆ ಜುಲೈ 28 ರಂದು ಕೋತಿಗಳನ್ನು ಸೆರೆಹಿಡಿದು ಚೀಲದಲ್ಲಿ ತುಂಬಿಸಿದೆ , ಅವುಗಳನ್ನ ಸ್ಥಳಾಂತರ ಮಾಡು ವಾಗ ಉಸಿರು ಗಟ್ಟಿ ಮೃತಪಟ್ಟಿವೆ ಎಂದು ಕಥೆ ಹೇಳುತ್ತಿರೋ ಬಂಧಿತರ ಬಗ್ಗೆ ಇನ್ನಷ್ಟು ತನಿಖೆ ಆಗಬೇಕಿದೆ , ಕೋತಿಗಳ ಸೆರೆ ಹಿಡಿದ ಈ ದಂಪತಿ, ಮೃತ ಕೋತಿ ಸ್ಥಳಾಂತರ ಮಾಡಿದ ವಾಹನ ಚಾಲಕ, ಜಮೀನಿನ ಮಾಲೀಕ ಸೇರಿ
ಐವರನ್ನು ವಶಕ್ಕೆ ಪಡೆದು ಡ್ರಿಲ್ ನಡೆಸುತ್ತಿರೊ ಅರೇಹಳ್ಳಿ ಪೊಲೀಸರಿಗೆ ಇನ್ನಷ್ಟು ಮಾಹಿತಿ ಸಿಗುತ್ತಿದೆ

ಹಾಸನ ತಾಲ್ಲೂಕಿನ ಉಗನೆ ಗ್ರಾಮದಲ್ಲಿ ಇತರೆ ಕೋತಿಗಳ ಸೆರೆ , ಉಗನೆ ಗ್ರಾಮದ ಪ್ರಸನ್ನ, ರುದ್ರೆಗೌಡ, ಚಾಲಕ ಮಂಜುರನ್ನ ವಶಕ್ಕೆ ಪಡೆದಿರುವ ಪೊಲೀಸರು , ಕೋತಿ ಸೆರೆಹಿಡಿದ ಯಶೋಧ ರಾಮು ದಂಪತಿ ವಿಚಾರಣೆಯಿಂದ ಬಯಲಾದ ಪ್ರಕರಣದಲ್ಲಿ ಅರಣ್ಯ ಇಲಾಖೆಯಿಂದಲೂ ಇತರಅನೇಕ ಐವರ ವಶಕ್ಕೆ ಪಡೆದು , ಬೇಲೂರು ತಾಲ್ಲೂಕಿನ ಚೌಡನಹಳ್ಳಿ ಬಳಿ ಮೃತ ಕೋತಿ ಗಳನ್ನ ಬಿಸಾಡಿ ಹೋಗಿದ್ದ ದುರುಳರ ಕೃತ್ಯದ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಪಡೆಯುತ್ತಿದ್ದಾರೆ

ಕೋತಿಗಳ ಸಾವಿನ ಸುದ್ದಿ ತಿಳಿದು ಗ್ರಾಮದ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನ ಮಾಡಿಸಿದ್ದ ಪ್ರಾಣಿ ಹಂತಕರ ಬಗ್ಗೆ ಆಶ್ಚರ್ಯ ಕೂಡ ಆಗಿದೆ

ನಾಳೆ (3Aug2021)ಯೇ ಹೈಕೋರ್ಟ್ ಗೆ ವರದಿ ನೀಡಬೇಕಿದ್ದ ಹಿನ್ನೆಲೆಯಲ್ಲಿ ತ್ವರಿತ ತನಿಖೆ ನಡೆಸಿದ್ದ ಪೊಲೀಸರು ಇನ್ನಷ್ಟು ಸಾಕ್ಷಿ ಸಮೇತ ವರದಿ ನೀಡಲಿದ್ದಾರೆ

#crimedairyhassan #hassanpolice #justiceformonkeys

LEAVE A REPLY

Please enter your comment!
Please enter your name here