CRIME DAIRY HASSAN

ಹುಡಿಗಿಯನ್ನು ರೇಗಿಸಿದ ಎಂಬುದನ್ನು ಪ್ರಶ್ನಿಸಿದ್ದಕ್ಕೆ ಹೊಟೇಲ್ ಮಾಲೀಕನಿಂದ ನಿರ್ವಾಹಕನ ಮೇಲೆ ಹಲ್ಲೆ

By

July 30, 2022

ಹಾಸನ: ಹುಡಿಗಿಯನ್ನು ರೇಗಿಸಿದ ಎಂಬುದನ್ನು ಪ್ರಶ್ನಿಸಿದ್ದಕ್ಕೆ ಸಾರಿಗೆ ನೌಕರನ ಮೇಲೆ ಹೊಂಚು ಹಾಕಿ ಹಲ್ಲೆ ಮಾಡಿರುವ ಘಟನೆ ಹಾಸನ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ನೌಕರನ ಮೇಲೆ ಹಲ್ಲೆ ಮಾಡುವ ವೀಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ಘಟನೆಗೆ ತೀರ್ವ ಖಂಡನೆ ವ್ಯಕ್ತವಾಗಿದೆ.

ಬುಧವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಹಾಸನದಿಂದ ಬೆಂಗಳೂರು ಕಡೆಗೆ ಹೊರಟಿದ್ದ ಬಸ್‌ನ ನಿರ್ವಾಹಕ ತಾರೇಶ್‌ ಎಂಬಾತ ಟೀ ಕುಡಿಯುವ ಉದ್ದೇಶದಿಂದ ಬಸ್‌ ನಿಲ್ದಾಣದಲ್ಲಿರುವ ಟೀ ಅಂಗಡಿ ಬಳಿ ಹೋಗಿದ್ದಾರೆ. ಟೀ ಅಂಗಡಿಯಲ್ಲಿನ ಕೆಲಸ ಮಾಡೋ ಯುವತಿಯನ್ನ ಪಕ್ಕದ ಹೋಟೆಲ್ ನ ಮಾಲೀಕ ಅಕ್ಷಯ್‌ ರೇಗಿಸಿದ್ದಾನೆ ಎಂಬ ವಿಚಾರಕ್ಕೆ ಸಾರ್ವಜನಿಕರು ಹೋಟೆಲ್ ಮಾಲೀಕ ಅಕ್ಷಯ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇದೇ ಸಂದರ್ಭಕ್ಕೆ ಸ್ಥಳಕ್ಕೆ ಬಂದ ತಾರೇಶ್‌ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಬಸ್ ಸ್ಟ್ಯಾಂಡ್ ವಾಚ್‌ಮನ್ ಗೆ ಕರೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಕೋಪಗೊಂಡ ಅಕ್ಷಯ್ ಬಸ್ ನಿರ್ವಾಹಕನ ಮೇಲೆ ಎರಗಿದ್ದಾನೆ. ಸಾರ್ವಜನಿಕರ ಮಧ್ಯ ಪ್ರವೇಶದಿಂದ ಘಟನೆ ತಿಳಿಗೊಂಡಿದೆ.

ಆದರೆ ಇದನ್ನೇ ಮುಂದುವರೆಸಿದ ಹೊಟೇಲ್ ಮಾಲೀಕ ಅಕ್ಷಯ್, ನಿರ್ವಾಹಕ ತಾರೇಶ್ ಬೆಂಗಳೂರಿಗೆ ಹೋಗಿ ರಾತ್ರಿ 10.30 ಕ್ಕೆ ಹಾಸನಕ್ಕೆ ವಾಪಾಸ್‌ ಬರುವವರೆಗೂ ತನ್ನ ಸಹಚರರೊಂದಿಗೆ ಹೊಂಚುಹಾಕಿ ಕಾದು ಆತ ಬಂದ ನಂತರ ಏಕಾಏಕಿ ದಾಳಿ ಮಾಡಿ ಪಲ್ಲೆ ನಡೆಸಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿದ್ದು ತಾರೇಶ್ ಗಂಭೀರ ಗಾಯಗೊಂಡು ಹಾಸನದ ಹಿಮ್ಸ್ ಆಸ್ಪತ್ರೆ ಸೇರಿದ್ದಾನೆ.

ರಾಜ್ಯ ಸಾರಿಗೆ ಇಲಾಖೆಯಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೆ ಇವೆ. ಕೆಲಸ ಮಾಡುವುದೇ ಕಷ್ಟವಾಗಿದೆ. ನಮ್ಮ ಮೇಲೆ ಹಲ್ಲೆ ನಡೆದಾಗ ಯಾರೊಬ್ಬರೂ ಬೆಂಬಲಕ್ಕೆ ನಿಲ್ಲೋದಿಲ್ಲ. ನೆನ್ನೆ ನಡೆದಿರೋ ಪ್ರಕರಣದಲ್ಲೂ ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಹಲ್ಲೆ ಮಾಡಿರುವವರು ಪ್ರಭಾವ ಬಳಸಿ ಸ್ಟೇಷನ್ ಬೇಲ್ ನೀಡಿ ಕಳಿಸಿದ್ದಾರೆ ಎಂದು ಸಾರಿಗೆ ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಲ್ಲಿ ಹಾಸನದಲ್ಲಿ ದಿನಕ್ಕೊಂದು ಹೈಂ ಪ್ರಕರಣಗಳು ಹೆಚ್ಚುತ್ತಿರೋದು ಜನರಲ್ಲಿ ಆತಂಕ ಮೂಡಿಸರೋ ಬೆನ್ನಲ್ಲೇ ಇಂತಹ ಪ್ರಕರಣಗಳಿಗೆ ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ.