CRIME DAIRY HASSAN

ಪ್ರೀತಿ ನಿರಾಕರಣೆ ಸಿಟ್ಟು ; ಸರಣಿ ಡಿಕ್ಕಿ ; ಚಾಲಕನ ಹಾಸನ ಪೊಲೀಸರಿಂದ ಶೋಧ

By

August 04, 2022

ಹಾಸನ: ನಗರದ ಹೊರ ವಲಯದ ಬೂವನಹಳ್ಳಿ ಕ್ರಾಸ್‌ನಲ್ಲಿಕಾರು ಚಾಲಕ ಸರಣಿ ಅಪಘಾತ ಮಾಡಿದ್ದರ ಹಿಂದೆ ಪ್ರೇಮ ಪುರಾಣ ಇರುವುದು ಗೊತ್ತಾಗಿದೆ.ಅರಸೀಕೆರೆಯ ಶರಣ್ಯ ಎಂಬುವರು ಬೂವನಹಳ್ಳಿ ಬೈಪಾಸ್ ಸಮೀಪದ ಭಾರತಿ ಕಾಫಿ ಕ್ಯೂರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.5 ತಿಂಗಳ ಹಿಂದೆ ನಗರದ ಚನ್ನಪಟ್ಟಣ ನಿವಾಸಿ ಭರತ್ ಎಂಬ ಯುವಕ ಇವರನ್ನು ಆಗಾಗ ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಶರಣ್ಯ ಮನೆಯವರಿಗೆ ತಿಳಿಸಿದ್ದರು. ನಂತರ ಮನೆಯವರು ಕೆಲಸ ಬಿಡಿಸಿದ್ದರು.1 ತಿಂಗಳಿಂದ ಶರಣ್ಯ ಮತ್ತೆ ಕೆಲಸಕ್ಕೆ ಸೇರಿ ಪ್ರತಿದಿನ ಅರಸೀಕೆರೆಯಿಂದ ಬಂದು ಹೋಗುತ್ತಿದ್ದರು. ಇದನ್ನು ತಿಳಿದ ಭರತ್,

ಮತ್ತೆ ಹಳೇ ಚಾಳಿ ಮುಂದುವರಿಸಿದ್ದ. ಒಮ್ಮೆ ಕೈ ಹಿಡಿದು ಎಳೆದಾಡಿ ನನ್ನನ್ನೇ ಪ್ರೀತಿಸು ಎಂದು ಬಲವಂತ ಮಾಡಿದ್ದ.ಈ ವಿಚಾರ ತಿಳಿದು ಯುವತಿ ಅಣ್ಣ ಸಚಿನ್ ಹಾಗೂ ಸಂಬಂಧಿಕರು ಬಂದು ಭರತ್‌ಗೆ ಬುದ್ಧಿವಾದ ಹೇಳಿ, ಆತನ ಪೋಷಕರಿಗೂ ಮಾಹಿತಿ ನೀಡಿದ್ದರು.

ಕೊಲ್ಲಲು ಪ್ಲಾನ್?:

ಆದರೂ ಬದಲಾಗದ ಭರತ್, ತನ್ನ ಪ್ರೀತಿ ನಿರಾಕರಿಸಿದ ಶರಣ್ಯಳನ್ನು ಮುಗಿಸುವ ಪ್ಲಾನ್ ಮಾಡಿದ್ದಾನೆ. ಇದಕ್ಕಾಗಿ ಕಾದು, ಬುಧವಾರ ಬೆಳಗ್ಗೆ ಶರಣ್ಯ ಎಂದಿನಂತೆ ಅರಸೀಕೆರೆಯಿಂದ ಕೆಲಸಕ್ಕೆ ಬಂದು 9.30 ರ ಸುಮಾರಿಗೆ ರಸ್ತೆಯ ಎಡಬದಿ ಕಾಫಿ ಕ್ಯೂರಿಂಗ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಕೆಎ-03-ಎಎಚ್-5776 ನಂಬರಿನ ಕಪ್ಪು ಬಣ್ಣದ ಕಾರಿನಲ್ಲಿ ಬಂದು ಶರಣ್ಯಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ತಪ್ಪಿಸಿಕೊಂಡುವ ಧಾವಂತದಲ್ಲಿ ಹಲವು ವಾಹನಗಳಿಗೆ ಗುದ್ದಿದ್ದಾನೆ. ನಂತರ ಕಾರು ಕೆಟ್ಟು ನಿಂತಿದ್ದರಿಂದ ಅದನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬAಧ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಿನ್ನೆ ಈ ಕಾರಿನಿಂದ ಆದ ಅವಾಂತರ :

ಸರಣಿ ಅಪಘಾತ: ಕಾರು ಚಾಲಕ ಪರಾರಿ

ಹಾಸನ: ಕಾರು ಚಾಲಕನ ಅಜಾಗರೂಕತೆಯಿಂದ ಬೂವನಹಳ್ಳಿ ಬಳಿಯ ಬುಸ್ತೇನಹಳ್ಳಿ ವೃತ್ತದಲ್ಲಿ ನಿನ್ನೆ 3Aug2022 ಬೆಳಗ್ಗೆ ಸರಣಿ ಅಪಘಾತ ಸಂಭವಿಸಿತ್ತು.ಮೊದಲು ಕಾಫಿ ಕ್ಯೂರಿಂಗ್ ನಲ್ಲಿ ಕೆಲಸ ಮಾಡುವ ಮಹಿಳೆಗೆ ಡಿಕ್ಕಿ ಹೊಡೆದಿರುವ ಕಾರು ಚಾಲಕ, ನಂತರ ಹಾಲಿನ ಕ್ಯಾನ್ ಸಾಗಿಸುತ್ತಿದ್ದ ಆಪೆ ಆಟೋಗೆ ಗುದ್ದಿದ್ದಾನೆ.ಮುಂದೆ ಹೋಗಿ ಸಾರಿಗೆ ಬಸ್‌ಗೂ ಗುದ್ದಿದ್ದಾನೆ. ಮುಂದೆ ಹೋಗಿ ಕಾರು ಕೆಟ್ಟು ನಿಂತಿದೆ.ಬೆಂಗಳೂರು ಮೂಲದ ಕಾರನ್ನು ಬಾಡಿಗೆ ಪಡೆದು ನಗರಕ್ಕೆ ಬಂದಿದ್ದ ವ್ಯಕ್ತಿ,

ಈ ಅವಾಂತರಕ್ಕೆ ಕಾರಣನಾಗಿದ್ದಾನೆ . ಮುಖ ಮುಚ್ಚಿಕೊಂಡು ಮನಸೋ ಇಚ್ಛೆ ಕಾರು ಚಲಾಯಿಸಿದ್ದಾನೆ ಎನ್ನಲಾಗಿದೆ. ಒಂದಲ್ಲ, ಎರಡಲ್ಲ ಸರಣಿ ಡಿಕ್ಕಿ ಹೊಡೆದ ನಂತರ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ. ಡಿಕ್ಕಿಯಲ್ಲಿ ಗಾಯಗೊಂಡಿರುವ ಕಾಫಿ ಕ್ಯೂರಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಚನ್ನರಾಯಪಟ್ಟಣದಿಂದ ಹಾಸನಕ್ಕೆ ತರುತ್ತಿದ್ದ ಹಾಲು ಮಣ್ಣು ಪಾಲಾಗಿದೆ. ಹಾಸನದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಸಾರಿಗೆ ಬಸ್‌ಗೂ ಭಾಗಶಃ ಹಾನಿಯಾಗಿದೆ. ಸರಣಿ ಡಿಕ್ಕಿ ಮಾಡಿದ ಕಾರಿಗೂ ಡ್ಯಾಮೇಜ್ ಆಗಿದೆ. ಆದರೆ

ಈ ಕಾರಿನ ನಂಬರ್ ಪ್ಲೇಟ್ ಮುಚ್ಚಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರು ಪರಿಶೀಲನೆ ಮಾಡಿದಾಗ ಮಗುವಿನ ಆಧಾರ್ ಕಾರ್ಡ್ ಸಿಕ್ಕಿದ್ದು ಅದರಲ್ಲಿ ಮಗನ ಹೆಸರು ಭರತ್, ತಂದೆ ಹೆಸರು ರಾಜಾಚಾರ್ ಬೊಮ್ಮನಾಯಕನಹಳ್ಳಿ, ಹೊಸಕೊಪ್ಪಲು, ಹೆಚ್.ಎನ್. ಪುರ ರಸ್ತೆ ಎಂದು ಬರೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು