Belur

ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆಂದು ತೆರಳುತ್ತಿದ್ದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಕೊಲೆ

By

September 07, 2022

ಹಾಸನ / ಬೇಲೂರು :  ಮಂಗಳವಾರ ಬೆಳಿಗ್ಗೆ ಗ್ರಾಮದ ಕೇಶವಮೂರ್ತಿ ಎಂಬುವವರ ಕಾಫಿ ತೋಟದ ಕೆಲಸಕ್ಕೆಂದು ಇಂದ್ರಮ್ಮ ಹಾಗೂ ಇತರೆ ಮೂವರು ಮಹಿಳೆಯರು ತೋಟದಲ್ಲಿ ತೆರಳುತಿದ್ದ ಸಂದರ್ಭ, ಏಕಾಏಕಿ ಬಂದ ಆರೋಪಿ, ಮೊದಲಿಗೆ ಪತ್ನಿ ಇಂದ್ರಮ್ಮಗೆ ದೊಣ್ಣೆಯಿಂದ ಹೊಡೆದಿದ್ದು

ಜೊತೆಯಲ್ಲಿದ್ದ ಇತರೆ ಕೆಲಸಗಾರರು ಆರೋಪಿ ಹೊಡೆಯುವುದನ್ನು ತಪ್ಪಿಸಲು ಮುಂದಾಗಿದ್ದಾರೆ. ಆದರೆ ಆರೋಪಿ ತಕ್ಷಣ ತಾನು ತಂದಿದ್ದ ಮಚ್ಚಿನಿಂದ ಅವರೆಲ್ಲರನ್ನು ಬೆದರಿಸಿದ್ದರಿಂದ ಭಯದಿಂದ ದೂರ ಓಡಿದ್ದಾರೆ.

ತಕ್ಷಣವೇ ಆರೋಪಿ ಒಂದು ಕೈಯಲ್ಲಿ ಪತ್ನಿಯ ತಲೆ ಕೂದಲನ್ನು ಹಿಡಿದು ಕುತ್ತಿಗೆ, ತಲೆ, ಕೈ ಕಾಲುಗಳಿಗೆ ಮಚ್ಚಿನಿಂದ ಮನಸೋ ಇಚ್ಛೆ ಕೊಚ್ಚಿ ಕೊಲೆಗೈದು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಕೊಲೆಗೆ ಏನು ಕಾರಣ ಎಂಬುದು ಗಂಡನ ಬಂಧನದ ನಂತರ ವಿಛಾರಣೆಯಲ್ಲಿ ತಿಳಿದು ಬರಬೇಕಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ಹಾಗೂ ಅರೇಹಳ್ಳಿ  ಸುರೇಶ್(PSI) ಮತ್ತು ಸಿಬ್ಬಂದಿ ಭೇಟಿನೀಡಿ ಪರಿಶೀಲಿಸಿ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ದು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆಂದು ತೆರಳುತ್ತಿದ್ದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚೀಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಇಂದ್ರಮ್ಮ (48) ಮೃತ ಮಹಿಳೆ. ಆರೋಪಿ ಚಂದ್ರಯ್ಯ (53) ತಲೆ ಮರೆಸಿಕೊಂಡಿದ್ದು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.