Arsikere

ಮಹಿಳಾ ಪೋಲೀಸ್ ಕೊಲೆಗೈದು ಆತ್ಮಹತ್ಯೆಗೆ ಶರಣು

By

September 17, 2022

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಿಂದ ನಾಪತ್ತೆಯಾಗಿದ್ದ ಮಹಿಳಾ ಪೋಲೀಸ್ ಪೇದೆ ಶವ ಅರಸೀಕೆರೆ ತಿಪಟೂರು ರಾಷ್ಟ್ರೀಯ ಹೆದ್ದಾರಿ 206ರ ಮೈಲನ ಹಳ್ಳಿಯ ಪೊದೆಯೊಂದರಲ್ಲಿ ಪತ್ತೆಯಾಗಿದೆ.

ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾ ಇತ್ತೀಚೆಗಷ್ಟೇ ನಾಪತ್ತೆಯಾಗಿದ್ದರು. ಅವರನ್ನು ಹುಡುಕಾಡಿದಾಗ ಅವರ ಶವ ರಸ್ತೆ ಬದಿ ಪತ್ತೆಯಾಗಿತ್ತು.

ಚಿಕ್ಕಪ್ಪನ ಮಗನೇ ಕೊಲೆಗೈದು ಆತ್ಮಹತ್ಯೆ

ಸುಧಾ ಅವರ ಚಿಕ್ಕಪ್ಪನ ಮಗ ಮಂಜುನಾಥ್. ಆತ ಸುಧಾರಲ್ಲಿ ಹಣಕಾಸು ವ್ಯವಹಾರ ಮಾಡಿಕೊಂಡಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿ ಆತ ಆಕೆಯನ್ನು ಕೊಲೆಗೈದು ಬಳಿಕ ಶಿವಮೊಗ್ಗದ ಲಾಡ್ಜ್‌ನಲ್ಲಿ ನೇಣಿಗೆ ಶರಣಾಗಿದ್ದಾನೆ.