ಯೋಧನ ತಾಯಿ ಕೊಲೆ ಕೇಸ್ ಟ್ವಿಸ್ಟ್ , ಚಿನ್ನಕ್ಕಾಗಿ ಕೊಲೆ ಮಾಡಿ ಬಿಟ್ಟ ಆತ

0

ಹಾಸನ : ಚಿನ್ನಕ್ಕಾಗಿ ಮಹಿಳೆಯನ್ನು ಕೊಲೆ ಮಾಡಿ ಏನೂ ಗೊತ್ತಿಲ್ಲದಂತೆ ಅದೇ ಗ್ರಾಮದಲ್ಲಿ ಎಂದಿನಂತೆ ತಿರುಗುತ್ತಿದ್ದ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ನಾಟಕವಾಡುತ್ತಿದ್ದ ಕೊಲೆ ಆರೋಪಿ ಇದೀಗ ಜೈಲುಪಾಲಾಗಿದ್ದಾನೆ.

ಈ ಸಂಬಂಧ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ಸುದ್ದಿಗೋಷ್ಠಿ ನಡೆಸಿ ಈ ಸಂಬಂಧಿಸಿದಂತೆ ಮಾತನಾಡಿ, ಹಾಸನ ತಾಲ್ಲೂಕಿನ ಶಾಂತಿಗ್ರಾಮ ಠಾಣಾ ವ್ಯಾಪ್ತಿಯ ನಾರಾಯಣಪುರ ಗ್ರಾಮದಲ್ಲಿ ಜು.20ರಂದು ರತ್ನಮ್ಮ ಕೋಂ ಗೋವಿಂದೇಗೌಡ ಎಂಬ ಮಹಿಳೆ ನಾಪತ್ತೆಯಾಗಿದ್ದಾರೆ ಎಂದು ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ತೀವ್ರ ತನಿಖೆ ನಡೆಸಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದರೂ ಆರೋಪಿ ಮತ್ತು ಮಹಿಳೆಯ ಗುರುತುಗಳು ಪತ್ತೆ ಹಚ್ಚಲಾಗಿರಲಿಲ್ಲ ಎಂದರು.

ಇದೇ ತಿಂಗಳು 12 ರಂದು ನಾರಾಯಣಪುರ ಗ್ರಾಮದ ಸ್ವಾಮಿ ಎಂಬುವವರ ಜೋಳದ ಹೊಲದ ಮಧ್ಯದಲ್ಲಿ ಒಂದು ಅಸ್ಥಿಪಂಜರದ ಮೂಳೆಗಳನ್ನು ಕೆಲಸ ಮಾಡಲು ತೆರಳಿದ್ದ ಕಾರ್ಮಿಕರಿಗೆ ಪತ್ತೆಯಾಗಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದಾಗ, ಸ್ಥಳ ಪರಿಶೀಲನೆ ನಡೆಸಿದಾಗ ರತ್ನಮ್ಮ ಎಂಬುವವರು ಕಾಣೆಯಾಗಿದ್ದ ಸಂದರ್ಭದಲ್ಲಿ ಧರಿಸಿದ್ದ ಬಟ್ಟೆ, ಕಾಲುಂಗುರ ಮತ್ತು ತಲೆ ಕೂದಲುಗಳನ್ನು ಆಧರಿಸಿ ತನಿಖೆ ಎಂದರು. ಮುಂದುವರಿಸಲಾಯಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿಗ್ರಾಮ ಠಾಣೆಯ ವೃತ್ತ ನಿರೀಕ್ಷಕ ಸುರೇಶ್‌ ಅವರ ನೇತೃತ್ವದಲ್ಲಿ ತನಿಖೆ ತಂಡವನ್ನು ರಚಿಸಲಾಯಿತು. ಈ ಸಂಬಂಧ ಎ. ಗುಡುಗನಹಳ್ಳಿ ಗ್ರಾಮದ ಓರ್ವ ಶಂಕಿತ ಮಹೇಶ್ ಎಂಬಾತನನ್ನು ಬಂಧಿಸಿ ತನಿಖೆ ನಡೆಸಲಾಯಿತು. ಆದರೆ ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೂ ಕೂಡ ಯಾವುದೇ ಮಾಹಿತಿಗಳು ಲಭ್ಯವಾಗಲಿಲ್ಲ ಎಂದು ಹೇಳಿದರು.

ಈ ಪ್ರಕರಣವನ್ನು ಆರೋಪಿಗಳನ್ನು ಬಂಧಿಸಲು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪೊಲೀಸ್‌ ಇಲಾಖೆ ಸಾಕಷ್ಟು ಹರಸಾಹಸಪಡಬೇಕಾಯಿತು. ಎಲ್ಲಾ ಆಯಾಮಗಳಿಂದ ತನಿಖೆ ಆರಂಭಿಸಿದಾಗ ಮೃತ ಮಹಿಳೆ ಧರಿಸಿದ್ದ 23ಗ್ರಾಂ ಮಾಂಗಲ್ಯ ಸರ ಮತ್ತು ಓಲೆಗಳು ನಾಪತ್ತೆಯಾಗಿದ್ದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದಾಗ ಸಣ್ಣ ಸುಳಿವಿನ ಮೇಲೆ ಆರೋಪಿಯನ್ನು ಬಂಧಿಸಲಾಯಿತು ಎಂದರು.

ಅದೇ ಗ್ರಾಮದ ಜಿ.ಎನ್, ಮಧುರಾಜ್ ಅಲಿಯಾಸ್ ರಾಜು ಅಲಿಯಾಸ್ ಗುಂಡ (24) ಎಂಬಾತ ಮಹಿಳೆ ನಾಪತ್ತೆಯಾದ ಮಾರನೇ ದಿನ ಅಂದರೆ ಜು.21ರಂದು ಹಾಸನದ ಐಐಎಫ್‌ಎಲ್‌ನಲ್ಲಿ ತಾನು ಅಡವಿಟ್ಟಿದ್ದ ಆಭರಣಗಳು ಹರಾಜಿಗೆ ಬಂದಿದ್ದನ್ನು ಬಿಡಿಸಿಕೊಳ್ಳಲು ತೆರಳಿದ್ದ. ಇದೇ ಅನುಮಾನದ ಮೇಲೆ ಆತನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ಆರೋಪಿ ಸತ್ಯ ಒಪ್ಪಿಕೊಂಡಿದ್ದು, ರತ್ನಮ್ಮನನ್ನು ಕೊಲೆ ಮಾಡಿ ಆಭರಣಗಳನ್ನು ಜ್ಯೂಯಲ‌ ಅಂಗಡಿಗೆ ಮಾರಾಟ ಮಾಡಿದ್ದೇನೆ ಎಂದು ತಿಳಿಸಿದ್ದಾನೆ ಎಂದು ಮಾಹಿತಿ ನೀಡಿದರು.

ಪಾಪಿಷಿ ಕೊಲೆಗಡುಕ ಮಧುರಾಜ್ ಅದೇ ಊರಿನಲ್ಲಿದ್ದುಕೊಂಡು ಸಣ್ಣ ಅನುಮಾನ ಬರದಂತೆ ನಟನೆ ಮಾಡಿಕೊಂಡು ಪ್ರತಿನಿತ್ಯವೂ ಎಂದಿನಂತೆ ಊರಿನಲ್ಲಿ ತಿರುಗಾಡುತ್ತಿದ್ದ. ಇಡೀ ಗ್ರಾಮವೇ ಭಯದ ವಾತಾವರಣದಲ್ಲಿದ್ದರೂ ಕೂಡ ಈತ ಮಾತ್ರ ನಿರ್ಭಯವಾಗಿ ತಿರುಗಾಡುತ್ತಿದ್ದ. ಸಣ್ಣ ಸುಳಿವು ಸಿಗದಂತೆ ಜೋಳದ ಹೊಲದಲ್ಲಿ ಮೃತ ದೇಹವನ್ನು ಹಾಕಿದ್ದಾನೆ ಎಂದು ಹೇಳಿದರು.

ಆರೋಪಿಯು ಈ ಹಿಂದೆಯೂ ಕೂಡ ಒಂದು ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದು, ಈತನನ್ನು ಬಂಧಿಸಿ 23 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಹೇಳಿದರು. ಈ ಪ್ರಕರಣ ಭೇದಿಸಿದ ತಂಡವನ್ನು ಜಿಲ್ಲಾ ಪೊಲೀಸ್

ವರಿಷ್ಠಾಧಿಕಾರಿಗಳು ಅಭಿನಂದಿಸಿದರು. ಇದೇ ವೇಳೆ ತಂಡಕ್ಕೆ 20 ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ತಮ್ಮಯ್ಯ, ಶಾಂತಿ ಗ್ರಾಮ ವೃತ್ತ ನಿರೀಕ್ಷಕ ಸುರೇಶ್‌ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

ಕೊಲೆಗಾರನ ಬಗ್ಗೆ ಮಾಹಿತಿ ಕೊಟ್ಟವನೇ ಕೊಲೆಗಾರ! ಹಾಸನದ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!!

ಹಾಸನ: ಕೊಲೆ ಮಾಡಿದ ಆರೋಪಿಯೇ ಪೊಲೀಸರಿಗೆ ದಾರಿ ತಪ್ಪಿಸಿದಂತಹ ಪ್ರಕರಣ ಇದಾಗಿದ್ದು, ಕೊನೆಗೂ ಆತನನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಹಾಸನ ಜಿಲ್ಲೆಯ ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾರಾಯಣಪುರ ಗ್ರಾಮದ ರತ್ನಮ್ಮ ಎಂಬ ಮಹಿಳೆಯೊಬ್ಬರು ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲು ಮಾಡಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಕೊಲೆ ಮಾಡಿದ ವ್ಯಕ್ತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದ.
ಮಧುರಾಜ್ (24) ಎಂಬಾತ ಪೊಲೀಸರನ್ನು ಸಂಪರ್ಕಿಸಿ, ರತ್ನಮ್ಮನವರ ಚಿಕ್ಕಪ್ಪನ ಮಗ ಮಹೇಶ್ ಎಂಬಾತನೇ ಕೊಲೆ ಮಾಡಿರುವ ಶಂಕೆಯಿದೆ. ತನ್ನ ಜತೆಗೆ ಸ್ನೇಹ ಹೊಂದಿರುವ ಆತ, ಕುಡಿದ ಅಮಲಿನಲ್ಲಿ ತನಗೆ 20 ಸಾವಿರ ರೂ. ಕೊಟ್ಟರೆ ರತ್ನಮ್ಮನ ಇರುವಿಕೆಯ ಬಗ್ಗೆ ವಿವರ ಕೊಡುವುದಾಗಿ ಹೇಳುತ್ತಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ. ಹೀಗಾಗಿ, ಪೊಲೀಸರು ಮಹೇಶನನ್ನು ವಶಕ್ಕೆ ಪಡೆದು ತಮ್ಮದೇ ಆದ ರೀತಿಯಲ್ಲಿ ಪ್ರತಿದಿನ ವಿಚಾರಣೆ ನಡೆಸಿದ್ದರು.
ಇತ್ತ ವಿಚಾರಣೆ ನಡೆಯುತ್ತಿರುವಾಗ, ನಾರಾಯಣಪುರ ಗ್ರಾಮದ ಸ್ವಾಮಿ ಎಂಬುವವರ ಜೋಳದ ಜಮೀನಿನಲ್ಲಿ ಮಹಿಳೆಯ ಕೆಲ ಮೂಳೆಗಳು ಮತ್ತು ಒಂದು ಕಾಲುಂಗುರ ದೊರೆತಿತ್ತು. ಮಧುರಾಜ್ ನೀಡಿದ್ದ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ತನಿಖೆ ಮಾಡಲು ಮುಂದಾದರು. ಜಮೀನಿನಲ್ಲಿ ಸಿಕ್ಕಿದ್ದ ಪಳೆಯುಳಿಕೆಗಳು ರತ್ನಮ್ಮನ ಮೃತ ದೇಹದ ಕೆಲ ಭಾಗಗಳು ಎಂಬುದು ಖಚಿತವಾದವು.

ಅತ್ತ, ರತ್ನಮ್ಮನ ಪೋಷಕರು ಕೂಡಾ ಸಂಬಂಧಿಕ ಮಹೇಶ್ ಮೇಲೆಯೇ ಆರೋಪ ಮಾಡಿದ್ದರು. ಕುಡಿದ ಅಮಲಿನಲ್ಲಿ ಕೊಲೆ ಮಾಡಿರಬಹುದು ಎಂದು ದೂರನ್ನೂ ನೀಡಿದ್ದರು.

ಹಾಗಾಗಿ, ಪುನಃ ಮಹೇಶನನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಿಸಿದಾಗ ಆತ, ತಾನು ಕೊಲೆ ಮಾಡಿಲ್ಲ. ಇದಕ್ಕೂ ನಂಗೂ ಯಾವುದೇ ಸಂಬಂಧ ಇಲ್ಲ ಅಂತಲೇ ಹೇಳಿದ್ದ. ಪೊಲೀಸ್ ರೀತಿಯಲ್ಲಿ ವಿಚಾರಣೆ ಮಾಡಿದಾಗಲೂ ಆತ ಅದನ್ನೇ ಹೇಳಿದ್ದ. ತೀರಾ ಗೊಂದಲಮಯವಾಗಿದ್ದ ಈ ಪ್ರಕರಣವನ್ನು ಪೊಲೀಸರು ವಿವಿಧ ಆಯಾಮಗಳಲ್ಲಿ ಭೇದಿಸಲು ಮುಂದಾದರು.
ಆಗ ಪೊಲೀಸರಿಗೆ ಒಂದು ಉಪಾಯ ಹೊಳೆಯಿತು. ರತ್ನಮ್ಮನ ಆಭರಣಕ್ಕಾಗಿಯೇ ಕೊಲೆ ನಡೆದಿರುವುದು ಖಚಿತವಾಗಿದ್ದರಿಂದ, ಆರೋಪಿಯು ಅದನ್ನು ಎಲ್ಲಾದರೂ ಮಾರಿರುತ್ತಾನೆ ಅಥವಾ ಗಿರವಿ ಇಟ್ಟಿರುತ್ತಾನೆ ಎಂದೆಣಿಸಿ ಅದನ್ನು ಭೇದಿಸಲು ಮುಂದಾದರು.
ಹಾಗಾಗಿ, ಜಿಲ್ಲೆಯ ಎಲ್ಲಾ ಗಿರವಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ರತ್ನಮ್ಮನ ಚಿನ್ನಾಭರಣಗಳು ಖಾಸಗಿ ಚಿನ್ನದ ಅಂಗಡಿಯಲ್ಲಿ ಗಿರವಿ ಇಟ್ಟಿದ್ದು ಗೊತ್ತಾಯಿತು. ಗಿರವಿ ಇಟ್ಟ ವ್ಯಕ್ತಿ ಯಾರೆಂದು ವಿಚಾರಿಸಿದಾಗ ಅದು ಮಹೇಶ್ ಮೇಲೆ ಕೊಲೆಯ ಆರೋಪ ಮಾಡುತ್ತಿದ್ದ ಮಧುರಾಜ್ ನಿಜವಾದ ಕೊಲೆಗಾರ ಎಂಬುದು ಮನದಟ್ಟಾಯಿತು. ಆತನನ್ನು ಕರೆಸಿ ಪೊಲೀಸರ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಇಡೀ ಪ್ರಕರಣ ಬಯಲಾಯಿತು.

ರಾಜಾರೋಷವಾಗಿ ತಿರುಗಾಡಿಕೊಂಡಿದ್ದ ಮಧುರಾಜ್

ರತ್ನಮ್ಮನ ಕೊಲೆ ಪ್ರಕರಣದಲ್ಲಿ ಅದೇ ಗ್ರಾಮದ ಮಧುರಾಜ್ (24) ಕೊಲೆ ಮಾಡಿ ರಾಜಾರೋಷವಾಗಿ ಗ್ರಾಮದಲ್ಲಿ ತಿರುಗಾಡಿಕೊಂಡಿದ್ದ. ಪೊಲೀಸರು ಬಂದಾಗ್ಲೂ ಕೂಡ ನಿರ್ಭೀತ ನಾಗದೇ, ನಾನು ಕೊಲೆ ಮಾಡಿದ ಪ್ರಕರಣವನ್ನು ಮುಚ್ಚಿ ಹಾಕಲು ಮತ್ತೊಬ್ಬನ ಮೇಲೆ ಆರೋಪ ಒರೆಸಿ, ತನ್ನ ಪಾಡಿಗೆ ತಾನಿದ್ದ ಆದರೆ ಈತನ ಬಗ್ಗೆ, ತನಿಖೆ ನಡೆಸಿದಾಗ ಇತನೇ ಕೊಲೆಗಾರ ಎಂಬುದು ಗೊತ್ತಾಗುತ್ತದೆ ಅಲ್ಲದೆ ಈ ಹಿಂದೆ, ಗುಂಡು ಹಾರಿಸಿದ ಪ್ರಕರಣ ಒಂದರಲ್ಲಿ ಮೂರನೆಯ ಆರೋಪಿಯಾಗಿದ್ದ ಎಂಬುದು ಗೊತ್ತಾಗಿದೆ. ಪ್ರಕರಣ ಭರಿಸಿದ ತಂಡಕ್ಕೆ ಎಸ್ಪಿ ಹರಿರಾಮ ಶಂಕರ್ 20 ಸಾವಿರ ರೂ. ನಗದನ್ನ ಬಹುಮಾನವಾಗಿ ನೀಡಿದ್ದಾರೆ.

LEAVE A REPLY

Please enter your comment!
Please enter your name here