CRIME DAIRY HASSAN

ಬೆಟ್ಟಿಂಗ್, ರಮ್ಮಿ ಚಟಕ್ಕೆ ಬಿದ್ದ M COM ಪದವೀಧರ ಸಾಲ ತೀರಿಸಲು ಕಳ್ಳತನಕ್ಕಿಳಿದ , ರೋಚಕವಾಗಿ ಸಿಕ್ಕಿಬಿದ್ದ

By

October 06, 2022

ಹಾಸನ: ಮೈಸೂರಿನ ಮುಂಡೂರು ಗ್ರಾಮದ ಯುವಕನೋರ್ವ ಎಂ.ಕಾಂ. ಓದಿ, ಖಾಸಗಿ ಕಂಪನಿಯಲ್ಲಿ ತಿಂಗಳಿಗೆ 35 ಸಾವಿರ ವೇತನ ಪಡೆಯುತ್ತಿದ್ದವನೂ. ವೀಕೆಂಡ್ ನಲ್ಲಿ ಜೂಜಿನ ಚಟಕ್ಕೆ ಬಿದ್ದು, ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್, ರಮ್ಮಿ ಅಂತ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ. ಈ ಸಾಲ ತೀರಿಸಲು ಆರೋಪಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಚಿನ್ನ ಕದಿಯುವ ಮೂಲಕ ಕಳ್ಳತನದ ಹಾದಿಯನ್ನು ಹಿಡಿದಿದ್ದನು. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೆಪ್ ಆಗುತ್ತಿದ್ದವ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆರೋಪಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದ್ದು, ವಾರವೆಲ್ಲ ರಮ್ಮಿ ಆಡಿ ಅಭಿಷೇಕ್ ಹಣ ಕಳೆದುಕೊಳ್ಳುತ್ತಿದ್ದ. ಹೀಗಾಗಿ ಭಾನುವಾರ ಮಾತ್ರ ಸರಗಳ್ಳತನ ಮಾಡುತ್ತಿದ್ದನಂತೆ. ಹಾಸನ ಜಿಲ್ಲೆಯ ಕೊಣನೂರು, ಹೊಳೆನರಸೀಪುರ, ಗೊರೂರು, ಅರಕಲಗೂಡು, ದುದ್ದ ಪೊಲೀಸ್ ಠಾಣೆ ಗಳಲ್ಲಿ ಒಟ್ಟು ಏಳು ಕಡೆ ಸರ ಗಳ್ಳತನ ನಡೆದಿದ್ದು, 30 ರಿಂದ 40 ಕಿಲೋಮಿಟರ್ ವ್ಯಾಪ್ತಿ ಯಲ್ಲೇ ಕಳ್ಳವಾಗುತ್ತಿತ್ತು. ಈ ಏಳು ಪ್ರಕರಣಗಳು ಕೂಡ ಭಾನುವಾರವೇ ನಡೆದದ್ದು ವಿಶೇಷವಾಗುತ್ತಿತ್ತು , ಹಾಗೂ ಪ್ರಶ್ನಾಹರ್ಹವಾಗಿತ್ತು . ಈ ಪ್ರಕರಣಗಳ ಕಂಡು ಹಿಡದವರಿಗೆ ಬಹುಮಾನ ಘೋಷಿಸಿದ್ದಾರೆ.

ಕಳ್ಳತನದಲ್ಲಿ ಹೆಲೈಟ್ ಧರಿಸಿರುತ್ತಿದ್ದನು. ಆದರೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನಾಧರಿಸಿ ಅಖಾಡಕ್ಕಿಳಿದ ಪೊಲೀಸರು ., ಅವರ ಸ್ಟೈಲ್ ನಲ್ಲೇ ವಿಚಾರಿಸಿ ಸಾಕ್ಷಿ ಸಮೇತ ಹಿಡಿದು ಕಂಬಿಹಿಂದೆ ತಳ್ಳಿದ್ದಾರೆ .,

ಒಟ್ಟಿನಲ್ಲಿ ದುಡ್ಡಿನ ಹಿಂದೆ ಬಿದ್ದ ಪದವೀಧರ ಈಗ ಜೈಲು ಕಂಬಿ ಎಣಿಸುವಂತಾಗಿದೆ.

ಸರಗಳ್ಳತನ ಪ್ರಕರಣವನ್ನು ಭೇದಿಸಿದ ಸರ್ಕಲ್‌ ಇನ್ಸ್‌ ಪೆಕ್ಟರ್ ಸುರೇಶ್ ಅವರ ತಂಡಕ್ಕೆ ಎಸ್‌ಪಿ ಹರಿರಾಂ ಶಂಕರ್ ಬಹುಮಾನ ಘೋಷಿಸಿದ್ದಾರೆ

ಹಾಸನ ಪೊಲೀಸರು ಕೊನೆಗೂ ಅಭಿಷೇಕ್‌ನನ್ನು ಬಂಧಿಸಿದ್ದಾರೆ. ಬಂಧಿತ ಅಭಿಷೇಕ್ ನಿಂದ ಆರು ಲಕ್ಷದ ಐವತ್ತು ಸಾವಿರ ಮೌಲ್ಯದ 135 ಗ್ರಾಂ ತೂಕದ ಏಳು ಚಿನ್ನದ ಸರಗಳನ್ನು ಪೊಲೀಸರು ವಶಕ್ಕೆ ಪಡೆದು ಇದೀಗ ತನಿಖೆ ಮುಂದುವರಿಸಿದ್ದಾರೆ.,

ಬೆಟ್ಟಿಂಗ್, ರಮ್ಮಿ ಚಟಕ್ಕೆ ಬಿದ್ದ ಎಂ.ಕಾಂ ಪದವೀಧರ ಸಾಲ ತೀರಿಸಲು ಕಳ್ಳತನಕ್ಕಿಳಿದವನು ಜೈಲು , ಕೋರ್ಟು ಅಲೆಯ ಬೇಕಿದೆ .,

ಹಾಸನ್ ನ್ಯೂಸ್ ಸಲಹೆ : ಬೆಟ್ಟಿಂಗ್ ಬೇಡ , ವಿದ್ಯಾಭ್ಯಾಸ ಪಡೆಯೋಣ , ಅಥವಾ ಯಾವುದಾದರೂ ವೃತ್ತಿ ಹಾರಿಸೋಣ ನೆಮ್ಮದಿಯ ಜೀವನ ನಡೆಸೋಣ , ಹಾಸಿಗೆ ಇದ್ದಷ್ಟೇ ಕಾಲು ಚಾಚೋಣ

ಧನ್ಯವಾದಗಳು