ಹಾಸನ (ನ.) : ವಿಧವೆಯ ಜೊತೆ ಮದುವೆಯಾಗಿರೊ ವಿಚಾರ ಮುಚ್ಚಿಟ್ಟು 2ನೇ ಮದುವೆ ತಯಾರಿ ನಡೆಸಿದ್ದ ಯೋಧ ಕಿರಣ್ ಕುಮಾರ್ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಟಪಕ್ಕೆ ಬಂದು ಮಹಿಳೆ ಮದುವೆ ನಿಲ್ಲಿಸಿದ್ರು. ಇದರಿಂದ ಮನನೊಂದ ಯೋಧ ಕಿರಣ್ ಕುಮಾರ್ ಮಹಿಳೆ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಿರಣ್ ಹಾಗೂ ಆಶಾ ಮೃತ ದುರ್ದೈವಿಗಳಾಗಿದ್ದಾರೆ. ಯೋಧ ಕಿರಣ್ ಕುಮಾರ್ ಮತ್ತು ಆಶಾ ಹಾಸನ ತಾಲೂಕಿನ ಹೊಂಗೆರೆ ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಶರಣಾಗಿದ್ದಾರೆ.
ಕಲ್ಯಾಣ ಮಂಟಪದಲ್ಲಿ ಮೊದಲ ಪತ್ನಿ ಗಲಾಟೆ
ಯೋಧ ಕಿರಣ್ ಕುಮಾರ್ ವಿಧವೆ ಆಶಾ ಎಂಬುವರನ್ನು ಮದುವೆಯಾಗಿದ್ದರು. ಬಳಿಕ 2ನೇ ಮದುವೆ ವಿಷಯ ಬಚ್ಚಿಟ್ಟು ಯೋಧ ಕಿರಣ ಕುಮಾರ್ 2ನೇ ಮದುವೆಯಾಗಲು ತಯಾರಿ ನಡೆಸಿದ್ದನು. ಹಾಸನ ನಗರದ ಹೊರ ವಲಯದ ಬೂವನಹಳ್ಳಿ ಬಳಿಯ ಕಲ್ಯಾಣ ಮಂಟಪದಲ್ಲಿ ಮದುವೆಗೆ ಸಕಲ ಸಿದ್ಧತೆಯಾಗಿತ್ತು. ವಧು-ವರ ಸಪ್ತಪದಿ ತುಳಿಯುವುದೊಂದೆ ಬಾಕಿ ಇತ್ತು. ಆದ್ರೆ ಈ ವೇಳೆ ಕಿರಣ್ ಕುಮಾರನ ಮೊದಲನೇ ಹೆಂಡತಿ ಆಶಾ ಕಲ್ಯಾಣ ಮಂಟಪಕ್ಕೆ ಬಂದು ರಾದ್ಧಾಂತ ಮಾಡಿ ಮದುವೆ ನಿಲ್ಲಿಸಿದ್ದಾರೆ.
ವಿಧವೆ ಮಹಿಳೆ ಜೊತೆ ಗುಟ್ಟಾಗಿ ವಿವಾಹ
ವಿಧವೆ ಮಹಿಳೆ ಆಶಾ ಎಂಬಾಕೆಯನ್ನು ಕಿರಣ್ ಕುಮಾರ್ ಅವರು 6 ತಿಂಗಳ ಹಿಂದೆ ಮನೆಯೊಳಗೆ ದೇವರ ಮುಂದೆ ತಾಳಿ ಕಟ್ಟಿ ಮದುವೆಯಾಗಿದ್ದರು. ಈಗ ಮತ್ತೊಂದು ಮದುವೆ ಆಗುತ್ತಿದ್ದಾರೆಂಬುದು ಆಶಾ ಆರೋಪ ಮಾಡಿದ್ದಾರೆ. ಮಹಿಳೆ ಬಂದು, ವರ (ಯೋಧ) ಕಿರಣ್ ಕುಮಾರ್ ವಿಚಾರ ಬಹಿರಂಗ ಮಾಡುತ್ತಲೇ ಹುಡುಗಿ ಮನೆಯವರು ಮದುವೆ ನಿಲ್ಲಿಸಿದರು.
ಕಿರಣ್ , ಆಶಾ ಗಲಾಟೆ
ಯೋಧ ಕಿರಣ್ ಕುಮಾರ್ನಿಂದ ತನಗಾದ ವಂಚನೆ ಬಗ್ಗೆ ಮಹಿಳೆ ಮದುವೆ ಮಂಟಪದಲ್ಲಿ ಹೇಳಿದ್ದಾಳೆ. ಬಳಿಕ ಹುಡುಗಿ ಮನೆಯವರು ಯೋಧನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಟದಲ್ಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆಶಾ ಜೊತೆ ಮಂಟಪದಲ್ಲೇ ಕಿರಣ್ ಗಲಾಟೆ ಕೂಡ ಮಾಡಿದ್ದ
ಸ್ಥಳಕ್ಕೆ ಪೊಲೀಸರ ಭೇಟಿ, ಸಂಧಾನ
ಮಹಿಳೆಯ ಹೇಳಿಕೆ ಮದುವೆ ಸಂಭ್ರಮದಲ್ಲಿದ್ದವರಿಗೆ ಶಾಕ್ ನೀಡಿತು. ವಿಷಯ ತಿಳಿದು ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದರು. ನಂತರ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಿದರು.
ಕಾಡಿನ ಬಳಿ ಮರಕ್ಕೆ ಆತ್ಮಹತ್ಯೆ
ನಂತರ ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನವಾದ ಬಳಿಕ ಯೋಧ ಕಿರಣ್ ಕುಮಾರ್ ಮತ್ತು ಆಶಾ ಹೊಂಗೆರೆ ಅರಣ್ಯದ ಬಳಿ ತೆರಳಿದ್ದಾರೆ. ಅಲ್ಲಿ ತನ್ನ ಸಂಬಂಧಿಯೊಬ್ಬರಿಗೆ ವಾಟ್ಸಾಪ್ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತಿ ಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಟಪದಲ್ಲೇ ಬಿತ್ತು ಧರ್ಮದೇಟು
ಮತ್ತೊಂದು ಪ್ರತ್ಯೇಕ ಪ್ರಕಣ; ಬೆಂಗಳೂರಿನಲ್ಲಿ ತನ್ನ ಸಂಬಂಧಿಯೊಬ್ಬರನ್ನೇ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಪಾಪಿ ಆಕೆಯಿಂದ ದೂರವಾಗಿದ್ದ. ತನ್ನ ಹಳೆ ಮದುವೆ ವಿಚಾರ ಮುಚ್ಚಿಟ್ಟು ಹಾಸನದಲ್ಲಿ ಹುಡುಗಿ ನೋಡಿ ಮದುವೆ ತಯಾರಿ ಮಾಡಿಕೊಂಡಿದ್ದ. ಮದುವೆ ವಿಚಾರ ತಿಳಿದ ಈತನ ಮೊದಲ ಪತ್ನಿ ಹೇಗೋ ಕೊನೆ ಗಳಿಗೆಯಲ್ಲಿ ಹುಡುಗಿ ಮನೆಯವರನ್ನು ಸಂಪರ್ಕ ಮಾಡಿ ತನ್ನ ಮದುವೆ ಫೋಟೋ ಕಳಿಸಿದ್ದಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಮದುವೆ ನಿಲ್ಲಿಸಿದ್ದಾರೆ. ಬಳಿಕ ಮಧುಸೂದನಿಗೆ ಧರ್ಮದೇಟು ಕೊಟ್ಟಿದ್ದಾರೆ.
ವಿಧವೆಯೊಬ್ಬಳೊಂದಿಗೆ ಜೊತೆ ಸ್ನೇಹ ಬೆಳೆಸಿ, ಅದು ಪ್ರೇಮಕ್ಕೆ ತಿರುಗಿದ ನಂತರ ಬಾಳು ಕೊಡುವುದಾಗಿ ಯಾರಿಗೂ ತಿಳಿಯದಂತೆ ನಾಲ್ಕು ಗೋಡೆಯ ಮಧ್ಯೆ ತಾಳಿಕಟ್ಟದ ಯೋಧ ಹಾಗೂ ವಿವಾಹವಾಗಿದ್ದ ಮಹಿಳೆ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನಗರದ ಎಂ.ಹೊಸಕೊಪ್ಪಲು ನಿವಾಸಿ ಆಶಾ ಮತ್ತು ತಾಲೂಕಿನ ಮುತ್ತಿಗೆ ಗ್ರಾಮದ ಕಿರಣ್ ಕುಮಾರ್ ಇಬ್ಬರೂ ಶಾಂತಿಗ್ರಾಮ ಬಳಿಯ ಅರಣ್ಯದಲ್ಲಿ ಒಂದೇ ಮರದಲ್ಲಿ ನೇಣಿಗೆ ಶರಣಾಗಿದ್ದು, ಮದುವೆ ಪುರಾಣ ದುರಂತ ಅಂತ್ಯ ಕಂಡಿದೆ.
ಕಳೆದ 10 ವಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವಿವಾಹಿತ ಕಿರಣ್ ಕುಮಾರ್, ರಜೆ ಮೇಲೆ ಊರಿಗೆ ಬಂದಾಗ, ಮೂರು ವರ್ಷದ ಹಿಂದೆ ಆಶಾಳ ಪರಿಚಯವಾಗಿದೆ. ಆಶಾಳ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದು, ಪದವಿ ಮುಗಿಸಿರುವ ಮಗಳು ಮತ್ತು 7ನೇ ತರಗತಿ ಓದುತ್ತಿರುವ ಮಗ ಇದ್ದಾರೆ. ಆದರೂ ಆಕೆಯೊಂದಿಗಿನ ಆರಂಭದ ಸ್ನೇಹ ಕ್ರಮೇಣ ಪ್ರೇಮಕ್ಕೆ ತಿರುಗಿದೆ.
ನಂತರ ನಿನ್ನನ್ನು ನಂಬುವುದು ಹೇಗೆ ಎಂದು ಆಶಾ ಪ್ರಶ್ನೆ ಮಾಡಿದಾಗ, ಇಲ್ಲ ಇಲ್ಲ ನಾನು ಕಡೆವರೆಗೂ ನಿನ್ನ ಜೊತೆಯಲ್ಲೇ ಇರುವೆ ಎಂದು ನಂಬಿಸಿ ದೇವರ ಫೋಟೋ ಮುಂದೆ ನಾಲ್ಕು ಗೋಡೆಯ ಮಧ್ಯೆ ಕಿರಣ್‌ಕುಮಾರ್, ಆಶಾಳಿಗೆ ತಾಳಿ ಕಟ್ಟಿ ಆಕೆಯೊಂದಿಗೆ ಸಂಸಾರ ಮಾಡಲು ಆರಂಭಿಸಿದ್ದ. ಆದರೆ ಮನೆಯವರಿಗೆ ಹೆದರಿ, ಈ ವಿಷಯವನ್ನು ಅವರಿಗೆ ಹೇಳಿರಲಿಲ್ಲ ಎಂದು ತಿಳಿದುಬಂದಿದೆ.
ಮದುವೆ ಮನೆಯಲ್ಲಿ ಗಲಾಟೆ
ಈ ನಡುವೆ ಮನೆಯವರು ಕಿರಣ್‌ಗೆ ಮದುವೆ ಮಾಡಲು ನಿರ್ಧರಿಸಿ ಹುಡುಗಿಯನ್ನೂ ಗೊತ್ತು ಮಾಡಿ ಗುರುವಾರ ನಗರದ ಹೊರ ವಲಯದ ಸಾಧನಾ ಕಲ್ಯಾಣ ಮಂಟಪದಲ್ಲಿ ವಿವಾಹ ನಿಶ್ಚಯ ಮಾಡಿದ್ದರು. ಇದಕ್ಕೆ ಮರು ಮಾತನಾಡದ ಕಿರಣ್, ಮನೆಯವರ ಒತ್ತಡಕ್ಕೆ ಮಣಿದು ಇನ್ನೊಂದು ಮದುವೆಗೆ ಓಕೆ ಎಂದಿದ್ದ. ಎಲ್ಲರ ಸಮ್ಮುಖದಲ್ಲಿ ಮದುವೆ ನಡೆಯುವ ವೇಳೆ ವಿಷಯ ತಿಳಿದು ಎಂಟ್ರಿಕೊಟ್ಟ ಆಶಾ, ಮೊದಲ ಮದುವೆ ಗುಟ್ಟನ್ನು ರಟ್ಟು ಮಾಡಿದ್ದಳು. ಕಿರಣ್ ನನ್ನನ್ನು ಮದುವೆಯಾಗಿದ್ದು, ತಿಂಗಳುಕಟ್ಟಲೆ ಸಂಸಾರ ನಡೆಸಿ ನಂತರ ಕರ್ತವ್ಯಕ್ಕೆ ತೆರಳಿದ್ದ. ಆರು ತಿಂಗಳ ಬಳಿಕ ರಜೆ ಮೇಲೆ ಬಂದು ಮತ್ತೊಂದು ಮದುವೆ ತಯಾರಾಗಿದ್ದಾನೆ ಎಂದು ದೂರಿದ್ದಳು.
ವಿವಾಹ ಗುಟ್ಟಾಗಿಡಲು 2 ಲಕ್ಷ ರೂ ಒಪ್ಪಂದ?
ಎರಡನೇ ಮದುವೆಯಾಗುವುದಾಗಿ ಕಿರಣ್ ಆಶಾಗೆ ತಿಳಿಸಿದ್ದು, ಮದುವೆ ಮನೆಗೆ ಬಂದು ಗಲಾಟೆ ಮಾಡದಂತೆ ತಾಕೀತು ಮಾಡಿ 2 ಲಕ್ಷ ರೂ ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಹಣ ತಲುಪದ ಕಾರಣ ಮೊದಲ ಹೆಂಡತಿ ಆಶಾ ಈ ವಿಚಾರವನ್ನು ಮದುವೆ ಮನೆಗೆ ಬಂದು ಬಹಿರಂಗಪಡಿಸಿದ್ದಾಳೆ. ಇವರಿಬ್ಬರ ಒಪ್ಪಂದವೂ ಕೇವಲ ಮೊಬೈಲ್ ಸಂದೇಶದಲ್ಲಿಯೇ ಆಗಿತ್ತು ಎನ್ನಲಾಗಿದೆ. ಇನ್ನು ಈ ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನವವಿವಾಹಿತ ಯೋಧ ಕಿರಣ್ ಮತ್ತು ಆಶಾರನ್ನು ಪೊಲೀಸರು ತನಿಖೆ ಮಾಡಲು ಠಾಣೆ ಕರೆದೊಯ್ದಿದ್ದರು. ಜೊತೆಗೆ ಪೋಷಕರನ್ನು ಕೂಡಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಮದುವೆ ಮನೆಯಲ್ಲಿ ರಂಪಾಟ ನಡೆದ ನಂತರವೂ ಕಿರಣ್ ಕುಮಾರ್ ಮತ್ತು ಆಶಾ ಜೊತೆಯಾಗಿ ಹೋಗಿ ಅರಣ್ಯದ ಮಧ್ಯೆ ಮರವೊಂದಕ್ಕೆ ಪ್ರತ್ಯೇಕವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ. ಇಬ್ಬರೂ ಗುರುವಾರ ಧರಿಸಿದ್ದ ಬಟ್ಟೆಯಲ್ಲೇ ನೇಣಿಗೆ ಶರಣಾಗಿದ್ದು, ಅಂದು ರಾತ್ರಿಯೇ ಸಾಯುವ ನಿರ್ಧಾರ ಮಾಡಿರುವ ಶಂಕೆ ಮೂಡಿದೆ. ಸ್ಥಳೀಯರಿಂದ ಮಾಹಿತಿ ಪಡೆದ ಶಾಂತಿಗ್ರಾಮ ಪೊಲೀಸರು, ಮೃತದೇಹಗಳನ್ನು ಕೆಳಗಿಳಿಸಿ, ಹಿಮ್ಸ್ ಆಸ್ಪತ್ರೆಗೆ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಈ ಸಂಬಂಧ ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇಶ ಕಾಯುವ ಹೆಮ್ಮೆಯ ಸೇವೆಗೆ ಸೇರಿ ಸಾರ್ವಜನಿಕವಾಗಿ ಅಪಾರ ಹೆಮ್ಮೆ ಗೌರವ ಸಂಪಾದನೆ ಮಾಡಿದ್ದ ಕಿರಣ್ ಕುಮಾರ್, ವೈಯಕ್ತಿಕವಾಗಿ ಏನೋ ಮಾಡಲು ಹೋಗಿ ಹೆಣವಾಗಿರುವುದು ಆತನ ಮನೆಯವರು, ಸಂಬಂಧಿಕರಲ್ಲಿ ಮುಜುಗರ ತರಿಸಿದೆ. ಮತ್ತೊಂದೆಡೆ ತಂದೆ ಗತಿಸಿದ ನಂತರ ತಾಯಿಯೇ ಸರ್ವಸ್ವ ಎಂದುಕೊಂಡಿದ್ದ ಆಶಾಳ ಇಬ್ಬರು ಮಕ್ಕಳು ಈಗ ಅನಾಥವಾಗಿದ್ದಾರೆ. ಹೆಣ್ಣು ಹಠಕ್ಕೆ ಬಿದ್ದರೆ, ಗಂಡು ತನ್ನ ನಿರ್ಧಾರದಲ್ಲಿ ಎಡವಿದರೆ ಏನೆಲ್ಲಾ ಆಗಲಿದೆ ಎಂಬುದಕ್ಕೆ ಈ ದುರಂತ ಸಾಕ್ಷಿಯಾಗಿದೆ.
ಬಯಲಾದ ಮದುವೆ ಪುರಾಣ ದುರಂತ ಅಂತ್ಯ
ಹಾಸನ: ವಿಧಯೊಬ್ಬಳೊಂದಿಗೆ ಸ್ನೇಹ ಬೆಳೆಸಿ, ಅದು ಪ್ರೇಮಕ್ಕೆ ತಿರುಗಿದ ನಂತರ ಬಾಳು ಕೊಡುವುದಾಗಿ ಯಾರಿಗೂ ತಿಳಿಯದಂತೆ ನಾಲ್ಕು ಗೋಡೆಯ ಮಧ್ಯೆ ತಾಳಿಕಟ್ಟದ ಯೋಧ ಕಿರಣ್ ಕುಮಾರ್, ಈಗ ಅದೇ ಮಹಿಳೆ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನಗರದ ಎಂ.ಹೊಸಕೊಪ್ಪಲು ನಿವಾಸಿ ಆಶಾ ಮತ್ತು ತಾಲೂಕಿನ ಮುತ್ತಿಗೆ ಗ್ರಾಮದ ಕಿರಣ್ ಕುಮಾರ್ ಇಬ್ಬರೂ,ಶಾಂತಿಗ್ರಾಮ ಬಳಿಯ ಅರಣ್ಯದಲ್ಲಿ ಒಂದೇ ಮರದಲ್ಲಿ ನೇಣಿಗೆ ಶರಣಾಗಿದ್ದು, ಮದುವೆ ಪುರಾಣ ದುರಂತ ಅಂತ್ಯ ಕಂಡಿದೆ.
ದುರಂತಕ್ಕೂ ಮುನ್ನ: ಕಳೆದ 10 ವಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವಿವಾಹಿತ ಕಿರಣ್ ಕುಮಾರ್, ರಜೆ ಮೇಲೆ ಊರಿಗೆ ಬಂದಾಗ, ಮೂರು ವರ್ಷದ ಹಿಂದೆ ಆಶಾಳ ಪರಿಚಯವಾಗಿತ್ತು. ಆಶಾಳ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದು, ಪದವಿ ಮುಗಿಸಿರೋ ಮಗಳು ಮತ್ತು ಮಗ ಇದ್ದಾರೆ.
ಮೊದಲು ತಾಳಿಕಟ್ಟಿದ್ದ ಮಹಿಳೆ ಜೊತೆ ಕಾಡಿನ ನಡುವೆ ಆತ್ಮಹತ್ಯೆಗೆ ಶರಣಾದ ಯೋಧ
ಮನೆಯವರಿಗೆ ಮುಜುಗರ ಆಶಾಳ ಮಕ್ಕಳು ಅನಾಥ
ದೇಶ ಕಾಯುವ ಹೆಮ್ಮೆಯ ಸೇವೆಗೆ ಸೇರಿ ಸಾರ್ವಜನಿಕವಾಗಿ ಅಪಾರ ಹೆಮ್ಮೆ ಗೌರವ ಸಂಪಾದನೆ ನಿಶ್ಚಯ ಮಾಡಿದ್ದರು. ಮಾಡಿದ್ದ ಕಿರಣ್ ಕುಮಾರ್, ವೈಯಕ್ತಿಕವಾಗಿ ಮಾಡಬಾರದ ಕೆಲಸ ಮಾಡಲು ಹೋಗಿ ಹೆಣವಾಗಿರುವುದು ಆತನ ಮನೆಯವರು, ಸಂಬಂಧಿಕರಲ್ಲಿ ಮುಜುಗರ ತರಿಸಿದೆ. ಮತ್ತೊಂದೆಡೆ ತಂದೆ ಗತಿಸಿದ ನಂತರ ತಾಯಿಯೇ ಸರ್ವಸ್ವ ಎಂದುಕೊಂಡಿದ್ದ ಆಶಾಳ ಇಬ್ಬರು ಮಕ್ಕಳು ಈಗ ಅನಾಥವಾಗಿದ್ದಾರೆ. ಹೆಣ್ಣು ಹಠಕ್ಕೆ ಬಿದ್ದರೆ, ಗಂಡು ತನ್ನ ನಿರ್ಧಾರದಲ್ಲಿ ಎಡವಿದರೆ ಏನೆಲ್ಲಾ ಆಗಲಿದೆ ಎಂಬುದಕ್ಕೆ ಈ ದುರಂತ ಕಣ್ಣ ಮುಂದಿನ ಸಾಕ್ಷಿಯಾಗಿದೆ.
ಆದರೂ ಆಕೆಯೊಂದಿಗಿನ ಆರಂಭದ ಸ್ನೇಹ ಕ್ರಮೇಣ ಪ್ರೇಮಕ್ಕೆ ತಿರುಗಿತ್ತು. ನಂತರ ನಿನ್ನನ್ನು ನಂಬುವುದು ಹೇಗೆ
ಎಂದು ಆಶಾ ಪ್ರಶ್ನೆ ಮಾಡಿದಾಗ, ಇಲ್ಲ, ಇಲ್ಲ ನಾನು ಕಡೆವರೆಗೂ ನಿನ್ನ ಜೊತೆಯಲ್ಲೇ ಇರುವೆ ಎಂದು ನಂಬಿಸಿ ದೇವರ ಫೋಟೋ
ಮುಂದೆ ನಾಲ್ಕು ಗೋಡೆಯ ಮಧ್ಯೆ ಕಿರಣ್ ಕುಮಾರ್,ಆಶಾಳಿಗೆ ತಾಳಿ ಕಟ್ಟಿ ಆಕೆಯೊಂದಿಗೆ ಸಂಸಾರ ಮಾಡಲು ಆರಂಭಿಸಿದ್ದ. ಆದರೆ ಮನೆಯವರಿಗೆ ಹೆದರಿ, ಈ ವಿಷಯವನ್ನು ಯಾರೊಬ್ಬರಿಗೂ ಹೇಳಿರಲಿಲ್ಲ.
ಆಗಲೂ ಮರು ಮಾತನಾಡದ ಕಿರಣ್,
ಮತ್ತೊಂದು ಮದುವೆ: ಈ ನಡುವೆ ಮನೆಯ ವರು ಕಿರಣ್ ಗೆ ಮದುವ ಮಾಡಲು ನಿರ್ಧರಿಸಿ ಹುಡುಗಿಯನ್ನೂ ಗೊತ್ತು ಮಾಡಿ ಗುರುವಾರ ನಗರದ ಹೊರ ವಲಯದ ಸಾಧನಾ ಕಲ್ಯಾಣ ಮಂಟಪದಲ್ಲಿ ವಿವಾಹ
ಮನೆಯವರ ಒತ್ತಡಕ್ಕೆ ಮಣದ ಇನ್ನೊಂದು ಮದುವೆಗೆ ಓಕೆ ಎಂದಿದ್ದ ಎಲ್ಲರ ಸಮುಖದಲ್ಲಿ ಮದುವೆ ನಡೆಯುವ ವೇಳೆ ವಿಷಯ ತಿಳಿದ ಎಂಟ್ರಿ ಕೊಟ್ಟ ಮೊದಲ ಮದುವೆ ಗುಟ್ಟನ್ನು ರಟ್ಟು ಮಾಡಿದ್ದಳು. ಕಿರಣ್ ನನ್ನನ್ನು ಮದುವೆಯಾಗಿದ್ದು, ತಿಂಗಳುಕಟ್ಟಲೆ ಸಂಸಾರ ನಡೆಸಿ ನಂತರ ಕರ್ತವ್ಯಕ್ಕೆ ತೆರಳಿದ್ದ ಆರು ತಿಂಗಳ ಬಳಿಕ ರಜೆ ಮೇಲೆ ಬಂದು ಮತ್ತೊಂದು ಮದುವೆ ತಯಾರಾಗಿದ್ದಾನೆ ಎಂದು ದೂರಿದ್ದಳು.
ಅಷ್ಟೇ ಅಲ್ಲ, ನಿನಗೆ ಎರಡು ಲಕ್ಷರೂ.ಕೊಡುತ್ತೇನೆ. ಮದುವೆ ಮಂಟಪಕ್ಕೆ ಬರಬೇಡ ಎಂದೂ ಹೇಳಿದ್ದ. ಯಾವುದೇ ಹಣ ನೀಡಿಲ್ಲ ಎಂದು ಬಹಿರಂಗ ಪಡಿಸಿದ್ದಳು. ಇದರಿಂದ ಇನ್ನೊಬ್ಬಳಿಗೆ ಕಿರಣ ತಾಳಿ ಕಟ್ಟಿದರೂ, ಮದುವೆ ಊರ್ಜಿತ ಆಗಿರಲಿಲ್ಲ. ನಂತರ ಪ್ರಕರಣ ಬಡಾವಣೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ರಂಪಾಟ ನಡೆದ ನಂತರವೂ ಕಿರಣ್ ಕುಮಾರ್ ಮತ್ತು ಆಶಾ ಜೊತೆಯಾಗಿ ಹೋಗಿ ಅರಣ್ಯದ ಮಧ್ಯೆ ಮರವೊಂದಕ್ಕೆ ಪ್ರತ್ಯೇಕವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ. ಇಬ್ಬರೂ ಗುರುವಾರ ಧರಿಸಿದ್ದ ಬಟ್ಟೆಯಲ್ಲೇ ನೇಣಿಗೆ ಶರಣಾಗಿದ್ದು, ಅಂದು ರಾತ್ರಿಯೇ ಸಾಯುವ ನಿರ್ಧಾರ ಮಾಡಿರುವ ಶಂಕೆ ಮೂಡಿದೆ. ಸ್ಥಳೀಯರಿಂದ ಮಾಹಿತಿ ಪಡೆದ ಶಾಂತಿಗ್ರಾಮ ಪೊಲೀಸರು, ಮೃತದೇಹಗಳನ್ನು ಕೆಳಗಿಳಿಸಿ, ಹಿಮ್ಸ್ ಆಸ್ಪತ್ರೆಗೆ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಈ ಸಂಬಂಧ ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.