ಹಾಸನ ಗ್ರಾಮಾಂತರ ವೃತ್ತದ ಪೊಲೀಸ್‌ರವರಿಂದ ದುದ್ದ ಪೊಲೀಸ್ ಠಾಣಾ ವ್ಯಾಪ್ತಿ ಚೀರನಹಳ್ಳಿ ಕೆರೆಯ ನೀರಿನಲ್ಲಿ ದೊರೆತ ಅಪರಿಚಿತ ಮಹಿಳೆಯ ಕೊಲೆ ಪ್ರಕರಣ ಪತ್ತೆ ಐವರು ಆರೋಪಿಗಳ ಬಂಧನ.

    0

    ಕೃತ್ಯದ ಹಿನ್ನೆಲೆ:

    ದಿನಾಂಕ 01.11,2020 ರಂದು ದುದ್ದ ಪೊಲೀಸ್ ಠಾಣಾ ವ್ಯಾಪ್ತಿ ಚೀರನಹಳ್ಳಿ ಗ್ರಾಮದ ಕೆರೆಯ ನೀರಿನಲ್ಲಿ ಸುಮಾರು 25-30 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ಶವವು ಪತ್ತೆಯಾಗಿದ್ದು ಈ ಸಂಬಂದ ದುದ್ಧ ಪೊಲೀಸ್, ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು.

    ಆರೋಪಿಯ ಪತ್ತೆಯ ಬಗ್ಗೆ ವಿಶೇಷ ತಂಡ ರಚನೆ :

    ಈ ಪ್ರಕರಣದ ಗಂಭೀರತೆಯನ್ನು ಅರಿತು ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ, ಹಾಸನ ರವರು ಅಪರಿಚಿತ

    ಮಹಿಳೆಯ ಹೆಸರು ಮತ್ತು ವಿಳಾಸ ಮತ್ತು ಪ್ರಕರಣದ ಆರೋಪಿಯ ಪತ್ತೆಯನ್ನು ಮಾಡುವ ಬಗ್ಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಂದಿನಿ ರವರ ಮೇಲುಸ್ತುವಾರಿಯಲ್ಲಿ ಹಾಸನ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಮಟ್ಟಸ್ವಾಮಿಗೌಡ.ಟಿ.ಆರ್ ರವರ ಉಸ್ತುವಾರಿಯಲ್ಲಿ ಹಾಸನ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ್.ಪಿ. ಮತ್ತು ದುದ್ದ ಪೊಲೀಸ್ ಠಾಣಾ ಪಿ.ಎಸ್.ಐ ಕು| ಮಧು.ಎಂ.ಸಿ ಹಾಗೂ ಸಿಬ್ಬಂದಿಗಳನ್ನು ಒಳಗೊಂಡಂತೆ ವಿಶೇಷ ತಂಡವನ್ನು ರಚಿಸಲಾಯಿತು.

    ಮೃತಳ ಹೆಸರು ಮತ್ತು ವಿಳಾಸ ಹಾಗೂ ಆರೋಪಿಯ ಪತ್ತೆಯ ಬಗ್ಗೆ ಮಡಿಕೇರಿ, ಮೈಸೂರು, ಬೆಂಗಳೂರು, ಯಾದಗಿರಿ, ಕೊಪ್ಪಳ, ಹುಬ್ಬಳ್ಳಿ ಧಾರವಾಡ, ದಾವಣಗೆರೆ ಚಿತ್ರದುರ್ಗ ಕಡೆಗಳಿಗೆ ತೆರಳಿ ಮಾಹಿತಿಯನ್ನು ಸಂಗ್ರಹಿಸಿದ್ದು, ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕು, ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲಗೂರು ಗ್ರಾಮದ ಶ್ರೀಮತಿ ಸುಷ್ಠಿತ ಕೋಂ ನಾಗರಾಜು. 26 ವರ್ಷ, ಇವರು ದಿನಾಂಕ 29-10-2020 ರಿಂದ ಕಾಣೆಯಾಗಿದ್ದು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತೆಯ ತಂದೆ ಕೃಷ್ಣಮೂರ್ತಿ ತಾಯ ಶ್ರೀಮತಿ ಜಯಲ್ಲಿ ಇವರುಗಳನ್ನು ಭೇಟಿ ಮಾಡಿ ಚೀರನಹಳ್ಳಿ ಕೆರೆಯಲ್ಲಿ ದೊರೆತ ಅಪರಿಚಿತ ಮಹಿಳೆಯ ಭಾವ ಚಿತ್ರ ಮತ್ತು ಆಕೆಯ ಮೈಮೇಲೆ ದೊರೆತ ಸ್ವತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದ್ದರ ಮೇರೆಗೆ ಮೃತೆಯ ವಾರಸುದಾರರು ಅಪರಿಚಿತ ಮಹಿಳೆಯ ಭಾವ ಚಿತ್ರ ಮತ್ತು ಆಕೆಯ ಮೈಮೇಲಿದ್ದ ಸ್ವತ್ತುಗಳನ್ನು ನೋಡಿ ಸುಸ್ಮಿತಾಳ ತಂದೆ ತಾಯಿಯವರು ಗುರುತಿಸಿರುತ್ತಾರೆ.

    ಸದರಿ ವಿಶೇಷ ತಂಡವು

    ಕೃತ್ಯದ ಹಿನ್ನಲೆ :

    ಮೃತೆ ಸುಸ್ಮಿತಳ ಬಗ್ಗೆ ವಿಚಾರ ಮಾಡಲಾಗಿ, ಈಗ ಸುಮಾರು 6 ವರ್ಷಗಳ ಹಿಂದೆ ಅದೆ ಬೆಲಗೂರು ಗ್ರಾಮದ ನಾಗರಾಜು ಬಿನ್ ಈಶ್ವರರಾವ್ ಎಂಬಾತನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದು ಇವರಿಗೆ 4 ವರ್ಷ ಯಶಸ್ವಿನಿ ಎಂಬ ಹೆಣ್ಣು ಮಗು ಇದ್ದು ಮೃತೆಯ ಗಂಡ ನಾಗರಾಜು ಅವರ ಪಕ್ಕದ ಕೋಡಿಹಳ್ಳಿ ಗ್ರಾಮದ ಶೈಲ ಎಂಬಾಕೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ತಮ್ಮ ಕುಟುಂಬದವರೊಂದಿಗೆ ಸೇರಿ ಸುಷ್ಟಿತಳಿಗೆ ಹಿಂಸೆ ಕಿರುಕುಳ ನೀಡಿದ್ದರಿಂದ ಸುಷ್ಠಿತ ತನ್ನ ಮಗುವಿನೊಂದಿಗೆ ಈಗ್ಗೆ 1 ವರ್ಷದ ಹಿಂದೆ ತಂದೆ ಕೃಷ್ಣಮೂರ್ತಿ ರವರ ಮನೆಯಲ್ಲಿ ವಾಸವಿದ್ದು ಅರಸೀಕೆರೆಯಲ್ಲಿರುವ ಸಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದಳು. ಸುಸ್ಮಿತಳು ಜೀವನಾಂಶ ಕೊಡಿ ತನ್ನ ಗಂಡ ನಾಗರಾಜು ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೆಂದು ತನಿಖಾ ಕಾಲದಲ್ಲಿ ತಿಳಿದು ಬಂದಿರುತ್ತದೆ.

    ನಂತರ ಮೇಲ್ಕಂಡ ಮಾಹಿತಿಯನ್ನು ಸಂಗ್ರಹಿಸಿ ಆರೋಪಿ ನಾಗರಾಜನ್ನು ದಿನಾಂಕ 22/11/2020 ರಂದು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮೃತ ಸುಷ್ಠಿತಳ ಜೀವನಾಂಶದ ಬಗ್ಗೆ ಕೇಸು ದಾಖಲಿಸಿರುವ ಬಗ್ಗೆ ಮಾತನಾಡುವ ಬಗ್ಗೆ ನಾಗರಾಜು ನೆಪ ಮಾಡಿಕೊಂಡು ದಿನಾಂಕ 29/10/2020 ರಂದು ರಾತ್ರಿ ಸುಶ್ಮಿತಾಳನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿ ನಾಗರಾಜು ತಮ್ಮ ಹಳೆಯ ಮನೆಗೆ ಕರೆಸಿಕೊಂಡು ಸುಮ್ಮಿತಳನ್ನು ಕೊಲೆ ಮಾಡಿ, ನಂತರ ಶವವನ್ನು ಆರೋಪಿ ನಾಗರಾಜು ಈತನ ತಮ್ಮ ಮೋಹನ ಕುಮಾರ್ ಮತ್ತು ಶೈಲ ಮೂವರು ಸೇರಿಕೊಂಡು ಸಾಕ್ಷಾಧಾರಗಳನ್ನು ನಾಶ ಪಡಿಸುವ ಉದ್ದೇಶದಿಂದ ಕಾರಿನಲ್ಲಿ ಶವವನ್ನು ಸಾಗಿಸಿ ದುದ್ದ ಪೊಲೀಸ್ ಠಾಣೆಯ ವ್ಯಾಪ್ತಿಯ ಚೀರನಹಳ್ಳಿ ಕೆರೆಯ ನೀರಿನಲ್ಲಿ ಬಿಸಾಡಿ ಹೋಗಿರುವುದಾಗಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯದ ಬಗ್ಗೆ ತಿಳಿಸಿರುತ್ತಾರೆ.

    ನಂತರ ಆರೋಪಿಯು ನೀಡಿದ ಸುಳುವಿನ ಮೇರೆಗೆ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿರುವ ಕೆಎ-5| ಎಂ.ಎಫ್ –4645 ನಂಬರಿನ ಕಾರನ್ನು ಅಮಾನತ್ತುಪಡಿಸಿಕೊಂಡು ಹಾಗೂ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿ ನಾಗರಾಜನ ತಂದೆ ಈಶ್ವರ ರಾವ್ ಮತ್ತು ತಾಯಿ ಶ್ರೀಮತಿ ಜಯಂತಿ ಇವರು ಕೊಲೆಗೆ ಸಹಕರಿಸಿರುವುದರಿಂದ ಇವರುಗಳನ್ನು ಸಹ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.

    ದಸ್ತಗಿರಿ ಮಾಡಲಾದ ಆರೋಪಿಗಳ ವಿವರ,

    ಎl ನಾಗರಾಜು.ಎಂ.ಇ ಬಿನ್ ಈಶ್ವರರಾವ್, 28 ವರ್ಷ, ವಾಚ್ ರಿಪೇರಿ ಕೆಲಸ, ಬೆಲಗೂರು ಗ್ರಾಮ, ಶ್ರೀರಾಂಪುರ ಹೋಬಳಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ,

    ಎ2 ಮೋಹನ.ಎಂ.ಇ ಬಿನ್ ಈಶ್ವರರಾವ್, 24 ವರ್ಷ, ಮೊಬೈಲ್ ರಿಪೇರಿ ಮತ್ತು ಕರೆನ್ಸಿ ವ್ಯಾಪಾರ ಕೆಲಸ, ಬೆಲಗೂರು ಗ್ರಾಮ, ಶ್ರೀರಾಂಪುರ ಹೋಬಳಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.

    ಎ3 ಶ್ರೀಮತಿ ಶೈಲ ಕೋರಿ ರಂಗನಾಥ, 27 ವರ್ಷ, ಕೂಲಿಕೆಲಸ/ಮನೆ ಕೆಲಸ ವಾಸ ಕೋಡಿಹಳ್ಳಿ ಗ್ರಾಮ ಶ್ರೀರಾಂಪುರ ಹೋಬಳಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ,

    ಎ4 ಈಶ್ವರರಾವ.ಬಿ.ಎಂ ಬಿನ್ ಲೇ” ಮಲ್ಲೇಶಪ್ಪ, 59 ವರ್ಷ, ವಿದ್ಯಾವಾಚ್ ವರ್ಕ್ಸ್ & ರಿಪೇರಿ ಕೆಲಸ, ಬೆಲಗೂರು ಗ್ರಾಮ, ಶ್ರೀರಾಂಪುರ ಹೋಬಳಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ,

    ಎ5 ಶ್ರೀಮತಿ ಜಿ.ಜಯಂತಿ ಕೋರಿ ಈಶ್ವರರಾವ್.ಬಿ.ಎಂ, 57 ವರ್ಷ, ಮನೆ ಕೆಲಸ ವಾಸ ಬೆಲಗೂರು ಗ್ರಾಮ, ಶ್ರೀರಾಂಪುರ ಹೋಬಳಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ,

    ಆರೋಪಿಯ ಪತ್ತೆಯ ತಂಡದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ

    ಈ ಪ್ರಕರಣವನ್ನು ಭೇದಿಸಲು ಯಶಸ್ವಿಯಾದ ಹಾಸನ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪುಟ್ಟಸ್ವಾಮಿಗೌಡ, ಹಾಸನ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ್.ಪಿ. ದುದ್ದ ಠಾಣೆಯ ಪಿಎಸ್‌ಐ ಕುಗ ಮಧು ಎಂ.ಸಿ ಮತ್ತು ಸಿಬ್ಬಂದಿಗಳಾದ ರವಿ ಕೃಷ್ಣಗೌಡ, ಮುರಳಿ, ಸುಬ್ರಹ್ಮಣ್ಯ, ರವಿಕುಮಾರ, ಜುಕರ್ ಅಹಮದ್ ಬೇಗ್ ಕಿರಣ, ಶ್ರೀಕಾಂತ್, ಸಂತೋಷ್, ಬಾಲಕೃಷ್ಣ, ದ್ರಾಕ್ಷಾಯಿಣಿ, ವಿದ್ಯಾ, ಚಾಲಕರುಗಳಾದ ಗಿರೀಶ್ ಕುಮಾರ್ ಮತ್ತು ಜಿಲ್ಲಾ ಪೊಲೀಸ್ ಕಛೇರಿ ಕಂಪ್ಯೂಟರ್ ವಿಭಾಗದ ಹೀರ್‌ ಖಾನ್. ರವರ ಕಾರ್ಯವನ್ನು ಮೆಚ್ಚಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ, ಹಾಸನ ರವರು ಪ್ರಶಂಶಿಸಿ ವಿಶೇಷ ಬಹುಮಾನ ಘೋಷಿಸಿರುತ್ತಾರೆ.

    ಈ ಪ್ರಕಟಣೆಯನ್ನು ಜಿಲ್ಲಾ ಪೊಲೀಸ್ ಕಛೇರಿಯಿಂದ ಹೊರಡಿಸಲಾಗಿದೆ.

    LEAVE A REPLY

    Please enter your comment!
    Please enter your name here