ಹಾಸನ ನಗರದ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಡಿಪ್ಲೋಮಾ ಪ್ರವೇಶಕ್ಕೆ ಅವಧಿ ವಿಸ್ತರಣೆ : ಇನ್ನು ನಿಮ್ಮಲ್ಲಿ ಯಾರಾದರೂ ಅರ್ಜಿ ಸಲ್ಲಿಸಲು ಯೋಚಿಸುತ್ತಿದ್ದರೆ ಅವಕಾಶ ಸದುಪಯೋಗ ಪಡೆದುಕೊಳ್ಳಿ

0

ಡಿಪ್ಲೋಮಾ ಪ್ರವೇಶಕ್ಕೆ ಅವಧಿ ವಿಸ್ತರಣೆ
ಹಾಸನ  ಸೆ.22 :  ಮಹಿಳಾ ಪಾಲಿಟೆಕ್ನಿಕ್, ಹರ್ಷಮಹಲ್ ರಸ್ತೆ, ಹಾಸನ ಇಲ್ಲಿ 2021-22 ನೇ ಸಾಲಿಗೆ ಸಂಸ್ಥೆಯಲ್ಲಿ ಉಳಿದಿರುವ ಡಿಪ್ಲೋಮಾ ಸೀಟುಗಳ ಭರ್ತಿಗೆ ಪ್ರವೇಶ ಅವಧಿಯನ್ನು ಸೆ.30 ರವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಪ್ರಾಂಶುಪಾಲರು ತಿಳಿಸಿದ್ದಾರೆ.
ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಪಾಸ್ ಹಾಗೂ ಪಿ.ಯು.ಸಿ ಪಾಸ್ ಅಥವಾ ಫೇಲಾದ ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಅಪರಾಲ್ ಡಿಸೈನಿಂಗ್ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ, ಕಮರ್ಷಿಯಲ್ ಪ್ರಾಕ್ಟೀಸಸ್ ( ಇಂಗ್ಲೀಷ್ ಮತ್ತು ಕನ್ನಡ) ಹಾಗೂ ಲೈಬ್ರರಿ ಇನ್‍ಫಾರ್ಮೆಷನ್ ಸೈನ್ಸ್ ಕೋರ್ಸುಗಳು ಲಭ್ಯವಿದ್ದು, ಉಚಿತ ಟ್ಯಾಬ್ ವಿತರಣೆ, ಕನಿಷ್ಠ ಪ್ರವೇಶ ಶುಲ್ಕ ಉತ್ತಮ ಕಂಪನಿಗಳಲ್ಲಿ ಉದ್ಯೋಗವಕಾಶ ಅಥವಾ ಸ್ವಂತ ಉದ್ದಿಮೆದಾರರಾಗಲು ಒಳ್ಳೆಯ ಅವಕಾಶವಾಗಿದ್ದು, ಇವು ಕೋರ್ಸಿನ ವೈಶಿಷ್ಟಗಳಾಗಿವೆ.
ನಿಮ್ಮ ಇಚ್ಚೆಯ ಕೋರ್ಸುಗಳನ್ನು ಆಯ್ಕೆಮಾಡಿಕೊಳ್ಳಲು ಸಂಪರ್ಕಿಸಿ ಪ್ರಾಚಾರ್ಯರು:- 8970739596 ಅಥವಾ ಇ ಅಂಡ್ ಸಿ ವಿಭಾಗಾಧಿಕಾರಿಗಳು:- 9008795179 ಗೆ ಸಂಪರ್ಕಿಸಬಹುದಾಗಿದ್ದು, ದ್ವಿತೀಯ ಪಿ.ಯು.ಸಿ ಪಾಸಾದವರು ಹಾಗೂ ಐ.ಟಿ.ಐ ಕೋರ್ಸ್ ಮುಗಿಸುವವರೆಗೆ 3ನೇ ಸೆಮಿಸ್ಟರ್ (ದ್ವಿತೀಯ ವರ್ಷ)ಗೆ ಲ್ಯಾಟರಲ್ ಎಂಟ್ರಿ ಮುಖಾಂತರ ನೇರ ಪ್ರವೇಶ ಪಡೆಯಬಹುದಾಗಿದೆ.

#coursesforstudentshassan #hassan #hassannews

LEAVE A REPLY

Please enter your comment!
Please enter your name here