ಜುಲೈ 2023ರ ಡಿಪ್ಲೊಮಾ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ವಿವಿಧ ಕೆಲಕಾಲ ಸ್ಥಗಿತಗೊಳಿಸಿ ಸಂಸ್ಥೆಯ ಹೊರ ಆವರಣದಲ್ಲಿ ಮೌನ ಪ್ರತಿಭಟನೆಯನ್ನು ನಡೆಸಲಾಯಿತು

0

ಇಂದು ಹಾಸನದ ಶ್ರೀಮತಿ ಎಲ್‌.ವಿ.ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ನಡೆಯುತ್ತಿದ್ದ ಜುಲೈ 2023ರ ಡಿಪ್ಲೊಮಾ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ವಿವಿಧ ಕೆಲಕಾಲ ಸ್ಥಗಿತಗೊಳಿಸಿ ಸಂಸ್ಥೆಯ ಹೊರ ಆವರಣದಲ್ಲಿ ಮೌನ ಪ್ರತಿಭಟನೆಯನ್ನು ನಡೆಸಲಾಯಿತು. ರಾಜ್ಯದ ಪಾಲಿಟೆಕ್ನಿಕ್ ಉಪನ್ಯಾಸಕರುಗಳಿಗೆ ಹಿಂದಿನ ಹತ್ತು ವರ್ಷಗಳಿಂದಲೂ ಯಾವುದೇ ವೃತ್ತಿ ಪದೋನ್ನತಿಗಳು ದೊರಕದೇ ಅನ್ಯಾಯವಾಗಿರುವ ಬಗ್ಗೆ ಹಾಗೂ ಇಲಾಖೆಯ ವಿಳಂಬ ನೀತಯಿಂದ ಉಪನ್ಯಾಸಕರಿಗೆ ವಿನಾಕಾರಣ ತೊಂದರೆಯಾಗಿದೆ ಎಂದು ಎಲ್ಲಾ ಉಪನ್ಯಾಸಕರು ಬೇಸರವನ್ನು ಮೌನ ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿದರು.

ತದನಂತರದಲ್ಲಿ ವಲಯದ ನೋಡಲ್ ಅಧಿಕಾರಿಗಳ ಸಲಹೆಗೆ ಸಮ್ಮತಿಸಿ ಸದರಿಯವರ ಮುಖಾಂತರ ಮಾನ್ಯ ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಇವರಿಗೆ ಲಿಖಿತ ಮನವಿಯನ್ನು ಸಲ್ಲಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೌಲ್ಯಮಾಪನ ಕಾರ್ಯವನ್ನು ಮುಂದುವರೆಸಲು ನಿರ್ಧರಿಸಲಾಯಿತು.

LEAVE A REPLY

Please enter your comment!
Please enter your name here