Sakleshpur

ಇಲ್ಲಿದೆ ಮಾಹಿತಿ ( ಮಾನವ – ಆನೆಗಳು ಸಂಘರ್ಷಕ್ಕೊಂದಷ್ಟು ಈ‌ ನಿರ್ಣಯ ಮಾಡಬಹುದೇ…

By

July 30, 2022

ಸಕಲೇಶಪುರದಲ್ಲಿ ರೋಟರಿ ಸಂಸ್ಥೆ ಹಾಗೂ ಜನಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಾಸನ–ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಕಾಡಾನೆ–ಮಾನವ ಸಂಘರ್ಷ ವಿಚಾರ ಸಂಕಿರಣಕ್ಕೆ ಶುಕ್ರವಾರ ರೋಟರಿ ಅಧ್ಯಕ್ಷ ಸಹನಾ ಶಶಿಧರ್‌, ಬಾಳ್ಳುಗೋಪಾಲ್ ಹಾಗೂ ಇತರರು ಚಾಲನೆ ನೀಡಿದರು

ಇಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು ಇಂತಿವೆ

• ಆನೆ – ಮಾನವ ಸಂಘರ್ಷದ ಪ್ರದೇಶಗಳನ್ನು ಒಳಗೊಂಡ ಹೋರಾಟ ಸಮಿತಿ ರಚಿಸಬೇಕು.

• ಸಮಿತಿಯಲ್ಲಿ ಬೆಳೆಗಾರರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಜನಪರ ಸಂಘಟನೆಗಳು ಒಳಗೊಂಡಿರಬೇಕು.

• ಪ್ರಾದೇಶಿಕ, ವಲಯ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಾವೇಶ ನಡೆಸಬೇಕು.

• ಜೀವ ಹಾಗೂ ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಬೇಕು.

• ಜೀವ ಹಾನಿ ಮಾಡುವ ಆನೆಗಳನ್ನು ಸ್ಥಳಾಂತರಿಸಬೇಕು.

• ಅಗತ್ಯ ಪ್ರದೇಶಗಳಲ್ಲಿ ಬ್ಯಾರಿಕೇಡ್ ನಿರ್ಮಿಸಬೇಕು.

• ಆನೆಧಾಮ ಅಥವಾ ಆನೆ ಕ್ಯಾಂಪ್‌ಗಳನ್ನು ನಿರ್ಮಿಸಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ 13 ವಿಷಯಗಳಿಗೆ ನಿರ್ಣಯ ಕೈಗೊಳ್ಳಲಾಯಿತು.