Belur

ಮಲೆಮಹದೇಶ್ವರ ಅರಣ್ಯಕ್ಕೆ ಬಿಟ್ಟು ಬಂದರೂ ಸಕಲೇಶಪುರಕ್ಕೆ ಮರಳಿ ಬಂದಿದ್ದ ಓಲ್ಡ್ ಮಕನ (ಆನೆ) ಸೆರೆ

By Hassan News

May 19, 2023

ಹಾಸನ : ಅಂದು ಸೆರೆ ಹಿಡಿದು ದೂರದ ಅರಣ್ಯಕ್ಕೆ ಬಿಟ್ಟು ಬಂದರೂ ವಾಪಸ್ ಬಂದಿದ್ದ ಓಲ್ಡ್‌ ಮಕನ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಯು ಕಡೆಗೂ ಶುಕ್ರವಾರ ( 19 ಮೇ 2023 ) ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದ ಪ್ತಖ್ಯಾತ ಟಾಟಾ ಎಸ್ಟೇಟ್‌ನಲ್ಲಿ ಸೆರೆ ಹಿಡಿದರು ., ಸವಾಲೆಂದರೆ ; ಈ ಮಕನ ಆನೆಯು ಯಾವ ಆನೆಗಳ ಗುಂಪಿಗೂ ಸೇರಿಕೊಂಡಿರಲಿಲ್ಲ . ಏಕಾಂಗಿಯಾಗೇ ಸಕಲೇಶಪುರ ಮತ್ತು ಬೇಲೂರು ವಿವಿಧ ಜಾಗಗಳಲ್ಲಿ ಅಗಾಗ್ಗೆ ದಾಳಿ ನಡೆಸಿ,

ಸಾಕಷ್ಟು ಪ್ರಮಾಣದ ಬೆಳೆ ಹಾನಿ , ಆಸ್ತಿಪಾಸ್ತಿ ಮತ್ತು ಸ್ಥಳೀಯ ಮಾನವರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದ್ದ ವರದಿಯಾಗುತ್ತಲೇ ಇತ್ತು .,ಮಲೆಮಹದೇಶ್ವರ ಬೆಟ್ಟದಿಂದ ವಾಪಸ್ ಬಂದ ಈ ಮಕನ ಆನೆ ಮಾಡಿದ್ದು‌ ಒಂದಲ್ಲ‌ ಎರಡಲ್ಲ ;‘ ಅಂದಾಜು ಒಂದುವರೆ ತಿಂಗಳ‌ ನಂತರ ಅಲ್ಲಿಂದ ನಡೆದುಕೊಂಡೆ ವಾಪಸ್ ಬಂದಿದ್ದ ಈ ಆನೆ, ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದ ಗಿರೀಶ್ ಎಂಬುವವರ ಮನೆ ಮೇಲೆ ನವೆಂಬರ್ 24 ರಂದು ದಾಳಿ ನಡೆಸಿ, ಮನೆಯ ಕಿಟಕಿ ಗಾಜುಗಳನ್ನು

ಪುಡಿ ಮಾಡಿಬಿಟ್ಟಿತು  ಈ ಮೊದಲು 2022ರ ಏಪ್ರಿಲ್ 22 ರಂದು ಬೇಲೂರು ತಾಲ್ಲೂಕಿನ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಮೇಲೆ ದಾಳಿ ನಡೆಸಿ, ಅಕ್ಕಿಯನ್ನು ತಿಂದು ಹೋಗಿತ್ತು. ಮತ್ತೆ ಈ ವರ್ಷ ಫೆ.15 ರಂದು ಅದೇ ಗೋದಾಮಿನ ಮೇಲೆ ದಾಳಿ ನಡೆಸಿ, ಅಕ್ಕಿ ತಿಂದು ಹೋಗಿತ್ತು‌. ರೆಡಿಯೊ ಕಾಲ‌ರ್ ಅಳವಡಿಸಿರುವುದರಿಂದಲೇ ಇದೇ ಆನೆ ದಾಳಿ ನಡೆಸುತ್ತಿದೆ ಎಂಬುದು ಗೊತ್ತಾಗುತ್ತಿತ್ತು. ,‌ ಅರಣ್ಯ ಇಲಾಖೆಗೆ ಸಾರ್ವಜನಿಕ ವಲಯದಿಂದ ಪದೇ ಪದೇ ಕೇಳಿ‌ಬರುತ್ತಿದ್ದ ದೂರಿನನ್ವಯ

ಸರ್ಕಾರದಿಂದ ಅನುಮತಿ ಪಡೆದ  ಗುರುವಾರ‌ ( ಮೇ 18 )  ಓಲ್ಡ್ ಮಕನ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿತ್ತು. ದುರದೃಷ್ಟವಶಾತ್ ಈ ಕಾರ್ಯಾಚರಣೆಗೆ ಬಂದಿದ್ದ ಒಂದು ಆನೆಗೆ ಅನಾರೋಗ್ಯ ಉಂಟಾಗಿತ್ತು , ದೂರದ ದುಬಾರೆ(ಕುಶಾಲನಗರ) ಆನೆ ಶಿಬಿರದಿಂದ ಬರಬೇಕಿದ್ದ ಎರಡು ಆನೆಗಳು ಬರುವುದು ಸಮಯವಾದ್ದರಿಂದ ಕಾರ್ಯಾಚರಣೆಯನ್ನು ಒಂದು ದಿನ ಮುಂದೂಡಲಾಗಿ .,

ಇಂದು ಶುಕ್ರವಾರ ಬೆಳಿಗ್ಗೆಯೇ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳಲ್ಲಿ ಕೆಲವರಿಗೆ ನಿದ್ದೆ ಇಲ್ಲ ಪಾಪ ! , ಆ ಮಕನ ಕೊರಳಲ್ಲಿ ಅಳವಡಿಸಿರುವ ರೆಡಿಯೋ ಕಾಲರ್ ಇರೋದರಿಂದ ಆನೆ ಸಕಲೇಶಪುರದಲ್ಲಿ ಇರುವುದನ್ನು ಪತ್ತೆ ಹಚ್ಚಿ , ಸರೆ ಇದೀಗ ಸೆರೆ ಹಿಡಿದು ,  ಈ ಬಾರಿ ಮತ್ತೆ ಕಾಡಿಗೆ ಬಿಟ್ಟರೆ ವಾಪಸ್ ಬರಬಹುದು ಎಂದು ,,

ದೂರದ ಮತ್ತಿಗೋಡು ಆನೆ ಶಿಬಿರಕ್ಕೆ ಬಿಡಲು ಯೋಜಿಸಲಾಗಿದೆ . ಅಲ್ಲಿ ಆ ಬಲಿಷ್ಠ ಆನೆಯ ಪಳಗಿಸಿ ಇರಿಸುವ ಇರಾದೆ ಇದೆ ಎನ್ನಲಾಗಿದೆ .‌, ಈ ದೊಡ್ಡ ಕಾರ್ಯಾಚರಣೆಯಲ್ಲಿ ಅಭಿಮನ್ಯು, ವಿಕ್ತಂ , ಅಜೇಯ, ಪ್ರಶಾಂತ ಎಂಬ ಸಾಕು ಆನೆಗಳು ನೆರವಾದವು , ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು .