ರೈತರು, ರೈತ ಮಹಿಳೆಯರು ಹಾಗೂ ಆಸಕ್ತರಿಗೆ ಕುರಿ, ಕೋಳಿ, ಮೇಕೆ ಸೇರಿದಂತೆ ಆಧುನಿಕ ಹೈನುಗಾರಿಕೆ ತರಬೇತಿಯ ಅ.6ರಿಂದ 28ರವರೆಗೆ ಹಾಸನದಲ್ಲಿ

0

ಹಾಸನ : ಇದೇ ಅ.6ರಿಂದ 28ರವರೆಗೆ ನಗರದ ಸಂತೇಪೇಟೆಯಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಉಪ ನಿರ್ದೇಶಕರ ಕಚೇರಿಯಲ್ಲಿ ರೈತರು, ರೈತ ಮಹಿಳೆಯರು ಹಾಗೂ ಆಸಕ್ತರಿಗೆ ಜಿಲ್ಲಾ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಿಂದ ಕುರಿ, ಕೋಳಿ, ಮೇಕೆ ಸೇರಿದಂತೆ ಆಧುನಿಕ ಹೈನುಗಾರಿಕೆ ತರಬೇತಿಯನ್ನು :

ಅ.6ರಿಂದ 7ರವರೆಗೆ ಆಧುನಿಕ ಹೈನುಗಾರಿಕೆ, ಅ.10ರಿಂದ 11ರವರೆಗೆ ಕುರಿ ಮತ್ತು ಮೇಕೆ ಸಾಕಣೆ, ಅ.12ರಿಂದ 13ರವರೆಗೆ ಕೋಳಿ ಸಾಕಣೆ, ಅ.14ರಿಂದ 15ರವರೆಗೆ ಕುರಿ ಮತ್ತು ಮೇಕೆ ಸಾಕಣೆ, ಅ.20ರಿಂದ 21ರವರೆಗೆ ಆಧುನಿಕ ಹೈನುಗಾರಿಕೆ ಮತ್ತು ಅ.27ರಿಂದ 28ರವರೆಗೆ ಕುರಿ ಮತ್ತು ಮೇಕೆ ಸಾಕಣೆ ತರಬೇತಿ ಆಯೋಜಿಸಲಾಗಿದೆ.

ಆಸಕ್ತರು ಆಯಾ ದಿನದಂದು ಬೆಳಿಗ್ಗೆ 10.30ಕ್ಕೆ ಹಾಜರಾಗಬೇಕು. ಮಾಹಿತಿಗೆ 08172-235226, 9449249283/8861740791 ಸಂಪರ್ಕಿಸಿ ಸದುಪಯೋಗ ಪಡೆದುಕೊಳ್ಳಿ . ಅಥವಾ ಮಾಹಿತಿ ಶೇರ್ ಮಾಡಿ ಉಪಯುಕ್ತ ಸಂದೇಶ ತಿಳಿಸಿ

LEAVE A REPLY

Please enter your comment!
Please enter your name here