farmers news

ರೈತರಿಗೆ ಶೇ.50ರಿಂದ 90% ರಷ್ಟು ಸಬ್ಸಿಡಿ ಇದ್ದು, ಆಸಕ್ತ ರೈತರು ಈ ಕೆಳಕಂಡ ಕೃಷಿ ಸಂಸ್ಕರಣಾ ಘಟಕಗಳ ಪಡೆಯಬಹುದು

By Hassan News

October 30, 2023

ಹಾಸನ : 2023-24ನೇ ಸಾಲಿನಲ್ಲಿ ಕೃಷಿಇಲಾಖೆಯಿಂದ ಕೃಷಿ ಉತ್ಪನ್ನಗಳ ಸಂಸ್ಕರಣಾ ಯೋಜನೆಯ ಅನ್ವಯ ಸಹಾಯಧನದಡಿ ಘಟಕಗಳ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳಾದ

ದಾಲ್ ಪ್ರೊಸೆಸರ್, ಫ್ಲೋರ್‌ ಮಿಲ್, ಮಿನಿ ರೈಸ್ ಮಿಲ್, ಮಿನಿ ಆಯಿಲ್ ಎಕ್ಸ್‌ಪೆಲ್ಲ‌ ರಾಗಿ ಕ್ಲೀನಿಂಗ್ ಮಿಷನ್, ಶುಗರ್ ಕೇನ್ ಕ್ರಂಗ್ ಯುನಿಟ್, ಪಲ್ವರೈಸರ್, ರವಾ ಕ್ಯಾಟಲ್ ಫೀಡ್ ಮಿನ್, ಚಿಲ್ಲಿ ಪೌಡಿಂಗ್ ಮನ್, ಶಾವಿಗೆ ಮನ್, ಶುಗರ್ ಕೇನ್ ಜ್ಯೂಸ್ ಮೇಕಿಂಗ್ ಮನ್ ಹಾಗೂ ಇನ್ನಿತರೆ ಕೃಷಿ ಸಂಸ್ಕರಣಾ ಘಟಕಗಳು ಲಭ್ಯವಿರುತ್ತದೆ. ಸಾಮಾನ್ಯ ರೈತರಿಗೆ ಶೇ.50ರಷ್ಟು ಮತ್ತು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರಷ್ಟು ಸಬ್ಸಿಡಿ ಇದ್ದು, ಆಸಕ್ತ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.