ಕೃಷಿಕರನ್ನು ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ರೈತ ಉತ್ಪಾದಕ ಸಂಸ್ಥೆ ರಚನೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ R.ಗಿರೀಶ್ ಅಧಿಕಾರಿಗಳಿಗೆ ಸೂಚನೆ 🌾

0

ಹಾಸನ ಮಾ.02 (ಹಾಸನ್_ನ್ಯೂಸ್ !,  ಕೃಷಿ  ಉತ್ಪನ್ನ ಸಂಸ್ಕರಣೆ, ಬೆಳೆಗಳ ಮೌಲ್ಯ ವರ್ಧನೆ, ಉಪ ಉತ್ಪನ್ನಗಳ ತಯಾರಿಕೆಯ  ಮೂಲಕ ಕೃಷಿಕರನ್ನು ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ  ರೈತ ಉತ್ಪಾದಕ ಸಂಸ್ಥೆ ರಚನೆಗೆ ಕ್ರಮವಹಿಸುವಂತೆ  ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಭಾಗಣದಲ್ಲಿಂದು  ಜಿಲ್ಲಾ ಮಟ್ಟದ ರೈತ ಉತ್ಪಾದಕರ ಸಂಸ್ಥೆಗಳ  ಸಮನ್ವಯ ಮತ್ತು ಮೇಲ್ವಿಚಾರಣೆ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ರೈತರ ಸಂಘಟನೆಯ ಆಸಕ್ತ ಗುಂಪುಗಳನ್ನು ಒಗ್ಗೂಡಿಸಿ ರೈತ ಉತ್ಪಾದಕ ಸಂಸ್ಥೆಯನ್ನು ರಚಿಸಿ ಸೂಕ್ತ ಉತ್ಪನ್ನ ಆಧಾರಿತ ಯೋಜನೆಯ ತಯಾರಿ ಮಾಡಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರನ್ನು ಗುರುತಿಸಿ ಸಂಘಟನೆ ಮೂಲಕ ಅಗತ್ಯ ಮಾರುಕಟ್ಟೆ ಸೌಲಭ್ಯ ಒದಗಿಸುವಂತೆ  ಅವರು ಹೇಳಿದರು.

ಗ್ರಾಮ ಮಟ್ಟದಲ್ಲಿ 20 ರೈತ  ಸದಸ್ಯರನ್ನೊಳಗೊಂಡತೆ ರೈತ ಆಸಕ್ತ ಗುಂಪು ರಚಿಸಿ 50 ಕ್ಕಿಂತ ಹೆಚ್ಚಿನ ಆಸಕ್ತ ಗುಂಪು ಒಂದುಗೂಡಿಸಿ  ಒಂದು ಸಾವಿರ ರೈತ ಸದಸ್ಯರಿರುವ ಹಾಗೆ ರಚಿಸಿ ರೈತರನ್ನು ಸಂಘಟಿಸಿ ಅವರ ಸಾಮಥ್ರ್ಯವನ್ನೂ ಬಲವರ್ಧನೆ ಗೊಳಿಸುವ ಮೂಲಕ ಉತ್ಪಾದನಾ ಮತ್ತು  ಮಾರುಕಟ್ಟೆಗಳ ಬಲವರ್ಧನೆ ಗೊಳಿಸುವಂತೆ  ಹಾಗೂ ಕೊಯ್ಲೋತ್ತರ ಸಂಗ್ರಹಣೆ ಶ್ರೇಣೀಕರಣದಲ್ಲಿ ಸೂಕ್ತ ತಂತ್ರಜ್ಞಾನ ಬಳಸುವ ಮೂಲಕ ರೈತರಿಗೆ ಕೊಯ್ಲೋತ್ತರ ನಷ್ಟವನ್ನು ಕಡಿಮೆಗೊಳಿಸುವಂತೆ ಜಿಲ್ಲಾಧಿಕಾರಿ  ಳಿಸಿದರು.

ರೈತ ಉತ್ಪಾದಕರ ನಿರ್ಧಿಷ್ಟ ಉತ್ಪಾದನೆ ವ್ಯಾಪಾರ ಬೇಡಿಕೆ ಗಳನ್ನಾಧರಿಸಿ ರೈತ ಆಸಕ್ತ ಗುಂಪುಗಳ ರಚನೆ ಮಾಡುವಂತೆ ತಿಳಿಸಿದರಲ್ಲದೆ, ಪ್ರತಿಯೊಬ್ಬ ರೈತ ಸದಸ್ಯರಿಂದ ತಲಾ ಒದು ಸಾವಿರದಂತೆ ಶೇರು ಬಂಡಾವಾಳದ ಮೂಲಕ ಸಂಸ್ಥೆಯನ್ನು ರಚಿಸಿ, ಕಂಪನಿ ಕಾಯ್ದೆ, 2013 ಕೋ ಆಪರೇಟಿವ್ ಸೊಸೈಟಿ ಕಾಯ್ದೆಯ ಅನುಸಾರ ರೈತ ಉತ್ಪಾದಕರ ಸಂಸ್ಥೆಗಳನ್ನು ನೋಂದಣಿ ಮಾಡಿಸಲು ಸಲಹೆ, ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರೈತ ಉತ್ಪಾದಕರ ಸಂಸ್ಥೆಗಳಿಗೆ ಆರ್ಥಿಕ ಸೌಲಭ್ಯ  ಪಡೆಯಲು ಮಾರ್ಗದರ್ಶನ ನಿಡುವುದರ ಜೊತೆಗೆ  ಜಿಲ್ಲಾ ಮಟ್ಟದಲ್ಲಿ ರೈತ ಉತ್ಪಾಧಕರ ಸಂಸ್ಥೆಗಳಿಗೆ ಸಂಬಂದಿಸಿದಂತೆ ವಿವಿಧ ಅನುಷ್ಠಾನ ಸಂಸ್ಥೆಗಳ ಚಟುವಟಿಕೆಗಳ ಸಮನ್ವಯದ ಜೊತೆಗೆ ವಿವಿಧ ರೈತ ಉತ್ಪಾದಕರ  ಸಂಸ್ಥೆ ಕಾರ್ಯಕ್ರಮಗಳ ಅನುಷ್ಠಾನದ ಮೇಲ್ವಿಚಾರಣೆ, ರೈತರು ಸಂಪನ್ಮೂಲ ಕ್ರೋಢೀಕರಿಸಲು, ವ್ಯಾಪಾರ ವಹಿವಾಟು ನಡೆಸಲು  ಹಾಗೂ ವಿಲೇವಾರಿ ಮಾಡಲು ಸಹಕಾರ ನೀಡುವಂತೆ ಅಧಿಕಾರಿಗಳಿಗೆ ನಿದೇಶನ ನೀಡಿದರು.

ರೈತರು  ತಮ್ಮ ಆಧಾರ್ ಕಾರ್ಡ್ ಮತ್ತು ಆರ್.ಟಿ.ಸಿ. ಗಳನ್ನು ಗ್ರಾಮಸಹಾಯಕರುಗಳಿಗೆ   ನೀಡಲು  ಗ್ರಾಮಗಳಲ್ಲಿ ಟಾಂ ಟಾಂ ಮಾಡಿಸುವ ಮೂಲಕ ಅರಿವು ಮೂಡಿಸುವಂತೆ  ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು. 

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ರವಿ, ಉಪ ನಿರ್ದೇಶಕರಾದ ಕೋಕಿಲಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ರೇವತಿ, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿಯಾದ ಶ್ರೀಹರಿ  ನಬಾರ್ಡ್ ಬ್ಯಾಂಕ್  ವ್ಯಸ್ಥಾಪಕರಾದ ವಿ.ಜಿ. ಭಟ್, ಸಹಾಯಕ ಅರನ್ಯ ಸಂರಕ್ಷಣಾಧಿಕಾರಿ ಪಿ.ಸಿ ರವೀಂದ್ರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here