ರಾಜ್ಯದಾದ್ಯಂತ ಜುಲೈ ಮಧ್ಯ ಭಾಗದಿಂದ ವ್ಯಾಪಕ ಮಳೆ ಆಗುತ್ತಿರುವುದು ಸಂತಸದ ವಿಷಯ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ ಮತ್ತು ಬೆಳಗಾವಿ ಜಿಲ್ಲೆಗಳ ಪಶ್ಚಿಮಘಟ್ಟ ಪ್ರದೇಶಗಳೂ ಸೇರಿದಂತೆ ರಾಜ್ಯದ
ಕರಾವಳಿ ಮತ್ತು ಮಲೆನಾಡು ಪ್ರದೇಶದ ಹಲವೆಡೆ ಜಲಪಾತಗಳು ಧುಮ್ಮುತ್ತಿ ಹರಿಯುತ್ತಿವೆ. ಇಂತಹ ಜಲಧಾರೆಗೆ ಆಕರ್ಷಿತರಾಗಿ ಸಾರ್ವಜನಿಕರು ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ (ಆಫ್ ರೋಡ್) ಪ್ರವೇಶಿಸದಂತೆ ತಾತ್ಕಾಲಿಕ ತಡೆ ನಿರ್ಮಿಸಲು ಮತ್ತು
ಅಪಾಯದ ಸೂಚನಾ ಫಲಕ ಹಾಕುವ ಮೂಲಕ ಅಮೂಲ್ಯ ಜೀವ ಹಾನಿ ಆಗದಂತೆ ಎಚ್ಚರ ವಹಿಸಲು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಲು ಸೂಚಿಸಿದೆ.
ಈಶ್ವರ್ ಖಂಡ್ರೆ , ( ಸಚಿವರು )-ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ. offroad forrestnewshassan