ಸಕಲೇಶಪುರ : ಹೊಸೂರು ಎಸ್ಟೇಟ್ ನಲ್ಲಿ ಜಿಂಕೆಯನ್ನು ಬೇಟೆಯಾಡಿ ಕೊಂದ ಆರೋಪಿಗಳಿಬ್ಬರನ್ನು ಪೋಲಿಸ್ ಅರಣ್ಯ ಸಂಚಾರಿ ದಳ ಸೆರೆ ಹಿಡಿದಿದೆ.
ತಾಲ್ಲೂಕಿನ ಹೊಸೂರು ಐಬಿಸಿ ಎಸ್ಟೇಟ್ ನಲ್ಲಿ ಜಿಂಕೆಯನ್ನ ಬೇಟೆಯಾಡಿ ಮಾಂಸ ಮತ್ತು ಜಿಂಕೆ ಚರ್ಮ ತೆಗೆದುಕೊಂಡು ಹೋಗುತ್ತಿದ್ದ ಹೊಸೂರಿನ ಯೋಗೇಶ್ ಮತ್ತು ಕಾಡ್ಲೂರು ಕೂಡಿಗೆ ಪ್ರಕಾಶ್ ಎಂಬುವರನ್ನು ಖಚಿತ ಮಾಹಿತಿ ಮೇರೆಗೆ ಪೋಲಿಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಗಳು ಆರೋಪಗಳನ್ನು ಹಿಡಿದು ಪ್ರಕರಣ ದಾಖಲಿಸಿ ಆರೋಪಿಗಳನ್ನು ತನಿಖೆ ಗೊಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪೋಲೀಸ್ ಅರಣ್ಯ ಸಂಚಾರಿ ದಳದ ಹೆಡ್ ಕಾನ್ಸಟೆಬಲ್ ಶಂಕರಪ್ಪ ಹಾಗು ಸಿಬ್ಬಂದಿ ಶಾಂತರಾಜು ಸಿಕೆ. ಅನಂತು. ರವಿ. ಕಾಂತರಾಜು ಹಾಗು ಚಾಲಕ ಮಂಜೇಗೌಡ ಆರೂಪಿಗಳನ್ನು ಹಿಡಿಯುವಲ್ಲಿ ಯಶಸ್ವಿ ಯಾಗಿದ್ದಾರೆ.