FORREST NEWS HASSAN

ಇಬ್ಬರಿಗೆ ಗಾಯಇಂದಿನಿಂದ ಮೂರು ಆನೆಗೆ ರೇಡಿಯೋ ಕಾಲರ್ ಅಳವಡಿಕೆ : ಹಾಸನ

By Hassan News

May 15, 2023

ಕಾಡಾನೆ ದಾಳಿ: ಇಬ್ಬರಿಗೆ ಗಾಯಇಂದಿನಿಂದ ಮೂರು ಆನೆಗೆ ರೇಡಿಯೋ ಕಾಲರ್ ಅಳವಡಿಕೆಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆಗಳ ಉಪಟಳ ಮುಂದುವರಿದಿದೆ. ಕಾಡಾನೆ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ, ಗುಳಗಳಲೆ ಹಾಗೂ ಹೆಬ್ಬನಹಳ್ಳಿ ಗ್ರಾಮಗಳಲ್ಲಿ ನಡೆದಿದೆ.ಗುಳಗಳಲೆ ಗ್ರಾಮದ ಕುರ್ಚಿ ಕಾಫಿ ಎಸ್ಟೆಟ್ ರೈಟರ್ ಇನಾಯತ್ (45) ಕಾಫಿ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಇನಾಯತ್

ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಇನಾಯತ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ನಂತರ ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕ ಹಬೀದ್ (26) ಮೇಲೆ ಒಂಟಿಸಲಗ ಏಕಾಏಕಿ ದಾಳಿ ನಡೆಸಿದ್ದು, ಸಲಗದಿಂದ ತಪ್ಪಿಸಿಕೊಂಡಿರುವ ಹಬೀದ್‌ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು

ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೀಟಮ್ಮ ಎಂಬ ಹೆಸರಿನ ಗ್ರೂಪ್‌ನಲ್ಲಿದ್ದ ಒಂಟಿಸಲಗ ಗುಂಪಿನಿAದ ಬೇರ್ಪಟ್ಟು ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡುತ್ತಿದ್ದು, ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಜನರು ಎಚ್ಚರಿಕೆ

ಯಿಂದ ಓಡಾಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದು, ಕಾಡಾನೆ ಹಾವಳಿಗೆ ಶಾಶ್ವತ ಕಂಡುಹಿಡಿಯುವಂತೆ ಮಲೆನಾಡು ಭಾಗದ ಜನರ ಆಗ್ರಹಿಸಿದ್ದಾರೆ.ಮಲೆನಾಡು ಭಾಗದಲ್ಲಿ ಪುಂಡಾಟ ನಡೆಸಿ ಬೆಳೆ ಹಾನಿ ಜೊತೆಗೆ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಮೂರು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಸರ್ಕಾರ ಅನುಮತಿ ನೀಡಿದೆ.ಈ ಹಿನ್ನೆಲೆ ಇಂದಿನಿಂದ ಮೇ 25ರ ವರೆಗೆ ಮೂರು ದಿನ ಬೇಲೂರು ಹಾಗೂ ಸಕಲೇಶಪುರ ವಲಯದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆರ ನಡೆಸಿ ಮೂರು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಿದೆ.ರೇಡಿಯೋ ಕಾಲರ್ ಅಳವಡಿಕೆ ಹಿನ್ನೆಲೆ ಕಾರ್ಯಾಚರಣೆ ನಡೆಸಲು ಮತ್ತಿಗೋಡು ಅರಣ್ಯದಿಂದ

ಅಭಿಮನ್ಯು ಹಾಗೂ ಮಹೇಂದ್ರ ಆನೆಗಳು ಭಾನುವಾರವೇ ಜಿಲ್ಲೆಗೆ ಆಗಮಿಸಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.