ಸಾರ್ವಜನಿಕರ ವಿರೋಧದ ಹಿನ್ನಲೆಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಟ್ ಬಳಸದಿದ್ದರೆ ವಿಧಿಸುತ್ತಿದ್ದ ದಂಡದ ಮೊತ್ತವನ್ನು ಇಳಿಸಿ ಆದೇಶ

0

ಇತ್ತೀಚಿನ ಆದೇಶದಲ್ಲಿ ಸರ್ಕಾರ ನಗರ ಪ್ರದೇಶದಲ್ಲಿ ಮಾಸ್ಟ್ ಬಳಸದಿದ್ದರೆ ರೂ.1,000/- ದಂಡ ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.500/- ದಂಡ ವಿಧಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ.

ಆದರೆ ಸಾರ್ವಜನಿಕರ ವಿರೋಧ ಮತ್ತು ತಜ್ಞರ ಅಭಿಪ್ರಾಯ ಹಿನ್ನೆಲೆಯಲ್ಲಿ ದಂಡದ ಪ್ರಮಾಣದಲ್ಲಿ ನಗರ ಪ್ರದೇಶದಲ್ಲಿ ರೂ ಒಂದು ಸಾವಿರ (ರೂ.1,000/-) ದಿಂದ ರೂ ಇನ್ನೂರ ಐವತ್ತು (ರೂ.250/-) ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ. ಐದುನೂರು (ರೂ.500/-) ರಿಂದ ರೂ ನೂರು ರೂಪಾಯಿ (ರೂ.100/-)ಗೆ ಇಳಿಸಲು ತೀರ್ಮಾನಿಸಲಾಗುತ್ತದೆ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗುತ್ತದೆ.

ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ಹೇಳಿರುವಂತೆ “ಜೀವ ಮತ್ತು ಜೀವನ” ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಸರ್ಕಾರ ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ మాన్యో ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮೂಲಕ ಸರ್ಕಾರದೊಂದಿಗೆ ಸಹಕರಿಸುವಂತೆ ಕೋರುತ್ತೇನೆ.

(ಬಿ.ಎಸ್. ಯಡಿಯೂರಪ್ಪ)

LEAVE A REPLY

Please enter your comment!
Please enter your name here