ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಶುಲ್ಕ ವಿನಾಯಿತಿ ಇತರೆ ಯೋಜನೆ ಮಾಹಿತಿ

0

ಹಾಸನ ಅ. :  ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ ಅರೆ ಅಲೆಮಾರಿ ಪ್ರವರ್ಗ-1 ವಿದ್ಯಾರ್ಥಿಗಳಿಂದ, 2021-22ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ”, “ ಶುಲ್ಕ ವಿನಾಯಿತಿ”, “ ವಿಧ್ಯಾಸಿರಿ ಊಟ ಮತ್ತು ವಸತಿ ಯೋಜನೆ” ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಅ.31 ಕೊನೇಯ ದಿನವಾಗಿದ್ದು, ವೆಬ್‍ಸೈಟ್ ವಿಳಾಸ www.ssp.postmetric.karnataka.gov.in/2122 ಹಾಗೂ ಕಾರ್ಯಕ್ರಮಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿಧ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಮಾಹಿತಿಗಾಗಿ ಬೇಟಿ ನೀಡಬೇಕಾದ ವೆಬ್‍ಸೈಟ್ ವಿಳಾಸ www.bcwd.karnataka.gov.in/.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ಸಹಾಯವಾಣಿ 8050770005, 8050770004 ಇಮೇಲ್ ವಿಳಾಸ www.bcwd.karnataka.gov.in  ಹಾಗೂ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ 080-35254757 ಇಮೇಲ್ ವಿಳಾಸ postmetrichelp@karnataka.gov.in ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here