300 ವರ್ಷಗಳ ಹಿಂದೆ ಸಕಲೇಶಪುರ ದ ಈ ಗ್ರಾಮದಲ್ಲಿ ಋಷಿಮುನಿಗಳು ಬಂದು ನೆಲೆಸಿದ್ದ ಜಾಗವಿದು

0

ನಮ್ಮೂರು ಸಕಲೇಶಪುರ ತಾಲ್ಲೂಕಿನ #ಹಾನುಬಾಳು , #ಉದ್ದಿಗುಡ್ಡ_ಜಾತ್ರೆ (ಗುಂಡುಬಹ್ಮ ಜಾತ್ರೆ)

*ಸುಮಾರು 300 ವರ್ಷಗಳ ಹಿಂದೆ ಹಾನುಬಾಳು ಗ್ರಾಮದಲ್ಲಿ ಋಷಿಮುನಿಗಳು ಬಂದು ನೆಲೆಸಿದ್ದ ಜಾಗವಿದು., ಇಲ್ಲಿನ ಆರಾಧ್ಯ ದೈವ ಗುಂಡು ಬ್ರಹ್ಮ ದೇವರು ಎಂದು ನಂಬಲಾಗುತ್ತದೆ , ಈ ದೇವರಿಗೆ ಪ್ರತೀ ವರ್ಷ ಬಲಿಪಾಡ್ಯಮಿಯ ದಿನದಂದು ರಾತ್ರಿ ದೇವರಿಗೆ ವಿಶೇಷ ಪೂಜೆ ಮಾಡಿ ಅದೇ ದಿನ ಬೆಳಗಿನ ಜಾವ ಕೆಂಡೋತ್ಸವ ವಿರುತ್ತದೆ .,

ಬಲಿಪಾಡ್ಯಮಿಯ ಮಾರನೆ ದಿನ ದೇವರಿಗೆ ಜಾತ್ರಾ ಮಹೋತ್ಸವ ಇರುತ್ತದೆ ; ಹಾನುಬಾಳಿನ ಗುಡ್ಡದಲ್ಲಿ : ಹಾನುಬಾಳು , ಅಗನಿ ಹಾಗೂ ಮಕ್ಕಿಹಳ್ಳಿ ಎಂಬ 3 ಊರಿನ ಗುಂಡುಬ್ರಹ್ಮ ದೇವರ ಜಾತ್ರೆಯನ್ನು ಒಟ್ಟುಗೂಡಿ ನೆರವೇರಿಸುತ್ತಾರೆ .

( 9 ಗುಂಡು ಬ್ರಹ್ಮ ದೇವರು ಅಣ್ಣ ತಮ್ಮಂದಿರು) ಈಗ ಕೇವಲ ಮೂರು ದೇವರ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.

  • ಈ ಮೂರು ದೇವರ ನಂದಿಯನ್ನು (ಅಡ್ಡೆ ) ಚಂಡು ಹೂವಿನಿಂದ ಅಲಂಕರಿಸಲಾಗುತ್ತದೆ . ಬೇರೇ ಯಾವುದೇ ದೇವರಿಗು ಚಂಡು ಹೂವಿನಿಂದ ಪೂಜಿಸುವುದಿಲ್ಲ.,

*ಇನ್ನೊಂದು ವಿಶೇಷ ವೆಂದರೆ ಮಕ್ಕಿಹಳ್ಳಿ ಮತ್ತು ಹಾನುಬಾಳುವಿನ ಜನರಿಗು ಒಂದು ಪಂದ್ಯ ಏರ್ಪಡುತ್ತದೆ., 3 ಬಿದುರನ್ನು (ಬೊಂಬನ್ನು) ಬಳಸಿ ಸತ್ತಿಗೆಯನ್ನು ನಿರ್ಮಿಸಿರುತ್ತಾರೆ ., ಇದರಲ್ಲಿ ಎರಡು ಊರಿನ ( ಹಾನುಬಾಳು ಮತ್ತು‌ ಮಕ್ಕಿ ಹಳ್ಳಿ) ಜನರಿಗು ಪೈಪೋಟಿ ಏರ್ಪಡುತ್ತದೆ ., ಯಾವ ಊರಿನ ಸತ್ತಿಗೆ ಅತಿ ಹೆಚ್ಚು ಉದ್ದ ವಿರುತ್ತದೆಯೋ ಎಂದು ಅಳತೆಮಾಡಿ , ಗೆದ್ದ ತಂಡಕ್ಕೆ ಬಹುಮಾನ ನೀಡಲಾಗುತ್ತದೆ ., ಇಂದು 80-100 ಅಡಿಗೂ ಹೆಚ್ಚು ಉದ್ದವಿರುತ್ತದೆ .,

  • ಈ ದೇವರ ಉತ್ಸವವನ್ನು ಪ್ರತೀ ವರ್ಷ ಪಟೇಲ್ ಮನೆತನದ ಸಾರಥ್ಯದಲ್ಲಿ ಊರಿನ ಸಹಕಾರದೊಂದಿಗೆ ನಡೆಸಿ‌ಕೊಂಡು ಬರುತ್ತಿದ್ದಾರೆ .
#Multimedia #education #hassan :
ಮಲ್ಟಿಮೀಡಿಯಾ!
ಉತ್ತಮವಾಗಿ ಪಾವತಿಸುವ ಮತ್ತು ಪೂರೈಸುವ ವೃತ್ತಿಜೀವನದ ಬಗ್ಗೆ ಯೋಚಿಸುತ್ತಿದ್ದೀರಾ? ನಿಮ್ಮ ಕನಸುಗಳು ಹಾಸನದ ಅನಾಬೆಲ್‌ನಿಂದ ಅನಿಮೇಷನ್ ಮತ್ತು ಮಲ್ಟಿಮೀಡಿಯಾ ಕೋರ್ಸ್‌ಗಳೊಂದಿಗೆ ರೆಕ್ಕೆ ಹಿಡಿಯಲಿ. ನೀವು ಭಾರತದಲ್ಲಿ ಅಥವಾ ವಿದೇಶದಲ್ಲಿರುವ ಪ್ರಮುಖ ಆನಿಮೇಷನ್ ಗೆ  ಆಯ್ಕೆಯಾಗುವುದು ಮಾತ್ರವಲ್ಲ, ನಿಮ್ಮ ಸೃಜನಶೀಲತೆ ಮತ್ತು ಕ್ರಿಯಾತ್ಮಕ ಭಾಗವನ್ನು ಸಹ ನೀವು ಸಡಿಲಿಸುತ್ತೀರಿ. ಮತ್ತು ಕ್ಷೇತ್ರದ ಪ್ರವರ್ತಕರು ಮತ್ತು ತಜ್ಞರಿಂದ ತರಬೇತಿ ಪಡೆಯುವುದರಿಂದ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಉತ್ತಮ ಮಾರ್ಗ ಯಾವುದು? ಇಂದು ನಮಗೆ ಕರೆ ಮಾಡಿ. ನಿಮ್ಮ ಹುಚ್ಚು ಕನಸುಗಳನ್ನು ಸಾಕಾರಗೊಳಿಸಲು ಆ ಅಂತಿಮ ಹಾರಾಟವನ್ನು ಮಾಡಿ!!
ANABEL, Opp Samskrutha Bhavan, Park Road, Hassan. Mob:9964451828,8884688113/114/116

LEAVE A REPLY

Please enter your comment!
Please enter your name here