ಹೊಸ ವರ್ಷ ಆಚರಣೆಗೆ ಕೋವಿಡ್ ಮುನ್ನೇಚ್ಚರಿಕಾ ಮಾರ್ಗಸೂಚಿ : ಜಿಲ್ಲಾಧಿಕಾರಿ : ಹಾಸನ ಜಿಲ್ಲಾದಾದ್ಯಂತ ಡಿ.31 ರಾತ್ರಿ 11 ಗಂಟೆಯಿಂದ ಜ.1 ರ ಬೆಳಗ್ಗೆ 6 ಗಂಟೆಯವರಗೆ ನಿಷೇಧಾಜ್ಜ್ನೆ 🚫

    0

    ಹಾಸನದಲ್ಲಿ ಹೊಸವರ್ಷ ಆಚರಣೆ ಸಂಬಂಧ ಜಿಲ್ಲಾ ವ್ಯಾಪ್ತಿಗೆ ಅನ್ವಯವಾಗುವಂತೆ ಕರೋನಾ ವೈರಸ್ (ಕೋವಿಡ್-19) ಸೋಂಕು ಹರಡುವುದನ್ನು ತಡೆಗಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಹಾಸನ ಜಿಲ್ಲಾದಾದ್ಯಂತ ಡಿ.31 ರಾತ್ರಿ 11 ಗಂಟೆಯಿಂದ ಜ.1 ರ ಬೆಳಗ್ಗೆ 6 ಗಂಟೆಯವರಗೆ ನಿಷೇಧ ಮಾರ್ಗಸೂಚಿಗಳನ್ನು ಹೊರಡಿಸಿದೆ.

       
         ಹೊಸವರ್ಷ ಆಚರಣೆಯ ಸಂದರ್ಭದಲ್ಲಿ ಕೋವಿಡ್-19 ಸೋಂಕು ತಡೆಗಟ್ಟಲು ಸಾರ್ವಜನಿಕರ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧಿಸಿದೆ
        
           ಕ್ಲಬ್/ಪಬ್/ರೆಸ್ಟೋರೆಂಟ್ ಹಾಗೂ ಅದೇ ತೆರನಾದ ಸ್ಥಳ/ ಪ್ರದೇಶಗಳಲ್ಲಿ ಸಾಮಾಜಿಕ ಅಂತರವಿಲ್ಲದೇ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ, ವಿಶೇಷ ಡಿಜೆ-ಡಾನ್ಸ್ ಕಾರ್ಯಕ್ರಮಗಳನ್ನು, ವಿಶೇಷ ಪಾರ್ಟಿ, ಇತ್ಯಾದಿ ನಿಷೇಧಿಸಿದೆ. ಆದರೆ ಜಿಲ್ಲೆಯಲ್ಲಿರುವ ಎಲ್ಲಾ ಬಾರ್, ರೆಸ್ಟೋರೆಂಟ್, ಕ್ಲಬ್, ಪಬ್, ಮಾಲ್, ಹೋಂಸ್ಟೇ, ರೆಸಾರ್ಟ್, ಹೋಟಲ್‍ಗಳನ್ನು ಹಾಗೂ ಇನ್ನಿತರೆ ಮನರಂಜನಾ ಕೇಂದ್ರಗಳನ್ನು ರಾತ್ರಿ 11 ಗಂಟೆಯ ನಂತರ ತೆರೆಯುವುದನ್ನು ನಿಷೇಧಿಸಿದೆ.
          
           ಹೊಸ ವರ್ಷಾಚರಣೆ ಸಂಬಂಧದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮುಖ್ಯ ರಸ್ತೆಗಳಲ್ಲಿ ಮತ್ತು ಸಾಮಾಜಿಕ ಅಂತರವಿಲ್ಲದೆ 5 ಮಂದಿಗಿಂತ ಹೆಚ್ಚು ಸಂಖ್ಯೆಯಲ್ಲಿ ಜನರ ಸೇರುವಿಕೆಯನ್ನು ಹಾಗೂ ಸಂಭ್ರಮಾಚರಣೆಯನ್ನು ನಿಷೇಧಿಸಿದೆ.

            ರಾಷ್ರ್ಟೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ/ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತಿನ/ಕಾನೂನು ನ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    LEAVE A REPLY

    Please enter your comment!
    Please enter your name here