ಭಾನುವಾರ ಕೇವಲ 4ಗಂಟೆ ಅವಧಿ 420 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು , 2.64 ಲಕ್ಷ ರೂ ದಂಡ ವಸೂಲಿ

0

ಹಾಸನ: ಜಿಲ್ಲೆಯಲ್ಲಿ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಗಳಿಗೆ ಹಾಸನ ಜಿಲ್ಲಾ ನೂತನ ಪೊಲೀಸ್ ವರೀಷ್ಠಾಧಿಕಾರಿ ಸೂಚನೆ ಮೇರೆಗೆ , ಕಳೆದ ಭಾನುವಾರ(31.July2022) ರಾತ್ರಿ 7 ರಿಂದ 11 ಗಂಟೆವರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಗಿದ್ದು. ಸಂಚಾರ ನಿಯಮ ಉಲ್ಲಂಘನೆಯಾಗಿದ್ದು 420 ಪ್ರಕರಣಗಳನ್ನು ದಾಖಲಿಸಲಾಗಿ. ಅದರಲ್ಲಿ

30 ಡ್ರಿಂಕ್ ಅಂಡ್ ಡ್ರೈವ್ ಪ್ರಕರಣವನ್ನು ದಾಖಲಿಸಿ ಬರೋಬ್ಬರಿ 2,64,500₹ ದಂಡ ವಿಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್‌ ತಿಳಿಸಿದರು.

ಇನ್ನಷ್ಟು ಪ್ರಕರಣ ಕಡಿಮೆ ಅವಧಿಯಲ್ಲಿ ದಾಖಲಾಗುವ ಸಾಧ್ಯತೆ ಇದೆ?
ಸಂಚಾರ ನಿಯಂತ್ರಣಕ್ಕೆ ಪ್ರತಿ ತಾಲ್ಲೂಕಿನಲ್ಲಿ ಚೆಕ್‌ಪೋಸ್ಟ್‌ ನಿರ್ಮಾಣ ಮಾಡುತ್ತಿದ್ದು, ಒಂದು ಠಾಣೆಗೆ 5 ಚೆಕ್‌ಪೋಸ್ಟ್ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು. ಪ್ರತಿ ಚೆಕ್‌ಪೋಸ್ಟ್‌ನಲ್ಲಿ 2 ರಿಂದ 3 ಪೊಲೀಸ್ ಸಿಬ್ಬಂದಿ ನಿಯೋಜಿಸಲು ಸೂಚನೆ ನೀಡಲಾಗಿದೆ’ ಎಂದರು.

LEAVE A REPLY

Please enter your comment!
Please enter your name here