Hassan

ಹಾಸನಾಂಬೆ ಕಾಣಿಕೆ ಕುತೂಹಲಮುಂದುವರಿದ ಎಣಿಕೆ: ದಾಖಲೆ ನಿರೀಕ್ಷೆ

By

October 28, 2022

ಹಾಸನ: ಹಾಸನಾಂಬೆ-ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಮುಗಿದನಂತರ ಶುಕ್ರವಾರ ಬೆಳಗ್ಗೆಯಿಂದಲೇ ಸಿಸಿ ಕ್ಯಾಮೆರಾದ ಕಣ್ಗಾವಲಿನಲ್ಲಿ ಹುಂಡಿಎಣಿಕೆ ಕಾರ್ಯ ಆರಂಭವಾಗಿದ್ದು, ತಡರಾತ್ರಿವರೆಗೂ ಮುಂದುವರಿಯಿತು.ಈಗಾಗಲೇ ಲಾಡು ಹಾಗೂ 300 ಮತ್ತು 1000 ರೂ. ಟಿಕೆಟ್ ಮಾರಾಟದಿಂದ 1.77 ಕೋಟಿ ರೂ. ಸಂಗ್ರಹವಾಗಿದ್ದು, ಈ ಬಾರಿ

ದಾಖಲೆ ಪ್ರಮಾಣದ ಆದಾಯ ಸಂಗ್ರಹ ನಿರೀಕ್ಷೆ ಮಾಡಲಾಗಿದೆ. ಮೂಲಗಳ ಪ್ರಕಾರ 2017 ರಲ್ಲಿ ಸಂಗ್ರಹವಾಗಿದ್ದ 4.17 ಕೋಟಿಗೂ ಅಧಿಕ ಆದಾಯ ಕಾಣಿಕೆ ರೂಪದಲ್ಲಿ ಆವಕವಾಗಿದೆ ಎನ್ನಲಾಗಿದೆ.ಏಕೆಂದರೆ ಅ.13 ರಿಂದ 27ರ ವರೆಗೆ ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆದಿತ್ತು. ಈ ಅವಧಿಯಲ್ಲಿ ಮೊದಲ ಹಾಗೂ

ಕಡೆಯ ದಿನ ಮತ್ತು ಅ.25 ರಂದು ಸೂರ್ಯಗ್ರಹಣ ಹಿನ್ನೆಲೆ ಸಾರ್ವಜನಿಕ ದರ್ಶನ ಇಲ್ಲದೇ ಇದ್ದರೂ, ಗಣ್ಯರು, ಜನಪ್ರತಿನಿಧಿಗಳು ಸೇರಿ ಸುಮಾರು 6 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಹೀಗಾಗಿ

ಈ ಸಲ ಆದಾಯ ಹಿಗ್ಗುವ ಕುತೂಹಲ ಮೂಡಿದೆ. ಎಣಿಕೆ ಮುಗಿದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ.ಕೋರಿಕೆ ಪತ್ರ ಬಹಿರಂಗ ಇಲ್ಲ:ಹಿಂದಿನ ವರ್ಷಗಳಂತೆ ಈ ಬಾರಿಯೂ ವಿವಿಧ ಬೇಡಿಕೆ, ಇಷ್ಟಾರ್ಥ, ಆಸೆ-ಕನಸುಗಳನ್ನು ಈಡೇರಿಸು ತಾಯೆ ಎಂದು ಹಲವು ಕೋರಿಕೆ ಪತ್ರಗಳು ಹುಂಡಿ ಸೇರಿವೆ. ಆದರೆ

ಕಳೆದ ಬಾರಿ ಅನೇಕ ರೀತಿಯ ಅವಾಂತರ ಸೃಷ್ಟಿಯಾಗಿದ್ದ ಕಾರಣದಿಂದ ಈ ಬಾರಿ ಯಾವುದೇ ಕೋರಿಕೆ ಪತ್ರಗಳನ್ನು ಬಹಿರಂಗ ಪಡಿಸದಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದ ಹಿನ್ನೆಲೆ, ಯಾವುದನ್ನೂ ಅಧಿಕಾರಿಗಳು ಬಹಿರಂಗ ಪಡಿಸಲಿಲ್ಲ ಎಂದು ದೇವಾಲಯದ ಆಡಳಿತಾಧಿಕಾರಿ ಜಗದೀಶ್ ತಿಳಿಸಿದರು. ಹೀಗಾಗಿ

ಭಕ್ತರ ಕೋರಿಕೆ ಗುಪ್ತವಾಗಿಯೇ ಉಳಿದಿವೆ.ವಿದೇಶಿ ಕರೆನ್ಸಿ-ಆಭರಣ:ಈ ಬಾರಿಯೂ ಸಹ ಕಾಣಿಕೆ ಹುಂಡಿಯಲ್ಲಿ ವಿದೇಶಿ ಕರೆನ್ಸಿಗಳು, ತಾಳಿ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳು ದೇವಿಯ ಪಾದುಕೆ ಇತರೆ ಬೆಳ್ಳಿ ವಸ್ತುಗಳನ್ನು ಭಕ್ತರು ದೇವಿಗೆ ಅರ್ಪಣೆ ಮಾಡಿದ್ದಾರೆ.ನೂರಕ್ಕೂ ಅಧಿಕ ಮಂದಿ ಭಾಗಿ:ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, 50ಕ್ಕೂ ಹೆಚ್ಚು ಮಂದಿ ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳು ಮತ್ತು

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಜಂಟಿ ಕಾರ್ಯದರ್ಶಿ ಹೆಚ್.ಜಿ. ಕಾಂಚನಾ ಮಾಲ ಅವರ ಮೇಲುಸ್ತುವಾರಿಯಲ್ಲಿ 25 ಮಂದಿ ರೋವರ್ಸ್ ಮತ್ತು ರೇಂಜರ್ಸ್ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. 10 ರೂ. 20 ರೂ. 50, 100, 500 ರೂ. ಮುಖ ಬೆಲೆಯ ನೋಡುಗಳನ್ನು ಕಂತೆ ಮಾಡುವ ಕೆಲಸ ಮುಂದುವರಿದಿದೆ.