ಹಾಸನದ ಉದ್ದೇಶಿತ ವಿಮಾನ ನಿಲ್ದಾಣದ ವಿದ್ಯುತ್ ಮಾರ್ಗಗಳ ಸ್ಥಳಾಂತರಕ್ಕೆ ಸೂಚನೆ

0

ಹಾಸನ ಫೆ.28(ಹಾಸನ್_ನ್ಯೂಸ್ !,  ಇಂಧನ ಇಲಾಖೆ ಹಾಗೂ ಮೂಲ ಸೌಕರ್ಯ ಇಲಾಖೆಯ ಅಪರ ಮುಖ್ಯ  ಕಾರ್ಯದರ್ಶಿಗಳಾದ ಕಪಿಲ್ ಮೋಹನ್ ಅವರು ಇಂದು  ಹಾಸನದ ಉದ್ದೇಶಿತ ವಿಮಾನ ನಿಲ್ದಾಣ ಪ್ರದೇಶಕ್ಕೆ ಭೇಟಿ ನೀಡಿ ಪರೀಶಿಲಿಸಿ  ಹಾಲಿ ಇರುವ  ಹೈ ಟೇಷನ್ ವಿದ್ಯುತ್ ಮಾರ್ಗಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸುವಂತೆ ಸಂಬಂದಪಟ್ಟ  ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
  ಹಾಸನದ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಈಗಾಗಲೇ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ವಿಮಾನ ನಿಲ್ದಾಣದ ಅಕ್ಕ ಪಕ್ಕದ ಎರಡು ಬದಿಯಲ್ಲಿ ಮೂರರಿಂದ ನಾಲ್ಕು ಕಿಲೋ ಮೀಟರ್ ವ್ಯಾಪ್ತಿಯಲ್ಲಿ  ಯಾವುದೇ

ವಿದ್ಯುತ್ ಮಾರ್ಗಗಳು ಇರುವಂತಿಲ್ಲ ಎಂದರು.
ಸರ್ಕಾರದ ಹಂತದಲ್ಲಿ ಹಾಸನ ವಿಮಾನ ನಿಲ್ದಾಣ ಪ್ರಾರಂಭಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ ಆ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಸ್ಥಳವನ್ನು ವೀಕ್ಷಣೆ ನಡೆಸಿ ಪರಿಶೀಲಿಸುತ್ತಿರುವುದಾಗಿ  ತಿಳಿಸಿದರು.
ಕೆ.ಪಿ.ಟಿ.ಸಿ.ಎಲ್. ಮುಖ್ಯ ಇಂಜಿನೀಯರ್ ನಾಗಾರ್ಜುನ ಅವರು ಮಾತನಾಡಿ 

ವಿಮಾನ ನಿಲ್ದಾಣಕ್ಕೆ ಗುರುತಿಸಿರುವ ವ್ಯಾಪ್ತಿಯಲ್ಲಿ ಒಟ್ಟು 68 ಟವರ್‍ಗಳಿದ್ದು, 6 ರಿಂದ 7 ತಿಂಗಳೊಳಗೆ ವಿದ್ಯುತ್ ಮಾರ್ಗ ತೆರವುಗೊಳಿಸಲಾಗುತ್ತದೆ ಎಂದು  ತಿಳಿಸಿದರು.
ಈ ಸಂದರ್ಭದಲ್ಲಿ ಹಾಸನದ ಉಪವಿಭಾಗಾಧಿಕಾರಿ ಬಿ.ಎ ಜಗದೀಶ್,ತಹಶೀಲ್ದಾರ್ ಶಿವಶಂಕರಪ್ಪ ಹಾಗೂ ಮತ್ತಿರರ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here