ಸಾರ್ವಜನಿಕ ಸ್ಥಳಗಳಲ್ಲಿರುವ ನಿಯಮ ಬಾಹಿರ ಪೂಜಾ ಮಂದಿರಗಳನ್ನು ಸ್ಥಳಾಂತರಿಸಲು ಹಾಸನ ಜಿಲ್ಲಾಧಿಕಾರಿಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಂದ ಸೂಚನೆ !!

0

ಹಾಸನ ಫೆ.19(ಹಾಸನ್_ನ್ಯೂಸ್ !, ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಬಾಹಿರವಾಗಿರುವ  ಪೂಜಾ ಮಂದಿರಗಳನ್ನು  ಬೆರಡೆಗೆ ಸ್ಥಳಾಂತರಿಸಲು ಕ್ರಮವಹಿಸುವಂತೆ  ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
   
    ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾರದರ್ಶಿಯಾಗಿ ಆಯೋಜಿಸುವುದು ಕೋವಿಡ್19  ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ದೇವಸ್ಥಾನಗಳ ತೆರವು  ಕುರಿತು  ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು  2009 ರ ನಂತರ ಸಾರ್ವಜನಿಕ ಸ್ಥಳಗಳಲ್ಲಿರುವಂತಹ ದೇವಸ್ಥಾನಗಳು, ಮಸೀದಿಗಳು, ಚರ್ಚ್‍ಗಳು ಅಥವಾ ಯಾವುದೇ ರೀತಿಯ ಧಾರ್ಮಿಕತೆಗೆ ಸಂಬಂದಿಸಿದ ಕಟ್ಟಡಗಳಿದ್ದರೆ   ಅದನ್ನು ಬೇರೆಡೆಗೆ ಸ್ಥಳಾಂತರಿಸಿ ಅಥವಾ ತೆರವುಗೊಳಿಸಿ ಎಂದು ನಿರ್ದೇಶನ ನೀಡಿದರು.

ಆರೋಗ್ಯ ಇಲಾಖೆ ಎಲ್ಲಾ ಸಿಬ್ಬಂದಿಗಳಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಿಬೇಕು  ಮಹಾರಾಷ್ಟ್ರ, ಕೇರಳ ಹಾಗೂ ಕೋವಿಡ್ ಸೋಂಕು ಹೆಚ್ಚಿರುವ  ರಾಜ್ಯಗಳಿಂದ ಶಿಕ್ಷಣ ಪಡೆಯಲು ಬರುತ್ತಿರುವಂತಹ  ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು,  ನರ್ಸಿಂಗ್ ವಿದ್ಯಾರ್ಥಿಗಳು, ಫಾರ್ಮಸಿ ಸೇರಿದಂತೆ  ವಿದ್ಯಾರ್ಥಿಗಳಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಮಾಡಿಸಿ ಎಂದರು.

ಇದೆ ತಿಂಗಳು ಫೆ.28 ರಂದು  ನಡೆಯುವ ಎಫ್.ಡಿ.ಎ ಪರೀಕ್ಷೆಯನ್ನು  ಯಾವುದೇ ಲೋಪದೋಷಗಳು ನಡೆಯದಂತೆ ಎಚ್ಚರವಹಿಸಿ ನಡೆಸಿ ಹಾಗೂ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಯಾವುದೇ ರಿತೀಯ ಎಲೆಕ್ಟ್ರಾನಿಕ್  ಉಪಕರಣಗಳನ್ನು ಪರೀಕ್ಷಾ ಕೊಠಡಿಯೊಳಗೆ ತರದಂತೆ ನಿಗಾವಹಿಸಿ  ಎಂದು ಅವರು ಹೇಳಿದರು.

ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಪಿ.ಸತ್ಯವತಿ ಅವರು ಮಾತನಾಡಿ   ಇದೆ ತಿಂಗಳು ಫೆ.28 ರಂದು  ಪ್ರಥಮ ದರ್ಜೆ ಸಹಾಯಕ ಹುದ್ದಗೆ ಪರೀಕ್ಷೆಗಳು   ನಡೆಯಲ್ಲಿದ್ದು ಪೋಲಿಸ್ ಭದ್ರತೆ  ತೆಗೆದುಕೊಂಡು ಎಚ್ಚರವಹಿಸಿ ಪರೀಕ್ಷೆ ನಡೆಸಿ ಎಂದರು.

ಪರೀಕ್ಷಾ ಕೊಠಡಿಯೊಳಗೆ ಯಾವುದೆ ರೀತಿಯ ಮೊಬೈಲ್. ಮೈಕ್ರೋಚಿಪ್, ಕ್ಯಾಲ್ಕುಲೇಟರ್ ಹಾಗೂ  ಮತ್ತಿತರರ ಎಲೆಕ್ಟ್ರಾನಿಕ್  ಉಪಕರಣಗಳನ್ನು ತರದಂತೆ ಎಚ್ಚರವಹಿಸಿ ಎಂದರಲ್ಲದೆ, ಕೋವಿಡ್ ಮಾರ್ಗಸೂಚಿಗಳಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,  ಮಾಸ್ಕ್ ಧರಿಸುವುದು,  ಸ್ಯಾನಿಟೈಸರ್ ಬಳಕೆಯನ್ನು ಪಾಲಿಸುವಂತೆ   ಅವರು ಹೇಳಿದರು.
    ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತಾರ್ ಅವರು ಮಾತನಾಡಿ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಮನವೊಲಿಸಿ ಹಾಗೂ  ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ಮತ್ತುಷ್ಟು ಹೆಚ್ಚಿಸಿ ಎಂದರಲ್ಲದೆ  ಕೋವೊಇಡ್ 19 ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಿಳಿಸಿದರು.

ವಿಡಿಯೋ ಸಂವಾದದ ನಂತರ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಇಲ್ಲಿವೆರೆಗೆ ಲಸಿಕೆ ಪಡೆದಿರುವರ ಮಾಹಿತಿ  ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ ಎಂದರಲ್ಲದೆ  ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ  ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಸಲಹೆ ನೀಡಿ ಎಮದು ಅಧಿಕಾರಿಗಳಿಗೆ ಸೂಚಿಸಿದರು.

  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್, ವಿಶೇಷ ಭೂ ಸ್ವಾಧಿನಾಧಿಕಾರಿ ಮಂಜುನಾಥ್, ಆರ್.ಸಿ.ಎಚ್. ಅಧಿಕಾರಿ ಡಾ|| ಕಾಂತರಾಜ್ ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here