Hassan

ಜಿಲ್ಲೆಯಲ್ಲಿನ ಮಳೆ ವರದಿ

By Hassana News

September 30, 2020

ಹಾಸನ ಜಿಲ್ಲೆಯಲ್ಲಿ ಸೆ.29 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಕಟ್ಟಾಯ 4.3 ಮಿ.ಮೀ., ದುದ್ದ 0.2 ಮಿ.ಮೀ., ಶಾಂತಿಗ್ರಾಮ 3 ಮಿ.ಮೀ., ಸಾಲಗಾಮೆ 4.4 ಮಿ.ಮೀ., ಗೊರೂರು 5.6 ಮಿ.ಮೀ. ಮಳೆಯಾಗಿದೆ.ಸಕಲೇಶಪುರ ತಾಲ್ಲೂಕಿನ ಬೆಳಗೋಡು 8.2 ಮಿ.ಮೀ., ಬಾಳ್ಳುಪೇಟೆ 24.2 ಮಿಮೀ., ಹೆತ್ತೂರು 6.8 ಮಿ.ಮೀ., ಹೊಸೂರು 2.2 ಮಿ.ಮೀ. ಮಳೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು 6.2 ಮಿ.ಮೀ, ಹೊಳೆನರಸೀಪುರ 10.2 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 2.4 ಮಿ.ಮೀ. ಮಳೆಯಾಗಿದೆ. ಆಲೂರು ತಾಲ್ಲೂಕಿನ ಕುಂದೂರು 12.4 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಬಿಕ್ಕೋಡು 2.4 ಮಿ.ಮೀ., ಹಳೇಬೀಡು 6.2 ಮಿ.ಮೀ., ಹಗರೆ 32.2 ಮಿ.ಮೀ., ಗೆಂಡೆಹಳ್ಳಿ 5 ಮಿ.ಮೀ., ಅರೆಹಳ್ಳಿ 4.6 ಮಿ.ಮೀ., ಬೇಲೂರು 4.2 ಮಿ.ಮೀ. ಮಳೆಯಾಗಿದೆ.