ಹಾಸನದಲ್ಲಿಂದು ಬೆಳ್ಳಂಬೆಳಗ್ಗೆ ಜೈಲಿನಲ್ಲಿರುವ ಕೈದಿಗಳಿಗೆ ಬಿಗ್ ಶಾಕ್ . ಹಾಸನ ನಗರದ ಬಿ.ಎಂ.ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ದಾಳಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ , ಅಡಿಷನಲ್ ಎಸ್ ಪಿ ತಮ್ಮಯ್ಯ , ಡಿವೈಎಸ್ಪಿ ಉದಯಬಾಸ್ಕರ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರಿಂದ ದಾಳಿ ನಡೆಸಿದ್ದು , ಈ ವೇಳೆ
ಮೊಬೈಲ್ ಫೋನ್, ಗಾಂಜಾ ಪತ್ತೆಯಾಗಿದ್ದು .ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ನೇತೃತ್ವದಲ್ಲಿ ಅಂದಾಜು 15 ಜನ ಪೊಲೀಸ್ ಅಧಿಕಾರಿಗಳು, ಪೊಲೀಸರ ಬೆಳ್ಳಂಬೆಳಗ್ಗೆ ದಾಳಿ ಗೆ ಸಿಕ್ಕಿಬಿದ್ದಿದ್ದಾರೆ ., ಜಿಲ್ಲಾ ಕಾರಾಗೃಹದಲ್ಲಿ 328 ಪುರುಷ ವಿಚಾರಣಾಧೀನ ಖೈದಿಗಳು, 17 ಮಹಿಳಾ ವಿಚಾರಣಾಧೀನ ಖೈದಿಗಳಿದ್ದು ಒಂದೂವರೆ ಗಂಟೆಗೂ ಹೆಚ್ಚು ಕಾಲ ಜೈಲಿನೊಳಗೆ ಶೋಧಕಾರ್ಯ ನಡೆಸಿದ್ದಾರೆ. ವಿಚಾರಣಾಧೀನ ಖೈದಿಗಳ ಕೊಠಡಿಗಳ ತಪಾಸಣೆ ವೇಳೆ
2 ಮೊಬೈಲ್ , ಹೆಡ್ ಫೋನ್ , ಗಾಂಜಾ ಪ್ಯಾಕೇಟ್‌ಗಳು ಪತ್ತೆಯಾಗಿವೆ. , ಈ ದಾಳಿ ಯಲ್ಲಿ ಗಾಂಜಾ ಸೇವಿಸುವ ನಾಲ್ರು ಖೈದಿಗಳು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿತ್ತು , ನಾಲ್ವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ಅಂಶ ರಕ್ತದಲ್ಲಿದ್ದ ಮಾಹಿತಿ ಬಹಿರಂಗವಾಗಿದ್ದು . ಕೊಲೆ ಆರೋಪದಲ್ಲಿದ್ದ ಇಬ್ಬರು ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಆರು ಬ್ಯಾರಕ್ ಗಳಲ್ಲಿ ಏಕ ಕಾಲ ದಾಳಿ ನಡೆಸಿದಾಗ
ಪ್ರಕರಣ ಬಯಲಾಗಿದೆ. ಜೈಲಿಗೆ ಗಾಂಜಾ ಸರಬರಾಜು ಮಾಡಿದ್ದು ಯಾರು ?, ಮೊಬೈಲ್ ಫೋನ್ ಇಟ್ಡುಕೊಂಡು ಅವರುಗಳು ಮಾಡುತ್ತಿದ್ದ ಆಪರೇಷನ್ ಏನು? ಜೈಲರ್ ಗಳು ಇದರಲ್ಲಿ ಭಾಗಿಯಾಗಿದ್ದಾರಾ ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂಬುವುದಾಗಿ ಹಾಸನ ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.