ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ರವರ ಆಯೋಜನೆಯೊಂದಿಗೆ ವಕೀಲರುಗಳಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿವರ್ಗದವರಿಗೆ ಆರೋಗ್ಯ ತಪಾಸಣೆ

0

ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ರವರ ಆಯೋಜನೆಯೊಂದಿಗೆ ವಕೀಲರುಗಳಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿವರ್ಗದವರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ನ್ಯಾಯಾಧೀಶರಾದ ಶ್ರೀ ಶಿವಣ್ಣರವರು ಉದ್ಘಾಟಿಸಿದರು. ಮತ್ತು ಪ್ರತಿಯೊಬ್ಬರಲ್ಲಿಯೂ ಆರೋಗ್ಯದ ಕಾಳಜಿ ಅತಿ ಮುಖ್ಯವಾಗಿದ್ದು ಎಲ್ಲರೂ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ ಮೂರ್ತಿ ರವರು ವಹಿಸಿದ್ದು, ಅವರು ಆರೋಗ್ಯ ತಪಾಸಣೆ ಶಿಬಿರದ ಮಹತ್ವ ಶಿಬಿರದ ಉಪಯೋಗಗಳನ್ನುತಿಳಿಸಿದರು, ಮತ್ತು ಅಚ್ಚುಕಟ್ಟಾಗಿ ಶಿಬಿರವನ್ನು ಏರ್ಪಡಿಸಲಾಗಿದೆ ಇದರ ಸದುಪಯೋಗವನ್ನು ಎಲ್ಲಾ ವಕೀಲರುಗಳು ಪಡೆಯಬೇಕೆಂಬುದು ನನ್ನ ಆಶಯ ಎಂದು ತಿಳಿಸಿದರು.

ರೋಟರಿ ರಾಯಲ್ಸ್ ಅಧ್ಯಕ್ಷರು ಹಾಗೂ ವಕೀಲರಾದ ಶ್ರೀ ಮನು ಕಾರ್ಯಕ್ರಮವನ್ನು ಆಯೋಜಿಸಿದ್ದು ವೇದಿಕೆಯಲ್ಲಿದ್ದ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ವಕೀಲರ ಸಂಘದ ಅಧ್ಯಕ್ಷರಿಗೆ ಹಾಗೂ ಜಿಲ್ಲಾ ನ್ಯಾಯಾಧೀಶರಿಗೆ ಧನ್ಯವಾದಗಳು ತಿಳಿಸಿದರು.

ವೇದಿಕೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರವಿಕಾಂತ್ ರವರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಸಮಾರಂಭವನ್ನು ಉದ್ದೇಶಿಸಿ ಮಣಿ ಸ್ಪೆಷಾಲಿಟಿ ಆಸ್ಪತ್ರೆಯ ಶ್ರೀಮತಿ ಡಾಕ್ಟರ್ ಸೌಮ್ಯ ಮಣಿ ರವರು ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ದಂತ ವೈದ್ಯರಾದ ವೈಭವ ರವರ ತಂಡ, ಚಿರಂತ ರವರ ಕಣ್ಣಿನ ಚಿಕಿತ್ಸಾ ತಂಡ,ಎಸ್ ಡಿ ಎಂ ಕಾಲೇಜಿನ ವೈದ್ಯರುಗಳು,

ಜನಪ್ರಿಯ ಆಸ್ಪತ್ರೆಯ ವೈದ್ಯರುಗಳು ಹಾಜರಿದ್ದು ಬ್ಲಡ್ ಶುಗರ್ , ಬಿ ಪಿ, ಇಸಿಜಿ, ದಂತ ಕ್ಯಾನ್ಸರ್, ಮೊಳೆ ಸಂಬಂಧ ಕಾಯಿಲೆ, ಸ್ತ್ರೀಯರ ಆರೋಗ್ಯದ ಸಮಸ್ಯಗೆ ಸಂಬಂಧಪಟ್ಟ ವೈದ್ಯರುಗಳು ಹಾಜರಿದ್ದು ಸುಮಾರು 1000ಕ್ಕೂ ಹೆಚ್ಚು ಜನರು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here