ಬಯಲು ಶೌಚ ಮುಕ್ತ ಹಾಸನ ನಗರಕ್ಕೆ ಸೈಕಲ್ ಜಾಥಾ ಜಾಗೃತಿ

0

ಹಾಸನ ಅ.22 :  ಜಿಲ್ಲಾಡಳಿತ, ನಗರಸಭೆ  ಹಾಸನ ವತಿಯಿಂದ ಸ್ವಚ್ಛ ಭಾರತ ಮಿಷನ್ ಯೋಜನೆ 2021- 22 ರ 75ನೇ ವರ್ಷದ ಸ್ವಾತಂತ್ರ್ಯದ  ಅಮೃತ ಮಹೋತ್ಸವದ ಅಂಗವಾಗಿ ನಗರ ಪ್ರದೇಶದಲ್ಲಿ 

ನಗರ ಪ್ರದೇಶ ಬಯಲು ಶೌಚಾಲಯದ ಮುಕ್ತಿಗೊಳಿಸುವ ಬಗ್ಗೆ ಜಾಗೃತಿ 2021ರ ಸೈಕಲ್ ಜಾಥಾ ಕಾರ್ಯಕ್ರಮವನ್ನು ಇಂದು ಹೇಮಾವತಿ ಪ್ರತಿಮೆ ಬಳಿ ನಡೆಸಲಾಯಿತು.

ಈ ಸಂದರ್ಭದಲ್ಲಿ  ನಗರಸಭೆ ಅಧ್ಯಕ್ಷರಾದ ಮೋಹನ್ ಕುಮಾರ್, ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ, ಪರಿಸರ ಅಭಿಯಂತರರಾದ ವೆಂಕಟೇಶ್, ಆರೋಗ್ಯ ಅಧಿಕಾರಿ ಮಂಜುನಾಥ್, ಹೋಟೆಲ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷರಾದ ಅಭಿನಂದನ್, ಯುವಜನ ಸೇವಾ ಕ್ರೀಡಾ ಇಲಾಖೆಯ ಪುಟ್‍ಬಾಲ್ ತರಬೇತಿದಾರರಾದ

ಕೃಷ್ಣಪ್ಪ, ಯುವಜನ ಸೇವಾ ಇಲಾಖೆಯ ಸಿಬ್ಬಂದಿ ಜಯರಾಮ್, ರಾಷ್ಟ್ರಪ್ರಶಸ್ತಿ ವಿಜೇತ ಬಿ.ಟಿ ಮಾನವ, ಕಲಾವಿದೆ ನೀಲಮ್ಮ ಹಾಜರಿದ್ದರು.

#muncipaltyhassan

LEAVE A REPLY

Please enter your comment!
Please enter your name here