Hassan

ಪಿ.ಎಫ್. ಮತ್ತು ಇ.ಪಿ.ಎಸ್. ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಸರ್ವಸದಸ್ಯರ ಸಭೆ

By

September 09, 2022

.ಹಾಸನ: ವಿವಿಧ ಸರಕಾರದ ಕಾರ್ಮಿಕ ಭವಿಷ್ಯನಿಧಿ ವ್ಯಾಪ್ತಿಯಲ್ಲಿ ನಿವೃತ್ತರಾಗಿರುವ ಎಲ್ಲರ ಬೇಡಿಕೆಗಳ ಈಡೇರಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಭರವಸೆ ನೀಡಿದರು.ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಮಹೀಂದ್ರ ಆರ್ಕೇಡ್ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಪಿ.ಎಫ್. ಮತ್ತು ಇ.ಪಿ.ಎಸ್. ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಸರ್ವಸದಸ್ಯರ ಸಭೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ

ಅವರು, ಮೊದಲು ಮನವಿ ಪತ್ರವನ್ನು ಸ್ವೀಕರಿಸಿ ನಂತರ ಉದ್ದೇಶಿಸಿ ಮಾತನಾಡುತ್ತಾ, ತಮ್ಮ ಕುಟುಂಬಕ್ಕಾಗಿ ಹಗಲು ರಾತ್ರಿ ದುಡಿದು ಇಡೀ ಜೀವನವನ್ನು ಮುಡಿಪಾಗಿಟ್ಟು ಕೆಲಸ ಮಾಡಿದ್ದೀರಿ. ಬಿ.ಪಿ.ಎಲ್. ಪಟ್ಟಿಗೆ ನಮ್ಮನ್ನು ಸೇರಿಸಬೇಕೆಂದು ಕೋರಲಾಗಿದ್ದು, ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಇತರೆ ಶಾಸಕರಿಗೂ ಕೂಡ ಗಮನಸೆಳೆದು ಎಲ್ಲಾರು ಒಟ್ಟಾಗಿ ವಿಧಾನ ಸೌದದಲ್ಲಿ ನಡೆಯುವು ಸಭೆಯಲ್ಲಿ ನಡೆಯುವ ಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಸರಕಾರದಿಂದ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜೊತೆಗೆ ಆರೋಗ್ಯದ ದೃಷ್ಠಿಯಿಂದ ಸರಕಾರಿ ಆಸ್ಪತ್ರೆಯಲ್ಲಿ ಹಿರಿಯ ನಾಗರೀಕರಿಗಾಗಿ ಎರಡು ಡಯಾಲೀಸಸ್ ಮಿಷೆನನ್ನು ಇನ್ನೊಂದು ವಾರದಲ್ಲಿ ಹಸ್ತಾಂತರಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಪಿ.ಎಫ್. ಮತ್ತು ಇ.ಪಿ.ಎಸ್. ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ ನಾನು ಜಾಗವನ್ನು ಕೊಡುವ ಕೆಲಸ ಮಾಡುತ್ತೇನೆ. ಜೊತೆಗೆ ಯಾರು ಆರೋಗ್ಯವಾಗಿ ಇದ್ದೀರಿ, ಜೀವನ ಮಾಡುವುದಕ್ಕೆ ಯಾರಿಗೆ ಕಷ್ಟಕರವಾಗುತ್ತಿದೆ ಅವರು ಕೆಲಸವನ್ನು ಮಾಡಿಕೊಂಡು ಆರ್ಥಿಕವಾಗಿ ಸ್ಥಿರತೆ ಮಾಡಿಕೊಳ್ಳಲು ಹೆಚ್ಚು ಗಮನವಹಿಸಬೇಕು. ಅಂತವರು ಒಟ್ಟು ಗೂಡಿಕೊಂಡು ಕಡಿಮೆ ಕೆಲಸ ಮಾಡಿ ಹೆಚ್ಚು ದುಡಿಮೆ ಇರುವ ಯಾವುದಾದರೂ ಗುಡಿ ಕೈಗಾರಿಕೆಯನ್ನು ಆಯ್ಕೆ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಯೋಜನೆಯಡಿ ಹತ್ತು ಲಕ್ಷದವರೆಗೂ ಹಣ ಬರುತ್ತಿದ್ದು, ಆ ಹಣವನ್ನು ಕೊಡಿಸುವ ಮೊದಲ ಕೆಲಸವನ್ನು ನಾನು ಮಾಡುತ್ತೇನೆ. ನಿಮ್ಮ ಸಂಘದಲ್ಲಿರುವ ಎಲ್ಲಾರೂ

ಸೇರಿ ಸದಸ್ಯತ್ವ ಮಾಡಿಕೊಂಡು ಒಂದು ಸಹಕಾರ ಬ್ಯಾಂಕ್ ನಿರ್ಮಿಸುವುದಾದರೇ ಅದಕ್ಕೆ ಸಲಹೆಯನ್ನು ಕೊಟ್ಟು ನನ್ನ ವಯಕ್ತಿಕ 25 ಲಕ್ಷ ರೂಗಳ ಹಣವನ್ನು ಬ್ಯಾಂಕ್ ಗೆ ಕೊಡಲಾಗುವುದು. ನೀವು ಯಾವ ಉದ್ಯಮಕ್ಕೆ ಬಳಕೆ ಮಾಡಿಕೊಳ್ಳುತ್ತೀರಿ ಅದಕ್ಕೆ ಬಳಕೆ ಮಾಡಿಕೊಂಡು ಅದರಿಂದ ಬರುವ ಲಾಭ ನಿಮಗೆ ಅನುಕೂಲವಾಗುತ್ತದೆ ಎಂದು ಕಿವಿಮಾತು ಹೇಳಿದರು. ನಾನು ಬ್ಯಾಂಕಿಗೆ ಕೊಡುವ ಠೇವಣಿ ಹಣವನ್ನು ವಾಪಸ್ ಕೇಳುವುದಿಲ್ಲ. ಹಿರಿಯರ ಜೀವ ಸುಧಾರಿಸಲಿ ದೃಷ್ಠಿಯಲ್ಲಿ ಈ ನನ್ನ ಒಂದು ಭಾಗದ ಸಹಕಾರವಾಗಿದೆ. ಇನ್ನು 45 ದಿನಗಳ ಒಳಗಾಗಿ ಬೇಲೂರು ರಸ್ತೆಯಲ್ಲಿ ಉದ್ದೂರು ಗ್ರಾಮಕ್ಕೆ ಮೊದಲು ಸಿಗುವ ಜಾಗವನ್ನು ನಿಮ್ಮ ಸಂಘಕ್ಕೆ ನೊಂದಾಯಿಣಿ ಮಾಡಿಕೊಡಲಾಗುವುದು. ಅದರ ಹಣವನ್ನು ನಾನೆ ಭರಿಸಲಾಗುವುದು. ನಿಮ್ಮ ನ್ಯಾಯಯುತ ಬೇಡಿಕೆಗೆ ಹೋರಾಟವನ್ನು ಬೇಡಿ ಎಂದು ಸಲಹೆ ನೀಡಿದರು. ಹಿರಿಯರ ಆರೋಗ್ಯ ಮೇಳೆ ನಡೆಸಲು ನೀವು ಸಲಹೆ ಕೊಟ್ಟರೇ ಉಚಿತ ನೇತ್ರ ಚಿಕಿತ್ಸೆ ಹಾಗೂ ಸರಕಾರದಿಂದ ಮತ್ತು ನನ್ನ ವಯಕ್ತಿಕ ಆರ್ಥಿಕವನ್ನು ಕುಡ ಭರಿಸಲಾಗುವುದು, ಕೇಂದ್ರ ಸರಕಾರದಿಂದ ಕೇಳಿರುವ ಬೇಡಿಕೆಯನ್ನು ನಾನು ಕೂಡ ಪತ್ರ ಬರೆದು ಪ್ರಧಾನಿಯವರ ಗಮನಸೆಳೆಯುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಮೋಹನ್, ಹುಡಾ ನಿರ್ದೇಶಕರಾದ ಯಶವಂತ್, ಪಿ.ಎಫ್. ಮತ್ತು ಇ.ಪಿ.ಎಸ್. ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಮೃತ್ಯಂಜಯ ಸ್ವಾಮಿ, ಅಧ್ಯಕ್ಷರಾದ ಜಿ.ಓ. ಮಹಾಂತಪ್ಪ, ಗೌರವಾಧ್ಯಕ್ಷ ಪುಟ್ಟೇಗೌಡ, ಕಾರ್ಯಾಧ್ಯಕ್ಷ ಮದನಮೋಹನ ಕುಮಾರ್, ಉಪಾಧ್ಯಕ್ಷ ಕೆ.ವಿ. ಅಶ್ವಥ್ ನಾರಾಯಣಶೆಟಿ, ಚಾಮೇಗೌಡ, ಪ್ರಧಾನ ಕಾರ್ಯದರ್ಶಿ ವೈ.ಎಸ್. ರಾಮಭದ್ರಯ್ಯ, ಜಂಟಿ ಕಾರ್ಯದರ್ಶಿ ವಿ.ಡಿ. ನಾಗರಾಜು, ಖಜಾಂಚಿ ಬ್ಯಾಟಾಚಾರ್, ಸಂಘಟನಾ ಕಾರ್ಯದರ್ಶಿ ಆರ್. ರುದ್ರಸ್ವಾಮಿ, ಬಿ.ಎಂ. ಪ್ರಕಾಶ್, ಪುಟ್ಟರಾಜು ಇತರರು ಉಪಸ್ಥಿತರಿದ್ದರು.