COURSES FOR STUDENTS

ವಿಕಲಚೇತನರಿಗೆ ತರಬೇತಿ ಉದ್ಯೋಗ ಸೌಲಭ್ಯ ಮಾಹಿತಿ | ರೈತರು ಇ ಕೆವೈಸಿ ಮಾಡಿಸುವುದು ಕಡ್ಡಾಯ

By

August 18, 2022

ಅ.19 ರಂದು ಹಾಸನ ತಾಲೂಕಿನ 18-35 ವರ್ಷ ಒಳಗಿನ ನಿರುದ್ಯೋಗ ವಿಲಚೇತನರಿಗೆ ತರಬೇತಿ ಶಿರ

ಹಾಸನ: ನಗರದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಆಗಸ್ಟ್ 19ರ ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಬಿಲಿಟಿ ( ಎ.ಪಿ.ಡಿ ) ಸಂಸ್ಥೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಾಸನ ತಾಲೂಕಿನ 18 ರಿಂದ 35 ವರ್ಷದ ಒಳಗಿನ ನಿರುದ್ಯೋಗ ವಿಕಲಚೇತನರಿಗೆ ತರಬೇತಿ ಮತ್ತು ಉದ್ಯೋಗ ಆಯ್ಕೆ ಶಿಬಿರದ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೈಹಿಕ ಹಾಗೂ ವಾಕ್ ಮತ್ತು ಶ್ರವಣದೋಷ ಮತ್ತು ಒಂದು ಕಣ್ಣಿನ ಸಮಸ್ಯೆ ಇರುವ ವಿಕಲಚೇತನರಿಗೆ ಮಾತ್ರ ವಿಕಲಚೇತನ ಗುರುತಿನ ಚೀಟಿ, ವಿದ್ಯಾಭ್ಯಾಸ ದಾಖಲಾತಿ ಜೊತೆ ನಿಮ್ಮ ಪಾಲಕರನ್ನು ಕರೆದುಕೊಂಡು ಬರಬೇಕು. ಆಧಾರ್ ಕಾರ್ಡ್, 2 ಪಾಸ್ ಪೋಟ್ ಸೈಸ್ ಫೋಟೋ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಬಿಲಿಟಿ ( ಎ.ಪಿ.ಡಿ ) ಸಂಸ್ಥೆಯು 1959 ರಲ್ಲಿ ಬೆಂಗಳೂ ರಿನ ಲಿಂಗರಾಜಾಪುರದಲ್ಲಿ ಆರಂಭಗೊಂಡು ಕಳೆದ ಆರು ದಶಕಗಳಿಂದ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ಸಂಸ್ಥೆಯು ವಿಕಲಚೇತನರ ಶಿಕ್ಷಣ, ತಬೇತಿ, ಉದ್ಯೋಗ, ದೈಹಿಕ, ವ್ಯಾಯಮ, ಆರೋಗ್ಯ ಮತ್ತು ವೈದ್ಯಕೀಯ ಪುನಶ್ವೇತನ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾ ಪ್ರತಿ ವರ್ಷ 35,000 ಕ್ಕೂ ಹೆಚ್ಚು ವಿಕಲಚೇತನರ ಜೊತೆಗೆ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಸಂಸ್ಥೆಯು ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ನೇರವಾಗಿ ಮತ್ತು ಉಳಿದ ಜಿಲ್ಲೆಗಳಲ್ಲಿ ಇತರ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಉದ್ಯೋಗಾವಕಾಶಗಳು : 18 ವರ್ಷ ಮೇಲ್ಪಟ್ಟ ವಿಕಲಚೇತನ ವ್ಯಕ್ತಿಗತಿಗೆ ಮಾಹಿತಿ ನೀಡುವುದರ ಜೊತೆಗೆ ಅವರು ಉದ್ಯೋಗ ಪಡೆಯುವಂತಾಗಲು ಸೂಕ್ತ ತರಬೇತಿಗಳನ್ನು ಸಂಸ್ಥೆಯು ನೀಡುತ್ತದೆ. ಕಾಲ್ ಸೆಂಟರ್/ಬಿಐಓ ತರಬೇತಿಗೆ ಪಿಯುಸಿ ಉತ್ತೀರ್ಣ ಇಲ್ಲವೇ ಅನುತ್ತೀರ್ಣ, ರೀಟೈಲ್ ಸೇವೆಗಳ ತರಬೇತಿಗೆ 10ನೇ ತರಗತಿ ಉತ್ತೀರ್ಣ ಇಲ್ಲವೇ ಪಿಯುಸಿ ಉತ್ತೀರ್ಣ ಅನುತ್ತೀರ್ಣ, ಪುನರ್ ಕೌಶಲ್ಯ ತರಬೇತಿಗೆ ಪದವೀಧರ ಪಾಸ್ ಇಲ್ಲವೇ ಪಿಯುಸಿ ಉತ್ತೀರ್ಣ, ಅನುತ್ತೀರ್ಣ ಆಗಿರಬೇಕು. ಬೇಸಿಕ್ ಫಿಟ್ಟರ್ ತರಬೇತಿ, ಬೇಸಿಕ್ ಎಲೆಕ್ಟ್ರಾನಿಕ್ ಮತ್ತು ಮೆಕಾನಿಕ್, ತೋಟಗಾರಿಕೆ ತರಬೇತಿ, ಗಾರ್ಡನ್ ಮೇಲ್ವಿಚಾರಕರು ಈ ಕೆಲಸದ ಬಗ್ಗೆ ತರಬೇತಿ ಕೊಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಶ್ರೀಧರ್ ಮೊಬೈಲ್ ಸಂಖ್ಯೆ 9535225693 ಹಾಗೂ ಪ್ರಸನ್ನ ಮೊಬೈಲ್: 9964536271 ಗೆ ಸಂಪರ್ಕಿಸಬಹುದಾಗಿದೆ.

ರೈತರು ಇ ಕೆವೈಸಿ ಮಾಡುವುದು ಕಡ್ಡಾಯ

ಹೊಳೆನರಸೀಪುರ: ಪ್ರಧಾನ ಮಂತ್ರಿಕಿಸಾನ್ ಸಮ್ಮಾನ್ ಯೋಜನೆಯ ನೆರವು ನೈಜ ಫಲಾನುವಿಗಳಿಗೆ ದೊರೆಯುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳುಲು ರೈತರು ಇ ಕೆವೈಸಿ ಮಾಡುವುದು ಕಡ್ಡಾಯ ವಾಗಿರುತ್ತದೆ ಎಂದು ಸಹಾಯಕ ಕೃಷಿ ಅಧಿಕಾರಿ ಸ್ವಪ್ನ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಪ್ರಸ್ತುತ ಕೇಂದ್ರ ಸರ್ಕಾರ ರೈತರ ಕೃಷಿ ಖಾತೆಗೆಳಿಗೆ ಆರು ಸಾವಿರ ರೂಪಾಯಿಗಳ ಸಹಾಯ ಧನ ಪಡೆಯುತ್ತಿರುವ ರೈತರು ಈ ತಿಂಗಳು ಆಗಸ್ಟ್ 31 ರೊಳಗೆ ತಮ್ಮ ಇ ಕೆವೈಸಿ ನೊಂದಣಿ ಮಾಡಿಸಿಕೊಳ್ಳುವುದಕ್ಕೆ ಕಡ್ಡಾಯವಾಗಿರುತ್ತದೆ ಇಲ್ಲವಾದಲ್ಲಿ ಈ ವರ್ಷ ಕೇಂದ್ರ ಸರ್ಕಾರದಿಂದ ಬರುವ ಆರು ಸಾವಿರ ರೂಪಾಯಿಗಳು ಬರುವುದಿಲ್ಲ ಎಂದು ತಿಳಿಸಿದರು.

ರೈತರ ಬೆಳಗಳ ಬೆಳೆ ಮಾಹಿತಿಗಳನ್ನು ಸಮೀಕ್ಷೆಯ ಅಪ್ ನಲ್ಲಿ ದಾಖಲು ಮಾಡುವುದರಿಂದ ರೈತರಿಗೆ ಸಹಕಾರಿ ಆಗಲಿದೆ. ಈ ದಾಖಲು ಮಾಡಲು ರೈತರು ತಮ್ಮ ಬಳಿ ಇರುವ ಮೊಬೈಲ್‌ಗಳಲ್ಲಿ ಆಪ್‌ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದು ಇಲ್ಲವಾದಲ್ಲಿಕಚೇ ರಿಯಲ್ಲಿ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕೆಂದು ನುಡಿದರು.

ರಾಜ್ಯ ಸರ್ಕಾರ ಯಂತ್ರೋಪಕರಣ ಬಳಕೆ ಪ್ರೋತ್ಸಾಹಿಸಲು ಉದ್ದೇಶಿಸಿದ್ದು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸಹಾಯ ಹಸ್ತ ನೀಡಿದ್ದು ಅದರಂತೆ ಇಂಧನ ವೆಚ್ಚ ಕಡಿಮೆ ಮಾಡಲು ಪ್ರತಿ ಎಕರೆಗೆ 250 ರೂಗಳಂತೆ ಗರಿಷ್ಟ ಐದು ಎಕರೆಗೆ 250 ರೂಗಳನ್ನು ರೈತ ಶಕ್ತಿ ಹೆಸರಿನಲ್ಲಿ ನೀಡುತ್ತಿದ್ದು ಈ ಹಣ ನೇರವಾಗಿ ರೈತರ ಖಾತೆಗೆ ಜಮೆ ಆಗಲಿದೆ ಎಂದು ಮಾಹಿತಿ ನೀಡಿದರು. – ಭೀಮವಿಜಯ