Breaking News

ಮೇಜರ್ ಸರ್ಜರ್ ಬೈ ಹಾಸನ್ ಎಸ್ ಪಿ

By

July 21, 2022

ಹಾಸನ : ಒಂದೇ ದಿನದಲ್ಲಿ 172 ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ ಆಗಿದ್ದೂ 5 ವರ್ಷ ತುಂಬಿದವರ ಟಾರ್ಗೆಟ್ ಆಗಿತಬಹುದು ; ನೂತನ ಎಸ್ಪಿಯವರ ಮೊದಲ ಹೆಜ್ಜೆಯಲ್ಲೇ ಮೇಜರ್ ಸರ್ಜರಿಯದ್ದಾಗಿತ್ತು , ಅದು ದಿಟ್ಟ ಹೆಜ್ಜೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ

ಹಾಸನ: ಹೆಚ್ಚಿನ ದೂರುಗಳು ಬಂದ ಹಿನ್ನಲೆಯಲ್ಲಿ 5 ವರ್ಷ ತುಂಬಿದವರ ಮೇಲೆ ನಿಗಾವಹಿಸಿ ಒಂದೇ ದಿನದಲ್ಲಿ ಹಾಸನ ಜಿಲ್ಲೆಯ 172 ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ ಮಾಡುವ ಮೂಲಕ ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕ‌ರ್ ಅವರು ತಮ್ಮ ಆಡಳಿತದಲ್ಲಿ ಬಿಗಿ ತಂದು ಸಾರ್ವಜನಿಕರಿಗೆ ಉತ್ತಮ ಸೇವೆ ಕೊಡುವ ಭರವಸೆಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಹಲವಾರು ವರ್ಷಗಳ ಕಾಲ ಒಂದೇ ಠಾಣೆ ಹಾಗೂ ಒಂದೇ ಜಾಗದಲ್ಲಿ ಕೆಲಸ ಮಾಡುತ್ತಿದ್ದರು. ಕೆಲವರು ಅಕ್ರಮಗಳಿಗೆ ಎಡೆ ಮಾಡಿಕೊಟ್ಟಿದ್ದರ ಬಗ್ಗೆ ಇತ್ತೀಚಿಗೆ ಜಿ.ಪಂ.ನಲ್ಲಿ ಸಭೆಯಲ್ಲಿ ಪೊಲೀಸ್ ಘಟಕದ ವ್ಯಾಪ್ತಿ | ಯಲ್ಲಿ ಕೆಲಸ ಮಾಡುವ 5 ವರ್ಷ ನಡೆದ ಮತ್ತು ಮೇಲ್ಪಟ್ಟ ಅವಧಿಯ ಜಿಲ್ಲೆಯ ಹಲವಾರು ಶಾಸಕರು ಪಟ್ಟಿ ಮಾಡಿ ಪೊಲೀಸರನ್ನು | ಪೊಲೀಸ್ ಇಲಾಖೆಯಲ್ಲಿ ಹಲವಾರು ವರ್ಷಗಳ ಕಾಲ ಜಾಂಡಾ ಹೂಡಿರುವ ಬಗ್ಗೆ ದೂರುಗಳು ನೀಡಿದ್ದರು. ಹಾಗೂ ಸಾರ್ವಜನಿಕರಿಂದಲೂ ಕೂಡ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಖಡಕ್ | ನಿರ್ಧಾರದೊಂದಿಗೆ ಹಲವಾರು ಜನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಠಾಣೆಗಳಲ್ಲಿ ಪೊಲೀಸ್ ವರ್ಗಾವಣೆ ಮಾಡಲಾಗಿದೆ.

ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ತ್ವರಿತವಾಗಿ ಹೂಡಿ ಇದು ಹೊಸ ಜಾಗದಲ್ಲಿ ಕೆಲಸಕ್ಕೆ ಹಾಜರಾಗುವಂತೆ ಅದೇಶದಲ್ಲಿ ತಿಳಿಸಲಾಗಿದೆ. ಹಾಸನ ಜಿಲ್ಲೆಯ ವಿವಿಧ ಪೊಲೀಸ್ ವಾಹನ ಚಾಲಕರಾಗಿದ್ದ 8 ಜನರನ್ನು ವರ್ಗಾವಣೆ ಮಾಡಿದ್ದು, ಇದುವರೆಗೂ ಅವಕಾಶ ಸಿಗದೆ  ಇದುವರೆಗೆ ಚಾಲಕರಾಗಿಲ್ಲದವರ ಚಾಲಕರಾಗಿ ಅವಕಾಶ ಕಲ್ಪಿಸಲಾಗಿದೆ. ಇನ್ನು ಪೊಲೀಸ್ ಠಾಣೆಯಲ್ಲಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುತ್ತಿರುವ ಹಾಸನ ಜಿಲ್ಲೆಗೆ ಇತ್ತೀಚೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾ- ರಿಯಾಗಿ ಹೊಸದಾಗಿ ಬಂದಿರುವ ಹರಿರಾಂ ಶಂಕ‌ರವರು | ಆಡಳಿತ ವಿಭಾಗದಲ್ಲಿ బిಗಿ ಹಿಡಿತ ಮತ್ತು ಸುಧಾರಣೆ ತರುವ ಉದ್ದೇಶದಿಂದ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.,

ಹಲವಾರು ಪೊಲೀಸರನ್ನು ಬೇರೆ ತಾಲೂಕುಗಳಿಗೆ ವರ್ಗಾ ಮಾಡಲಾಗಿರುವುದು ಹಲವರಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

ಇದರಂತೆ ನಗರಾಭಿವೃದ್ಧಿ ಪ್ರಾಧಿಕಾರಿ, ನಗರಸಭೆ, ಇಂಜಿನಿಯ‌ ಕಛೇರಿ, ಡಿಸಿ ಕಛೇರಿಯ ಆಡಳಿತ ವಿಭಾಗ, ತಹಸೀಲ್ದಾರ್ ಕಛೇರಿ, ಸೇರಿದಂತೆ ವಿವಿಧ ಕಛೇರಿಯಲ್ಲಿ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಹಾಸನ ಮತ್ತು ಜಿಲ್ಲೆಯ ವಿವಿಧ ಭಾಗಗಳಲ್ಲಿ ಇರುವ ನಾನಾ ಇಲಾಖೆಗಳಲ್ಲೂ ಕೂಡ ಕಳೆದ 5, 10, 15 ರಿಂದ 20 ವರ್ಷಗಳ ಕಾಲ ಒಂದೆ ಕಡೆ ಜಾಂಡ ಊರಿರುವ ಅಧಿಕಾರಿಗಳ ಮತ್ತು ಸಿಬ್ಬಂದಿಗಳನ್ನು ಗುರ್ತಿಸಿ ವರ್ಗಾವಣೆ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.