Arsikere

ಅರಸೀಕೆರೆ ಕ್ಷೇತ್ರದಲ್ಲಿ ರಾಜಕೀಯ ಸಂಟ್ ನಡೆಯಲ್ಲ, ಅದೇನ್ ದುರಾಡಳಿತ ನಡೆದಿದೆ ಎಂಬ ಆರೋಪ ಸಾಬೀತ್ ಮಾಡಿ’ ಎಂದು ಶಾಸಕ ಕೆ. ಎಂ.ಶಿವಲಿಂಗೇಗೌಡ

By

August 09, 2022

ಅರಸೀಕೆರೆ ಕ್ಷೇತ್ರದಲ್ಲಿ ರಾಜಕೀಯ ಸಂಟ್ ನಡೆಯಲ್ಲ, ಅದೇನ್ ದುರಾಡಳಿತ ನಡೆದಿದೆ ಎಂಬ ಆರೋಪ ಸಾಬೀತ್ ಮಾಡಿ’ ಎಂದು ಶಾಸಕ ಕೆ. ಎಂ.ಶಿವಲಿಂಗೇಗೌಡ ಸವಾಲು .

ಬಿಜೆಪಿವರು ಸೋಮವಾರ ತಮ್ಮ ವಿರುದ್ಧ ನಡೆಸಿದ ಪ್ರತಿಭಟನೆ ಬಗ್ಗೆ

ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, 2023 ಚುನಾವಣೆ ಗುರಿ ಇಟ್ಟುಕೊಂಡು ನನ್ನ ವಿರುದ್ಧ ತೊಡೆ ತಟ್ಟುತ್ತಿದ್ದಾರೆ . ಇದಕ್ಕೆ ಶೀಘ್ರದಲ್ಲೇ ನಮ್ಮ ಅರಸೀಕೆರೆ ಜನ ಪ್ರತ್ಯುತ್ತರ ಕೊಡುತ್ತಾರೆ ಎಂದರು

ಆರೋಪ ಮಾಡುವವರು ಸಾಕ್ಷಿ ಸಹಿತ ರುಜುವಾತು ಮಾಡಬೇಕು. ಯಾವ ದುರಾಡಳಿತ ನಡೆದಿದೆ. ಇವರಿಗೆ ಹೇಳಿದವರು ಯಾರು, ಇಷ್ಟುವರ್ಷ ಇಲ್ಲದ್ದು, ಈ ಮುಖಂಡರು ಬಂದ ಬಳಿಕ ಇವೆಲ್ಲ ಶುರು ಮಾಡಿದ್ದಾರೆ ಹಾಗಾದರೆ ಅದೂ ಆಗಲಿ , ಸಾಭೀತು ಪಡಿಸಲಿ ಎಂದು ಪ್ರಶ್ನಿಸಿದರು.

ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ವಯಸ್ಸಾಗಿದೆ ಮನೆಗೆ ಕಳುಹಿಸಿ ಎಂದು ಅದ್ಯಾರೋ ಕರೆ ನೀಡುವವರು ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಮತ್ತಿತರ ಮುಖಂಡರಿಗೂ ವಯಸ್ಸಾಗಿಲ್ಲ ಎಂದು ಭಾವಿಸಿದ್ದಾರೆಯೇ. ಅವರನ್ನು ಮೊದಲು ಮನೆಗೆ ಕಳುಹಿಸಿ ನಂತರ ನನ್ನ ಬಗ್ಗೆ ಮಾತನಾಡಲಿ ಎಂದು ಗದರಿದರು . ಜನ ಯಾರು ಯೋಗ್ಯರು

ಎಂಬುದನ್ನು ನಿರ್ಧರಿಸುತ್ತಾರೆ ಏನೇ ಸುಳ್ಳು ಅದೆಲ್ಲ ಇಲ್ಲಿ ನನ್ನ ಅರಸೀಕೆರೆಲಿ ನಡೆಯಲ್ಲ ಎಂದರು. ಆರಸೀಕೆರೆ ಕ್ಷೇತ್ರದಲ್ಲಿ ಮಳೆಯಿಂದ ಶಾಲೆಗಳು ಬಿದ್ದುಹೋಗಿದವೇ. 300ಕ್ಕೂ ಹೆಚ್ಚು ಶಾಲೆ ಶಿಥಿಲಗೊಂಡಿದೆ. ಸರಕಾರ ಒಂದು ಶಾಲೆಗೆ ಎರಡು ಲಕ್ಷ ರೂ. ಕೊಟ್ಟರೆ ಚಾವಣಿ ಹಾಕಕ್ಕು ಸಾಲಕ್ಕಿಲ್ಲ, ಇನ್ನ ದುರಸ್ತಿ ಮಾಡಲು ಹೊಸದಾಗಿ ನಿರ್ಮಿಸಲು ಹೇಗೆ ಸಾಧ್ಯ ಹೀಗಾಗಿ ಹೆಚ್ಚಿನ ಅನುದಾನ ನೀಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಶಾಸಕ ಕೆ.ಎಂ.ಶಿ ಈ ಪ್ರತ್ಯುತ್ತರಕ್ಕೆ ಬಿಜೆ‌ಪಿ ಟಿಕೆಟ್ ಆಕಾಂಕ್ಷಿ ಎನ್.ಆರ್.ಸಂತೋಷ್ ಏನೇಳುತ್ತಾರೆ ಕಾದು ನೋಡಬೇಕು.