Breaking News

ಹಾಸನದ ಯುವ ಉದ್ಯಮಿ, ಕೆಸಿಪಿ ಗ್ರೂಪ್‌ ಮಾಲೀಕ , ಸಮಾಜ ಸೇವಕ HP ಕಿರಣ್ ಮುಂಬರುವ ಹಾಸನ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ; ಪ್ರಜ್ವಲ್ ಪ್ರತಿಸ್ಪರ್ಧಿ ಸಾಧ್ಯತೆ?

By

September 04, 2022

ಹಾಸನ: ಹಾಸನದ ಯುವ ಉದ್ಯಮಿ, ಕೆಸಿಪಿ ಗ್ರೂಪ್‌ ಮಾಲೀಕ ಹಾಗೂ ಸಮಾಜ ಸೇವಕ ಹೆಚ್.ಪಿ. ಕಿರಣ್ ಮುಂಬರುವ ಹಾಸನ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಆಗುವರೇ…? ಹೀಗೊಂದು ಕುತೂಹಲ ಹಾಗೂ ಮಾತುಗಳು ರಾಜಕೀಯ ಇದಕ್ಕೆ ಜಿಲ್ಲಾ ವಲಯದಲ್ಲಿ ಬರುತ್ತಿದೆ.ಪೂರಕ ಎನ್ನುವಂತೆ ಸದಾ ಬುಸಿನೆಸ್ ಎಂದು ಓಡಾಡಿಕೊಂಡಿದ್ದ ಕಿರಣ್ ಕಳೆದೊಂದು ವರ್ಷದಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ

ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚ ರಿಸಿಕೊಂಡು ಹಾಸನ ನಗರಾದ್ಯಂತ ಪ್ಲೆಕ್ಸ್ ಕೂಡ ಹಾಕಿಸಿಕೊಂಡಿದ್ದರು. ಇದೀಗ ಪಾಂಚಜನ್ಯ ಗಣಪತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ತಾವು ರಾಜಕೀಯಕ್ಕೆ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಹಿನ್ನೆಲೆಯಲ್ಲಿ ವೇದಿಕೆ ಸೃಷ್ಠಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ‌ ಭರಪೂರ ಚರ್ಚೆ ನಡೆಯುತ್ತಿದೆ .,

ಕೆಸಿಪಿ ಗ್ರೂಪ್ ಹಾಗೂ ಪ್ರತಿಷ್ಠಿತ ಕೃಷ್ಣ ಹೋಟೆಲ್, ಟಿವಿಎಸ್ ಶೋರೂಂ ಸೇರಿದಂತೆ ಶಿಕ್ಷಣ ಸಂಸ್ಥೆಗಳು ಹಾಗೂ ಹೋಟೆಲ್ ಉದ್ಯಮ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತೊಡಗಿಸಿಕೊಂಡಿರುವ ಕಿರಣ್ ತಂದೆ ಪುಟ್ಟಸ್ವಾಮಿಗೌಡರು ಕಟ್ಟಿದ ಸಾಮ್ರಾಜ್ಯವನ್ನು ಮುನ್ನೆಡೆಸುತ್ತಿದ್ದಾರೆ. ಈ ನಡುವೆ ಸಮಾಜ ಸೇವೆಯಲ್ಲಿ ಹೆಸರು ಮಾಡಿರುವ ಕಿರಣ್ ಉದ್ಯಮದ ಜೊತೆ ರಾಜಕೀಯದ ಕಡೆ ಆಸಕ್ತಿ ತೋರಲು ಹಲವು ಕಾರಣಗಳಿವೆ ಎನ್ನಲಾಗುತ್ತಿದೆ.

ಈ ಹಿಂದೆ ಬಿಎಂ ರಸ್ತೆ ಅಗಲೀಕರಣ ಸಂದರ್ಭ ರೇವಣ್ಣ ವಿರುದ್ಧ ತೊಡೆ ತಟ್ಟಿ ನಿಂತಿದ್ದು ಹಾಗೂ ಕಾನೂನು ಹೋರಾಟದಲ್ಲಿ ತಮ್ಮ ಹೋಟೆಲ್ ರಕ್ಷಿಸಿಕೊಂಡಿದ್ದರು. ಈ ಕಾರಣಕ್ಕೆ ಇಂದಿಗೂ ಹೋಟೆಲ್ ಬದಿಯ ಕಟ್ಟಡಗಳನ್ನು ಒಡೆಯಲು ಇಂದಿಗೂ ಸಾಧ್ಯವಾಗಿಲ್ಲ. ಇದಕ್ಕಾಗಿ ರೇವಣ್ಣ ಇವರ ಮೇಲೆ ಮುನಿಸು ಮಾಡಿಕೊಂಡಿದ್ದರು. ರಾಜಕೀಯವಾಗಿ ಎಲ್ಲಾ ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಈ ಕುಟುಂಬದಿಂದ ಕಿರಣ್ ರನ್ನು ಭವಿಷ್ಯದಲ್ಲಿ ರಾಜಕೀಯಕ್ಕೆ ತರುವ ಪ್ರಯತ್ನಗಳು ನಡೆದಿವೆ ಎನ್ನಲಾಗುತ್ತಿದೆ. ನೆನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ

ನಿರಾಕರಿಸಲಾಗದೆ ಮುಂದಿನ ದಿನಗಳಲ್ಲಿ ನೋಡೋಣ ಎಂದಿದ್ದಾರೆ. ಹಾಗೊಂದು ವೇಳೆ ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ ಬಿಜೆಪಿ ಯಿಂದ ಬರುವ ಎಂಪಿ ಅಭ್ಯರ್ಥಿ ಆಗುವುದು ಖಚಿತ ಎನ್ನಲಾಗುತ್ತಿದೆ. ಈ ಮೂಲಕ ಮತ್ತೊಬ್ಬ ಉದಯೋನ್ಮುಕ ಯುವಕ ಪ್ರತಿ ಸ್ಪರ್ಧಿ ಉದಯೋನ್ಮುಖ ಸಂಸದನನ್ನು ಜಿಲ್ಲೆ ಎದುರಿಸುವ ಸಾಧ್ಯತೆ ಜಿಲ್ಲೆ ನೋಡಬಹುದು ,  ಕಾದು ನೋಡೋಣ… ಈ ಸ್ಪರ್ಧೆಯಲ್ಲಿ ಯಾರು ಮೇಲಗೈ ಸಾಧಿಸಬಹುದು ಎಂದು …!