ಹಾಸನ ವಿಧಾನಸಭಾ ಕ್ಷೇತ್ರಕ್ಕೆ ರೇವಣ್ಣ : ಈ ಧನುರ್ಮಾಸ ಕಳೆದ ಬಳಿಕ ನಿರ್ಧಾರ

0

ಬೆಳಗಾವಿ/ಹಾಸನ : ‘ಹಾಸನವೋ ಹೊಳನರಸೀಪುರವೋ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಲಾಗುವುದು , ಸ್ಪರ್ಧಿಸಿದರೆ ಹೊಳೆನರಸೀಪುರದಲ್ಲಿ ಯಾರು? ಎಂಬ ಬಗ್ಗೆ ಜನವರಿ 15ರ (ಧನುರ್ಮಾಸ ಕಳೆದ ನಂತರ) ಬಳಿಕ ನಿರ್ಧಾರ ನೀಡುವೆ’ ಎಂದು ಜೆಡಿಎಸ್ ವರೀಷ್ಠ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಹೇಳಿರೋದು ಕಾರ್ಯಕರ್ತರಲ್ಲಿ ಕುತೂಹಲ‌ ಮೂಡಿಸಿದೆ.

ರಾಜ್ಯದ 224 ಕ್ಷೇತ್ರದಲ್ಲಿ 93 ಕ್ಷೇತ್ರಗಳ ಒಟ್ಟಿ ಬಿಡುಯಾದರು , ಹಾಸನ ಜಿಲ್ಲೆಯ ಹೊಳೆನರಸೀಪುರ ಸೇರಿ ಯಾವುದೇ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲಿ ಇರಲಿಲ್ಲ ? ಎಲ್ಲಿ ನಿಮ್ಮ ಸ್ಪರ್ಧೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ‘ನಿಮ್ಮನ್ನೆಲ್ಲ ಕೇಳಿ, ದಿನಾಂಕಗಳನ್ನು ನೋಡಿ ತೀರ್ಮಾನ ಪ್ರಕಟಿಸುತ್ತೇನೆ‘ ಎಂದರು.

ಹಾಸನದಲ್ಲಿ ಸ್ಪರ್ಧೆ ಖಚಿತವೇ ಎಂದಿದ್ದಕ್ಕೆ, ’ರೇವಣ್ಣ ನಿಂತರೆ 50 ಸಾವಿರ ಮತಗಳಿಂದ ಸೋಲಿಸುತ್ತೇವೆ ಎಂದು ಕೆಲವರು ಹೇಳಿಕೊಂಡು ಓಡುತ್ತಿದ್ದಾರೆ. ಅವರ ಸವಾಲು ಸ್ವೀಕರಿಸಲೇಬೇಕಲ್ಲ. ಎಲ್ಲವನ್ನು ಹೇಳುವುದಕ್ಕೆ ಸಮಯ ಬರುತ್ತೆ. ಒಳ್ಳೆಯ ದಿನಾಂಕ ಬರಬೇಕಲ್ಲ’ ಎಂದು ಹೇಳಿದರು

LEAVE A REPLY

Please enter your comment!
Please enter your name here