ಹಾಸನ ಜನತೆಯ ಮೂರುವರೆ ತಿಂಗಳ ಸುದೀರ್ಘ ಮನೆವಾಸ ಬಹುತೇಕ ಅಂತ್ಯ ನಾಳೆಯಿಂದ ಹಾಸನ ಅನ್ ಲಾಕ್ ಆದರೆ ಎಚ್ಚರ ಮರೆತೀರಾ ಜೋಕೆ ? ಕೋವಿಡ್ ನಿಯಮ ಪಾಲಿಸೋದು ಕಡ್ಡಾಯ

0

ಹಾಸನ/ಕರ್ನಾಟಕ : ಕಳೆದ ಮೂರುವರೆ ತಿಂಗಳಿಂದ ಹಾಸನ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಾಗಿತ್ತು.ರಾಜ್ಯಾದ್ಯಂತ ಕಳೆದ ಎರಡು ವಾರದ ಹಿಂದೆಯೇ ಅನ್ ಲಾಕ್ ಪ್ರಕ್ರಿಯೇ ಆರಂಭವಾಗಿದ್ದರೂ ಕೊರೋನಾ ಪಾಸಿಟಿವಿಟಿ ರೇಟ್ ಇಳಿಕೆಯಾಗಲಿ ಎಂದು ಹಾಸನ ಜಿಲ್ಲಾಧಿಕಾರಿ ಕಾಯುವ ನಿರ್ಧಾರ ಕೈಗೊಂಡಿದ್ದರು., ಶೇ 5% ಒಳಗಿರುವ ಈ ಹಿನ್ನಲೆಯೇ ನಾಳೆಯಿಂದ ಅನ್ ಲಾಕ್ 3.0 ನಿಯಮ ಜಾರಿಯಾಗಲಿರೋದು ಬಹುತೇಕ ಖಚಿತ.,

ರಾಜ್ಯ ಸರ್ಕಾರದ ಪ್ರಸ್ತುತ ಆದೇಶವನ್ನು ನಾಳೆ ಸೋಮವಾರದಿಂದ ಜಾರಿಗೆ ಬರುವಂತೆ ಸೂಚಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಇನ್ನು ಒಂದು ವಾರ ಲಾಕ್ ಡೌನ್ ಮುಂದುವರೆದರೆ ದಿನಗೂಲಿ ಕಾರ್ಮಿಕರು , ಮಧ್ಯಮ ವರ್ಗದವರಿಗೆ ಬಾರಿ ಕಷ್ಟವಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆ ನಡೆಯುತ್ತಿತ್ತು. ಅದೃಷ್ಟವಶಾತ್ ಹಾಗೆ ಆಗಲಿಲ್ಲ. ಆದರೆ ಕೋವಿಡ್ ನಿಯಮ ಪಾಲಿಸೋದು ನಮ್ಮ ಕರ್ತವ್ಯ

ನೆನಪಿದೆಯಾ ಸ್ನೇಹಿತರೆ !, ಕಳೆದ ಮಾರ್ಚ್ 22,2021 ರಿಂದ ಜುಲೈ 11ರ ತನಕ ನಮ್ಮ ಜಿಲ್ಲೆಯಲ್ಲಿ ಎರಡನೇ ಅಲೆ ಪ್ರಾರಂಭವಾಗಿ ಬರೋಬ್ಬರಿ 112 ದಿನಗಳ ಕಾಲ ಜಿಲ್ಲೆಯಲ್ಲಿ ಕೊರೋನಾ ಹೆಮ್ಮಾರಿ ರೌದ್ರ ನರ್ತನ ಮಾಡಿತ್ತು.  ಈಗಲೂ ಸೋಂಕಿತರ ಸಂಖ್ಯೆ ಕಡಿಮೆ ಅನ್ನೋಹಾಗಿಲ್ಲ.ಆದರೆ

ರಾಜ್ಯದ ಸರ್ಕಾರದ ನಿಯಮದ ಪ್ರಕಾರ ನಾಳೆಯಿಂದ ಕೆಲವು ಷರತ್ತುಗಳ ನಿಯಮದಂತೆ ಜಿಲ್ಲೆಯನ್ನು ಜಿಲ್ಲಾಡಳಿತ ಅನ್ ಲಾಕ್ ಮಾಡಲಾಗುತ್ತಿದೆ.

ಸರ್ಕಾರದ ಆದೇಶದನ್ವಯ ನಾಳೆಯಿಂದ ರಾಜ್ಯ‌ಸರ್ಕಾರ ಹೊರಡಿಸಿರುವ ನಿಯಮಗಳೆ ಎತಾವತ್ತಾಗಿ ಹಾಸನ ಜಿಲ್ಲೆಯಲ್ಲಿಯೂ ಪಾಲನೆಯಾಗಲಿವೆ .ದಿನ ಬಿಟ್ಟು ದಿನದ ಬದಲು ಎಲ್ಲಾ ದಿನಗಳು ವ್ಯಾಪಾರ ವಹಿವಾಟಿಗೆ ಅವಕಾಶ ದೊರೆಯಲಿವೆ ಎನ್ನಲಾಗಿದೆ… ಹೊಸ ಆದೇಶ ಬರುವುದಿಲ್ಲ ರಾಜ್ಯದ ಅದೇಶ ಪಾಲನೆಯಾಗಲಿದೆ..???
ನಾಳೆಯಿಂದ ಜಿಲ್ಲೆಯನ್ನು ಅನ್ ಲಾಕ್ ಮಾಡುವ ಸೂಚನೆಯನ್ನು ಜಿಲ್ಲಾಡಳಿತ ಸೂಚಿಸಿದ್ದು, ಸ್ಥಳೀಯವಾಗಿ ಆದೇಶವನ್ನು ಹೊರಡಿಸಿಲ್ಲ. ಹೀಗಾಗಿ ಮತ್ತೇ ಅನ್ ಲಾಕ್ ಆದೇಶ ಬದಲಾದ್ರೂ ಆಗಬಹುದಾ…? ದೇವರೇ ಬಲ್ಲ !!

LEAVE A REPLY

Please enter your comment!
Please enter your name here