ಹಾಸನ ಗ್ರಾಮಾಂತರ ಇನ್ಸ್ ಪೆಕ್ಟರ್ ಆಗಿ ಪಿ.ಸುರೇಶ್ ನೇಮಕ

0

ಹಾಸನ : ಹಾಸನ ಗ್ರಾಮಾಂತರ ವೃತ್ತದ ಇನ್ ಸ್ಪೆಕ್ಟರ್ ಆಗಿ ಬೆಂಗಳೂರಿನ ಲೋಕಾಯುಕ್ತದಲ್ಲಿ ಕಾರ‌್ಯ ನಿರ್ವಹಿಸುತ್ತಿದ್ದ ಪಿ.ಸುರೇಶ್ ಅವರು ವರ್ಗಾವಣೆಗೊಂಡಿದ್ದಾರೆ.
ರಾಜ್ಯ ಸರ್ಕಾರವು ಬುಧವಾರ ಐದು ಮಂದಿ ಇನ್‌ ಸ್ಪೆಕ್ಟರ್ ಗಳನ್ನು ವಿವಿಧ ಸ್ಥಳಕ್ಕೆ ವರ್ಗಾವಣೆ ಮಾಡಿದೆ. ಆ ಪಟ್ಟಿಯಲ್ಲಿ ಸುರೇಶ್ ಕೂಡ ಸೇರಿದ್ದಾರೆ. ಆರಂಭದಲ್ಲಿ ಮಂಗಳೂರು ಸಬ್‌ ಇನ್‌ ಸ್ಪೆಕ್ಟರ್ ಆಗಿ ಕಾರ‌್ಯನಿರ್ವಹಿಸಿದ್ದ ಅವರು, ಜಿಲ್ಲೆಯಲ್ಲಿ ಹಿರೀಸಾವೆ, ಚನ್ನರಾಯಪಟ್ಟಣ ಗ್ರಾಮಾಂತರ, ಹಾಸನ ನಗರ ಹಾಗು ಹಾಸನ ಕೆ.ಆರ್.ಪುರಂ ಬಡಾವಣೆ ಠಾಣೆಯಲ್ಲಿ ಕೆಲಸ ಮಾಡಿದ್ದರು. ಬಳಿಕ ಇನ್‌ ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದು ಬೆಂಗಳೂರು ಲೋಕಾಯುಕ್ತದಲ್ಲಿ ಕೆಲಸ ಮಾಡುತ್ತಿದ್ದರು.
ಸಬ್‌ ಇನ್‌ ಸ್ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಸಲ್ಲಿಸಿದ ಉತ್ತಮ ಸೇವೆಯನ್ನು ಪರಿಗಣಿಸಿ ಪಿ.ಸುರೇಶ್ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ ಕೂಡ ಪಡೆದುಕೊಂಡಿದ್ದಾಾರೆ.
ಕರ್ತವ್ಯ ನಿರ್ವಹಣೆಯಲ್ಲಿ ಸಹಜವಾಗಿಯೇ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ಪರಿಪಾಲನೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಲ್ಲಿ ಕಾರ‌್ಯ ನಿರ್ವಹಿಸುವ ಸ್ವಭಾವದ ಮೂಲಕ ಅವರು ಕೆಲಸ ಮಾಡಿದ ಕಡೆಗಳಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ

LEAVE A REPLY

Please enter your comment!
Please enter your name here