ಹಿರೀಸಾವೆ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಿದ ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳ ಬಂಧನ!!

0

ಕೇಸಿನ ವಿವರ

ರಮೇಶ ಬಿನ್ ಮೂಡಲಗಿರಿ ಸಣ್ಣಪ್ಪ, ಮಟ್ಟನವಿಲೆ ಗ್ರಾಮ, ಹಿರೀಸಾವೆ ಹೋಬಳಿ, ಚನ್ನರಾಯಪಟ್ಟಣ ತಾಲೂಕು ಇವರು ದಿನಾಂಕ 28/10/2020 ರಂದು ಹಿರಿಸಾವೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಸದರಿ ದೂರಿನಲ್ಲಿ ಪಿರ್ಯಾದಿವಯರು ಪ್ರತಿ ದಿನದಂತ ದಿ:-28.10.2020 ರಂದು ಬೆಳಿಗ್ಗೆ 07.00 ಗಂಟೆಯಲ್ಲಿ ಪಿರ್ಯಾದಿ ಜಮೀನಿನ ಹತ್ತಿರ ಹೋದಾಗ ಯಾವುದೋ ಕಾರು ಸಂಪೂರ್ಣ ಸುಟ್ಟು ಹೋಗಿ, ಹೊಗೆ ಬರುತ್ತಿದ್ದು, ಮುಂದೆ ಹೋಗಿ ನೋಡಲಾಗಿ ಕಾರಿನ ಡಿಕ್ಕಿಯಲ್ಲಿ ಯಾವುದೋ ಮನುಷ್ಯನ ಶವ ಸಂಪೂರ್ಣ ಸುಟ್ಟು ಹೋಗಿ ತಲೆಯ ಸ್ವಲ್ಪ ಭಾಗ ಕಾಣುತ್ತಿದ್ದು, ಯಾವುದೋ ದುರುದ್ದೇಶದಿಂದ ಎಲ್ಲಿಯೋ ಕೊಲೆ ಮಾಡಿ, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಪೆಟ್ರೋಲ್ ಅಥವಾ ಸೀಮೆ ಎಣ್ಣೆ ಹಾಕಿ, ಡಿಕ್ಕಿಯಲ್ಲಿ ಸುಟ್ಟು ಹಾಕಿರುತ್ತಾರೆ. ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು.

ಆರೋಪಿಯ ಪತೆಯ ಬಗ್ಗೆ ವಿಶೇಷ ತಂಡ ರಚನೆ : ಪ್ರಕರಣದ ಗಂಭೀರತೆಯನ್ನು ಅರಿತು ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ, ಹಾಸನ ರವರು ಅಪರ

ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಂದಿನಿ ರವರ ಮೇಲುಸ್ತುವಾರಿಯಲ್ಲಿ , ಹೊಳೆನರಸೀಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು ಶ್ರೀ ಲಕ್ಷ್ಮಗೌಡರವರ ಉಸ್ತುವಾರಿಯಲ್ಲಿ ಚನ್ನರಾಯಪಟ್ಟಣದ ಸಿಪಿಐ ಶ್ರೀ ಕುಮಾರ್ ರವರ ನೇತೃತ್ವದಲ್ಲಿ ಹಿರೀಸಾವೆ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿಗಳನ್ನು ಒಳಗೊಂಡಂತೆ ತಂಡಗಳನ್ನು ರಚಿಸಿದ್ದು, ಸದರಿ ತಂಡವು ಅರೋಪಿಯ ಬಗ್ಗೆ ಮಾಹಿತಿಯನ್ನು ಸುಟ್ಟ ಕಾರಿನ ಚಾರ್ಸಿ ನಂಬರ್ ಮತ್ತು ಇಂಜಿನ್ ನಂಬರ ಆಧಾರದ ಮೇಲೆ ತನಿಖೆ ನಡೆಸಿ, ಕಾರನ್ನು ಮತ್ತು ಮೃತನನ್ನು ಗುರುತಿಸಲಾಯಿತು.

ನಂತರ ಮೃತನ ಹೆಸರು ಮತ್ತು ವಿಳಾಸ ಪಡೆಯಲಾಗಿ ದಿನೇಶ ಬಿನ್ ನರಸಿಂಹಯ್ಯ, 25 ವರ್ಷ, ಡ್ರೈವರ್ ಕೆಲಸ, ಲಕ್ಷ್ಮೀಪುರ, ಹೆಬ್ಬಾಳು ಗ್ರಾಮನುಗ್ಗೇಹಳ್ಳಿ,ಚನ್ನರಾಯಪಟ್ಟಣ ತಾಲೂಕು ಎಂಬುದಾಗಿ ಮಾಹಿತಿಯು ತಿಳಿದು ಬಂದಿದ್ದು, ದಿನೇಶನ ಕುಟಂಬದವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಅವರನ್ನು ವಿಚಾರಣೆ ಮಾಡಲಾಗಿ ದಿನೇಶ ಮತ್ತು ಅತನ ಹೆಂಡತಿ ಅಭಿಲಾಷ ರವರ ನಡುವೆ ಕೌಟಂಬಿಕ ಕಲಹ ಇರುವುದಾಗಿ ಮಾಹಿತಿಯು ತಿಳಿದು ಬಂದಿದ್ದು, ನಂತರ ದಿನೇಶನ ಹೆಂಡತಿ ಅಭಿಲಾಷ್ ಮತ್ತು ಅವರ ತಂದೆ ಆತನ ತಮ್ಮ ನನ್ನು ಪತ್ತೆ ಮಾಡಿ ಕೃತ್ಯದ ಬಗ್ಗೆ ವಿಚಾರ ಮಾಡುವ ಸಲುವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಕೃತ್ಯದ ಬಗ್ಗೆ ವಿಚಾರ ಮಾಡಲಾಯಿತು.

ಪ್ರಕರಣದ ಹಿನ್ನಲೆ :

ಅರೋಪಿಗಳನ್ನು ವಿಚಾರ ಮಾಡಲಾಗಿ ಮೃತ ದಿನೇಶನು ಈಗೇ ಸುಮಾರು 4 ವರುಷದ ಹಿಂದೆ ಅಭಿಲಾಷ ರವರನ್ನು ಮದುವೆ ಮಾಡಿಕೊಂಡಿದ್ದು, ಆತನ ಹೆಂಡತಿ ಅಭಿಲಾಷ ರವರ ನಡುವೆ ಕೌಟುಂಬಿಕ ಕಲಹ ನಡೆದಿದ್ದು, ಮೃತ ದಿನೇಶನು ಎರಡನೇ ಮದುವೆಯಾಗಿದ್ದು, ಈ ವಿಚಾರದಲ್ಲಿ ದಿನೇಶ ಮತ್ತು ಆತನ ಹೆಂಡತಿ ಅಭಿಲಾಷಳ ಜೊತೆ ಗಲಾಟೆ ಮತ್ತು ಜಗಳ ನಡೆದಿದ್ದು, ಈ ಬಗ್ಗೆ ಪೊಲೀಸ್ ನುಗ್ಗೇಹಳ್ಳಿ ಮತ್ತು ಬೆಂಗಳೂರಿನ ಚಿಕ್ಕಜಾಲ ಠಾಣೆಗಳಲ್ಲಿ ಪ್ರಕರಣಗಳು ಕೂಡ ದಾಖಲಾಗಿರುತ್ತದೆ. ದಿನೇಶನು ಎರಡನೇ ಮದುವೆಯಾಗಿದ್ದರಿಂದ ಅಭಿಲಾಷಳು ದ್ವೇಷವನ್ನು ಇಟ್ಟುಕೊಂಡಿದ್ದು ಏನಾದರೂ ಮಾಡಿ ದಿನೇಶನನ್ನು ಕೊಲೆ ಮಾಡಬೇಕೆಂದು ಉದ್ದೇಶವನ್ನುವಿಟ್ಟುಕೊಂಡು ಅಭಿಲಾಷಳು ದಿ:-27.10.2020 ರಂದು ದೂರವಾಣಿ ಮೂಲಕ ಕರೆ ಮಾಡಿ, ಪ್ರೀತಿಯ ನಾಟಕವಾಡಿ ಮನೆಗೆ ಬರುವಂತೆ ಮನವೊಲಿಸಿ ಸುಮಾರು ರಾತ್ರಿ 10.00 ಗಂಟೆಗೆ ಮನೆಗೆ ಬಂದ ನಂತರ ಮೃತ ದಿನೇಶನಿಗೆ ಮದ್ಯಪಾನ ಮಾಡಿಸಿ, ದಿನೇಶ ಮತ್ತು ಅಭಿಲಾಷಳೊಂದಿಗೆ ಇರುವಾಗ ಅಭಿಲಾಷಳ ತಂದೆ ಮಂಜುನಾಥನು ತಲೆಯ ಹಿಂಭಾಗಕ್ಕೆ ದೊಣ್ಣೆ ಮತ್ತು ಮಚ್ಚಿನಿಂದ ಹೊಡೆದು, ಹಾಗೂ ಅಭಿಲಾಷಳ ತಮ್ಮ ಬಸವರಾಜ ಮೃತ ದಿನೇಶನು ಕಿರುಚಾಡದ ಹಾಗೆ ಬಾಯಿಯನ್ನು ಮುಚ್ಚಿ ಹಿಡಿದು, ಅಭಿಲಾಷಳು ಕಾಲುಗಳನ್ನು ಬಿಗಿಯಾಗಿ ಹಿಡಿದು, ಕೊಲೆ ಮಾಡಿದ್ದು, ನಂತರ ಶವವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ, ಬಾಬು ೧ ಗರುಡ ಎಂಬ ಕಾರಿನ ಚಾಲಕನಾಗಿ ಬರಮಾಡಿಕೊಂಡು ಆರೋಪಿ ಮಂಜುನಾಥ ಬಾಬು @ ಗರುಡನಿಗೆ ಹಿರೀಸಾವೆ ಮಾರ್ಗವಾಗಿ ಮಟ್ಟನವಿಲೆಗೆ ಹೋಗುವಂತೆ ತಿಳಿಸಿ, ಮಾರ್ಗ ಮಧ್ಯೆ ಕಾರಿಗೆ ಡಿಸಲ್ ಹಾಕಿಸಿಕೊಂಡು ಎರಡು ಲೀಟರ್ ಪೆಟ್ರೋಲ್ ನ್ನು ಪ್ಲಾಸ್ಟಿಕ್ ಬಾಟಲಿನಲ್ಲಿ ಹೆಚ್ಚುವರಿಯಾಗಿ ಖರೀದಿಸಿ, ನಂತರ ಹಿರೀಸಾವ ಠಾಣಾ ವ್ಯಾಪ್ತಿಯ ಮಟ್ಟನವಿಲೆ ಗ್ರಾಮದ ರಮೇಶ ರವರ ಜಮೀನಿನಲ್ಲಿ ತಂದು ನಿಲ್ಲಿಸಿ, ಚಾಲಕನಿಗೆ ಹಣವನ್ನು ನೀಡಿ, ನೀನು ಬೆಂಗಳೂರಿಗೆ ಹೋಗುವಂತೆ ತಿಳಿಸಿ, ಅವನು ಹೋದ ನಂತರ ಮಂಜುನಾಥ ಎರಡು ಲೀಟರ್ ಪೆಟ್ರೋಲ್ ನ್ನು ಕಾರಿಗೆ ಸುರಿದು, ಬೆಂಕಿ ಹಚ್ಚಿ, ಶವ ಮತ್ತು ಕಾರನ್ನು ಸುಟ್ಟು ಹಾಕಿರುವುದಾಗಿ ವಿಚಾರಣೆಯ ವೇಳೆಯಲ್ಲಿ ಕೃತ್ಯದ ಬಗ್ಗೆ ಮಾಹಿತಿಯನ್ನು ನೀಡಿ ಒಪ್ಪಿಕೊಂಡಿರುತ್ತಾರೆ. ಸದರಿ ಅರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಯ ಬಗ್ಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಹೆಸರು ಮತ್ತು ವಿಳಾಸ

1] ಮಂಜುನಾಥ ಬಿನ್ ಹನುಮಂತಯ್ಯ, 55 ವರ್ಷ, 2] ಅಭಿಲಾಷ್ ಬಿನ್ ದಿನೇಶ, 22 ವರ್ಷ,

3] ಬಸವರಾಜು ಬಿನ್ ಮಂಜುನಾಥ, 21 ವರ್ಷ ದೊಡ್ಡಜಾಲ ಗಣೇಶ್ ಟೆಂಪಲ್ ಹತ್ತಿರ, ಬೆಂಗಳೂರು

ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ. ಈ ಪ್ರಕರಣವನ್ನು ಶೀಘ್ರವಾಗಿ ಪತ್ತೆ ಮಾಡಿದ ಪೊಲೀಸ್ ಉಪಾಧೀಕ್ಷಕರು ಶ್ರೀ ಬಿ.ಬಿ ಲಕ್ಷೇಗೌಡ,

ಚನ್ನರಾಯಪಟ್ಟಣ ವೃತ್ತ ಸಿ.ಪಿ.ಐ ಶ್ರೀ ಕುಮಾರ ಬಿ.ಜಿ, ಹಿರೀಸಾವೆ ಪಿ.ಎಸ್.ಐ ಶ್ರೀ ಶ್ರೀನಿವಾಸ ಮತ್ತು ಚನ್ನರಾಯಟಪ್ಪಣ ನಗರ ಠಾಣಾ ಪಿ.ಎಸ್.ಐ ವಿನೋದ್‌ ರಾಜ್‌ ಸಿಬ್ಬಂದಿಗಳಾದ 1] ಸುರೇಶ 2] ಜಯಪ್ರಕಾಶ 3] ಮಹೇಶ 4] adez 5] ಚಂದ್ರೇಶ 6] ಷಫಿ ಉರ್ ರೆಹಮಾನ್ 7] ಜವರೇಗೌಡ 8] ಕುಮಾರಸ್ವಾಮಿ ಹಾಗೂ ಸಿ.ಡಿ.ಆರ್ ವಿಭಾಗದ ಪೀರ್ ಖಾನ್, ಚಾಲಕ ನೇತೇಶ್ ಮತ್ತು ಪರಮೇಶ ರವರುಗಳು ಪ್ರಕರಣವನ್ನು ಬೇಧಿಸಿ, ಆರೋಪಿಗಳನ್ನು ಪತ್ತೆ ಮಾಡಿ, ಬಂಧಿಸುವಲ್ಲಿ ಯಶ್ವಸಿಯಾಗಿರುತ್ತಾರೆ. ಇವರುಗಳ ಕಾರ್ಯವನ್ನು ಮೆಚ್ಚಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ ಹಾಸನ ರವರು ಶ್ಲಾಘಿಸಿರುತ್ತಾರೆ.

ಈ ಪ್ರಕಟಣೆಯನ್ನು ಜಿಲ್ಲಾ ಪೊಲೀಸ್ ಕಛೇರಿಯಿಂದ ಹೊರಡಿಸಲಾಗಿದೆ.

LEAVE A REPLY

Please enter your comment!
Please enter your name here