Breaking News

ಹಾಸನ ಏರ್‌ಪೋರ್ಟ್‌ ಬಗ್ಗೆ ಪ್ರಧಾನಿಗೆ ದೇವೇಗೌಡರ ಪ್ರಸ್ತಾಪ

By Hassan News

December 14, 2022

ವದೆಹಲಿ/ಹಾಸನ : ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಚರ್ಚಿಸಿದ್ದಾರೆ . ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಚಳಿಗಾಲದ ಅಧಿವೇಶನದ ಮಧ್ಯೆಯೇ ಹಾಲಿ, ಮಾಜಿ ಪ್ರಧಾನಿಗಳು ಭೇಟಿಯಾಗಿ ಈ ಕೆಳಕಂಡ ಮಹತ್ವದ ಮಾತುಕತೆ ನಡೆಸಿರುತ್ತಾರೆ . , :

ಎಚ್.ಡಿ . ದೇವೇಗೌಡ : “ನಾನು ಇಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದೇನೆ. ನಮ್ಮ ರಾಜ್ಯದ ನೀರಾವರಿ ವಿಚಾರವನ್ನ ಪ್ರಸ್ತಾಪ ಮಾಡಿದ್ದೇನೆ. ಮುಖ್ಯವಾಗಿ ಕಾವೇರಿ, ಕೃಷ್ಣಾ ಹಾಗೂ ಮಹದಾಯಿ ನದಿ ನೀರಿನ ಹಂಚಿಕೆ ವಿಚಾರವನ್ನು ಪ್ರಸ್ತಾಪಿಸಿದ್ದೇನೆ ” ಎಂದರು

ಈ ಮೂಲಕ ನೀರಾವರಿ ಯೋಜನೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿರುವ ವಿಷಯವನ್ನ ವಿವರವಾಗಿ ಪ್ರಧಾನಿ ಮೋದಿಯವರಿಗೆ ವಿವರಿಸಿದ್ದಾರೆ. , “ಈ ಜಾಗದಲ್ಲಿ ಕುಳಿತು ತೀರ್ಮಾನಿಸೋದು ಕಷ್ಟ” ಎಂದ ಮೋದಿ , ಇನ್ನು ಈ ಜಾಗದಲ್ಲಿ ಕೂತು ತೀರ್ಮಾನ ಮಾಡೊದು ಹಿಂಸೆಯಾಗಿದೆ ದೇವೇಗೌಡ್ರೆ ಅಂತ ಪ್ರಧಾನಿ ಹೇಳಿದ್ದಾಗಿ ದೇವೇಗೌಡರು ತಿಳಿಸಿದ್ದಾರೆ. ನದಿ ನೀರಿನ ವ್ಯಾಜ್ಯಗಳ ತೀರ್ಮಾನ ಕಷ್ಟವಾಗಿದೆ. ನಮ್ಮದೆ ಸರಕಾರ ಇದ್ರೂ

ನರ್ಮದಾ ತೀರ್ಮಾನ ಕಷ್ಟವಾಗಿದೆ ಎಂದಿದ್ದಾರಂತೆ. ನಮ್ಮವರೆ ನಮಗೆ ವಿರೋಧ ಮಾಡ್ತಿದ್ದಾರೆ, ಎಲ್ಲಾ ನದಿಗಳದ್ದು ವಿವಾದಗಳಿವೆ. ಯಾವ ನಿರ್ಧಾರ ತೆಗೆದುಕೊಳ್ಳುವುದು? ಎಂದು ಪ್ರಧಾನಿ ಮೋದಿ ಅವರು ತಮ್ಮ ಸದ್ಯದ ಪರಿಸ್ಥಿತಿ ತೋಡಿಕೊಂಡರಂತೆ. , ಕುಂಚಟಿಗ ಸಮುದಾಯದ ಪರ ದೇವೇಗೌಡರ ಮನವಿ , ಇನ್ನು ರಾಜ್ಯದಲ್ಲಿ ಕುಂಚಟಿಗ ಸಮುದಾಯಕ್ಕೆ ಅನ್ಯಾಯ ಆಗಿರುವ ಬಗ್ಗೆ ವಿವರವಾಗಿ ಹೇಳಿದ್ದೇನೆ. ಕುಂಚಟಿಗ ಸಮಯದಾಯ ಕರ್ನಾಟಕದಲ್ಲಿ 6ರಿಂದ 7 ತಾಲೂಕುಗಳಲ್ಲಿದೆ. ಆದರೂ ಕುಂಚಟಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಕುಂಚಟಿಗ ಸಮುದಾಯವನ್ನು ಪ್ರತ್ಯೇಕವಾಗಿ ಗುರುತಿಸಬೇಕಿದೆ. ಕೇಂದ್ರ ಸರ್ಕಾರವು ಈ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದೇನೆ ಅಂತ ದೇವೇಗೌಡರು ತಿಳಿಸಿದರು . , ಹಾಸನ ಏರ್‌ಪೋರ್ಟ್‌ ಬಗ್ಗೆ ಪ್ರಧಾನಿಗೆ ಮನವಿ ಪ್ರಧಾನಿ ಜೊತೆ ಮಾತುಕತೆ ವೇಳೆ ಹಾಸನ ಏರ್ಪೋರ್ಟ್ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ. ಇನ್ನೂ ಏರ್ ಪೋರ್ಟ್ ಕೆಲಸ ಆಗಿಲ್ಲ. ಹೀಗಾಗಿ ಈ ಬಗ್ಗೆ ನೀವೇ ತೀರ್ಮಾನ ಮಾಡಿ ಎಂದು ಮೋದಿಯವರಿಗೆ ಕೇಳಿಕೊಂಡಿದ್ದೀನಿ ಎಂದು ಪ್ರಧಾನಿ ಭೇಟಿಯ ವಿವರಣೆಯನ್ನು ದೇವೇಗೌಡರು ನೀಡಿದ್ದಾರೆ. , ದೇವೇಗೌಡರಿಗೆ ಸೂಕ್ತ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮೋದಿ ,

ಇನ್ನು ತಾವು ಪ್ರಸ್ತಾಪಿಸಿರುವ ಎಲ್ಲಾ ವಿಷಯಗಳನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿದ್ದಾರೆ ಅಂತ ದೇವೇಗೌಡರು ಹೇಳಿದ್ದಾರೆ. ಎಲ್ಲಾ ದಾಖಲೆಗಳನ್ನು ಅವರು ಪರಿಶೀಲಿಸಿದ್ದು, ಖಂಡಿತವಾಗಿಯೂ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ದೇವೇಗೌಡರು ಮಾಧ್ಯಮಗಳಿಗೆ ಮಾಹಿತಿ ನೀಡಿದರು

Former PM HD Deve Gowda has submitted memorandum to PM Modi on these issues- Hassan Green Field airport project in Karnataka; allocation of waters of inter-state rivers Cauvery, Krishna, Mahadayi; inclusion of Kunchitiga as a sub-caste of Vokkaliga in central list of OBC