ಹೆಸರುಕಾಳು ಚಿಕ್ಕದಾದರೂ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಬಹಳ ಸಹಾಯಕಾರಿ. 

0

ಹೆಸರುಕಾಳು ನೋಡಲು ಬಹಳ ಚಿಕ್ಕದಾದರೂ ಇದರ ಉಪಯೋಗಗಳು ಆರೋಗ್ಯಕ್ಕೆ ಬಹಳ ಲಾಭಕಾರಿ. ಇದರಲ್ಲಿರುವ ಪೋಷಕಾಂಶಗಳು ನಮ್ಮ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.

          ಹೆಸರು ಕಾಳಿನಲ್ಲಿರುವ ಆಂಟಿಆಕ್ಸಿಡೆಂಟ್, ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಜಿಂಕ್ ಮತ್ತು ಫೋಲೆಟ್ ಅಂಶಗಳು ನಮ್ಮ ಆರೋಗ್ಯದ ನಿಯಂತ್ರಣದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಈ ಅಂಶಗಳು ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಸೌಂದರ್ಯಕ್ಕೂ ಬಹಳ ಉಪಯೋಗಕಾರಿ.

ಹೆಸರು ಕಾಳಿನ ಪ್ರಯೋಜನಗಳು

• ದೇಹದ ತೂಕ ಇಳಿಸಲು ಸಹಾಯಕಾರಿ:
               ಡೌನ್ ನಿಂದ ಹಲವರು ತಮ್ಮ ದೇಹದ ತೂಕವನ್ನು ಇಳಿಸಲು ಪ್ರಯತ್ನಿಸುತ್ತಿದ್ದಾರೆ, ಈ ಪ್ರಯತ್ನಕ್ಕೆ ಹೆಸರು ಕಾಳು ಸಹಾಯಕಾರಿ. ಇದರಲ್ಲಿ ಪ್ರೊಟೀನ್ ಹಾಗೂ ನಾರಿನಂಶ ಹೆಚ್ಚು ಪ್ರಮಾಣದಲ್ಲಿದೆ ಮತ್ತು ಕೊಬ್ಬಿನಾಂಶ ಬಹಳ ಕಡಿಮೆ ಪ್ರಮಾಣದಲ್ಲಿದ್ದು, ಇದು ನಮ್ಮ ದೇಹದ ಅನಗತ್ಯ ಕೊಬ್ಬಿನಂಶವನ್ನು ಕರಗಿಸುತ್ತದೆ. ಹೆಸರುಕಾಳಿನ ಸೇವನೆಯಿಂದ ನಮ್ಮ ಅನಗತ್ಯ ಹಸಿವು ಕಡಿಮೆಯಾಗುತ್ತದೆ. ಹಾಗೂ ಇದರಲ್ಲಿರುವ ಪ್ರೊಟೀನ್ ಅಂಶ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚುತ್ತದೆ.

• ದೃಷ್ಟಿ ಸಮಸ್ಯೆಗಳಿಗೆ ಸಹಾಯಕಾರಿ:
                ಈಗಿನ ಮಕ್ಕಳು ದಿನಪೂರ್ತಿ ಮೊಬೈಲ್ ಮುಂದೆ ಕೂರುವ ಅಭ್ಯಾಸಕ್ಕೆ ಹೊಂದುಕೊಂಡಿದ್ದಾರೆ.
ಹಾಗಾಗಿ ಚಿಕ್ಕವಯಸ್ಸಿನಲ್ಲೇ ದೃಷ್ಟಿ ಸಮಸ್ಯೆಗಳು ಹಲವರಲ್ಲಿ ಕಾಣಬಹುದು. ಹೆಸರುಕಾಳಿನಲ್ಲಿ ವಿಟಮಿನ್ ಎ ಹಾಗೂ ಜಿಂಕ್ ಅಂಶ ಅಧಿಕ ಪ್ರಮಾಣದಲ್ಲಿದ್ದು ಇದು ರಾತ್ರಿ ಕುರುಡು ಸಮಸ್ಯೆಗಳ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ವಿಟಮಿನ್ ಎ
ದೃಷ್ಟಿ ಸಮಸ್ಯೆಗಳಿಗೆ ಬಹಳ ಒಳ್ಳೆಯದು ಹಾಗಾಗಿ ಹೆಸರುಕಳು ಬಳಕೆಯಿಂದ ದೃಷ್ಟಿ ಸಮಸ್ಯೆಯಿಂದ ಪಾರಾಗಬಹುದು.

• ತ್ವಚೆಗೆ ಬಹಳ ಒಳ್ಳೆಯದು:
                ಸುಂದರವಾದ ತ್ವಚೆ ಎಲ್ಲರ ಆಸೆ. ಹೆಸರುಕಾಳಿನಿಂದ ಪೇಸ್ಟ್ ತಯಾರಿಸಿಕೊಂಡು, ಅದಕ್ಕೆ ಜೇನುತುಪ್ಪ, ಬಾದಾಮಿ ಎಣ್ಣೆ, ತುಪ್ಪ ಅಥವಾ ಹಾಲನ್ನು ಬೆರೆಸಿ ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ  ಕಾಂತಿಯುತವಾದ ತ್ವಚೆ ನಿಮ್ಮದಾಗುತ್ತದೆ. ನಿಮ್ಮ ಮುಖದ ಮೇಲಿರುವ ಟ್ಯನ್ ಹಾಗೂ ಮೊಡವೆಗಳು ಕೂಡ ನಿವಾರಣೆ ಗೊಳ್ಳುತ್ತದೆ.

• ಕೂದಲಿನ ಬೆಳವಣಿಗೆಗೆ ಸಹಾಯಕಾರಿ:
                       ಹಾಲಿನಲ್ಲಿರುವ ವಿಟಮಿನ್ ಅಂಶ ಕೂದಲ ಬೆಳವಣಿಗೆಗೆ ಬಹಳ ಸಹಾಯಕಾರಿ ಇದು ಇದ್ದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಪೇಸ್ಟ್ ರೀತಿ ಮಾಡಿಕೊಂಡು ಹೇರ್ ಮಾಸ್ಕನ್ನು ತಯಾರಿಸಿಕೊಂಡು ಕೂಡ ನೀವು ಕೂದಲಿಗೆ ಹಚ್ಚಿಕೊಳ್ಳಬಹುದು. ಇದರಲ್ಲಿರುವ ಅಂಟೈಆಕ್ಸಿದಂಟ್ಸ್ ವಿತಮಿಂಸ್ ಈ ನಿಮ್ಮ ಕೂದಲಿಗೆ ಬಹಳ ಸಹಾಯಕರಿ.

ಕಾಲು ಬಹಳ ರುಚಿಕರ ಹಾಗಾಗಿ ಇದನ್ನು ಸಾರಿಗೆ, ಗುಜ್ಜುಗಳಿಗೆ ಅಥವಾ ಸಲಾಡ್ ಗಳಿಗೆ ಬೆರೆಸಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಬಹಳ ಲಾಭಕಾರಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.


– ತನ್ವಿ. ಬಿ.

LEAVE A REPLY

Please enter your comment!
Please enter your name here