Holenarasipura

ಮೃತ ಮಗನ ಅಂಗಾಂಗ ದಾನ ಮಾಡಿದ ಹೆತ್ತವರು

By

September 29, 2022

ಹಾಸನ ಜಿಲ್ಲೆಯ ಹೊಳೆನರಸೀಪುರ ಅಪಘಾತದಲ್ಲಿ ಮೆದುಳು

ನಿಷ್ಕ್ರಿಯಗೊಂಡು ಮೃತಪಟ್ಟ ಮಗನ ಅಂಗಾಂಗ ದಾನ ಮಾಡುವ ಮೂಲಕ ಕರುಳ ಕುಡಿಯ ಸಾವಿನಲ್ಲೂ ಹೊಳೆನರಸೀಪುರದ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.

ಹೊಳೆನರಸೀಪುರ ತಾಲೂಕಿನ ತಿರುಮಲಾಪುರ ಗ್ರಾಮದ ಸಂಪತ್ತು ಎಂಬುವರ ಪುತ್ರ 22 ವರ್ಷದ ಸಾರ್ಗ ಎಂಬಾತ, ಹಾಸನದ ಸಾಯಿ ಗಾಮೆರ್ಂಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಸೆ.24 ರಂದು ಹಾಸನದ ಕೆಐಎಡಿಬಿ ಸರ್ಕಲ್ ನಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಸಾರ್ಗ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ ರೆ ಯುವಕನ ಮೆದುಳು ನಿಷ್ಕ್ರಿಯ ವಾಗಿರುವುದರಿಂದ ಬದುಕುವ

ಸಾಧ್ಯತೆ ಕಡಿಮೆ ಎಂದು ವೈದ್ಯರು ತಿಳಿಸಿದರು.

ಇದನ್ನು ತಿಳಿದ ಪೋಷಕರು ಮಗನ ಅಗಲಿಕೆಯ ನೋವಿನ ನಡುವೆಯೂ ಆತನ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ.

ಮಂಗಳವಾರ ರಾತ್ರಿ ಕಣ್ಣು, ಕಿಡ್ನಿ ಹಾಗೂ ಲಿವರ್ ದಾನಕ್ಕೆ ಒಪ್ಪಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾನ ಮಾಡುವ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಅಷ್ಟೇ ಅಲ್ಲ ಇತರರಿಗೆ ಮಾದರಿ ಎನಿಸಿದ್ದಾರೆ. ಅಂಗಾಂಗ ದಾನ ಮಾಡಿ ಬಡತನದಲ್ಲೂ ಹೃದಯ ಶ್ರೀಮಂತಿಕೆ ತೋರಿದ ಸಾರ್ಗ ಕುಟುಂಬದ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮೃತ ಸಾರ್ಗ ಒಂದೆಡೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರೆ ಆತನನ್ನು ಕಳೆದುಕೊಂಡ ತಂದೆ,ತಾಯಿ, ಓರ್ವ ಸಹೋದರ ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ. ಬುಧವಾರ ಬೆಳಗ್ಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗಿ ತು, ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕಸಾರ್ಗ ಅವರ ಅಂತಿಮ ದರ್ಶನ ಪಡೆಯಲು ಸ್ನೇಹಿತರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹತ್ತಾರುಗ್ರಾಮಗಳ ಜನರು ಆಗಮಿಸಿ ಕಂಬನಿ ಮಿಡಿದರು.

ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ ತಾಲ್ಲೂಕಿನ ತಿರುಮಲಪುರದ ಸಂಪತ್ ಪುತ್ರ ಸಾಗರ್ (23) ಅವರ ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಸಾವಿನಲ್ಲೂ ಸಾಗರ್ ಸಾರ್ಥಕತೆ ಮೆರೆದಿದ್ದು

ಪಿಯುಸಿ ಮುಗಿಸಿದ ಸಾಗರ್ ಹಾಸನದ ಕೈಗಾರಿಕಾ ಬಡಾವಣೆಯ ಕೈಗಾರಿಕೆಯಲ್ಲಿ ಉದ್ಯೋಗಕ್ಕೆ ಸೇರಿದ್ದು, ಸೆ.23ರಂದು ಬೈಕ್ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರನ್ನು ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಲೆಗೆ ತೀವ್ರ ಪೆಟ್ಟಾದ ಕಾರಣ ಹಿಮ್ಸ್‌ನಿಂದ ಬೆಂಗಳೂರಿಗೆ ಸ್ಥಳಾಂತರಿಸಿ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಸೆ.27ರಂದು ವೈದ್ಯರು ಘೋಷಿಸಿದ್ದರು.

ಸಾಗರ್ ಅವರ ಮಿದುಳು ನಿಷ್ಕ್ರಿಯಗೊಂಡ ಬಗ್ಗೆ ವೈದ್ಯರು ಪೋಷಕರ ಗಮನಕ್ಕೆ ತಂದಿದ್ದು, ಅಂಗಾಂಗ ದಾನ ಹಾಗೂ ಅದರ ಮಹತ್ವ ಬಗ್ಗೆ ವಿವರಿಸಿದರು. ದುಃಖದ ಸಂದರ್ಭದಲ್ಲೂ ತಂದೆ, ಸಹೋದರ ಅಂಗಾಂಗ ದಾನಕ್ಕೆ ಒಪ್ಪಿದರು.

ತಕ್ಷಣ ಜೀವನ ಸಾರ್ಥಕತೆ ತಂಡವನ್ನು ಜಾಗೃತಗೊಳಿಸಲಾಯಿತು. ಸೆ.27ರ ಮಧ್ಯರಾತ್ರಿ 12.30ರಿಂದ ಸೆ.28ರ ಬೆಳಗಿನ ಜಾವ 5 ಗಂಟೆಯವರೆಗೆ ಶಸ್ತ್ರಚಿಕಿತ್ಸೆ ನಡೆಸಿ ಅಂಗಾಂಗಗಳನ್ನು ತೆಗೆದು, ಹಲವರಿಗೆ ಜೋಡಣೆ ಮಾಡಲಾಯಿತು. ಕಿಡ್ನಿ, ಯಕೃತ್ತು ಮತ್ತು ಕಣ್ಣುಗಳನ್ನು ಸರ್ಕಾರಿ ಆಸ್ಪತ್ರೆಯ ಬಡ ರೋಗಿಗಳಿಗೆ ಅಳವಡಿಸಿದ್ದು ವಿಶೇಷವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ.ದೀಪಕ್ ಮಾಹಿತಿ ನೀಡಿದ್ದಾರೆ.